ಮಾರುತಿ ಸುಜುಕಿಯ ಬಹುನಿರೀಕ್ಷಿತ ಬಲೆನೊ ಫೇಸ್‌ಲಿಫ್ಟ್ ಬಿಡುಗಡೆಯಾಗಿದೆ. 5.45 ಲಕ್ಷ ರೂಪಾಯಿ ಬೆಲೆಯ ಈ ಕಾರು ಇದೀಗ ಭಾರಿ ಸಂಚಲನ ಮೂಡಿಸಲಿದೆ. ಈ ಕಾರಿನ ವಿಶೇಷತೆ ಹಾಗೂ ಇತರ ಮಾಹಿತಿ ಇಲ್ಲಿದೆ.
ನವದೆಹಲಿ(ಜ.28): ಮಾರುತಿ ಸುಜುಕಿ ಕಾರುಗಳಲ್ಲಿ ಬಲೆನೊ ಕಾರು ದಾಖಲೆ ಬರೆದಿದೆ. ಅತ್ಯಲ್ಪ ಅವಧಿಯಲ್ಲಿ ಗರಿಷ್ಠ ಮಾರಾಟವಾಗೋ ಮೂಲಕ ಇತರ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಭಾರಿ ಸವಾಲು ಒಡ್ಡಿದೆ. ಇದೀಗ ಮಾರುತಿ ಬಲೆನೊ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ 5.45 ಲಕ್ಷ ರೂಪಾಯಿಂದ ಆರಂಭವಾಗಲಿದೆ.
undefined
ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ಸುದೀಪ್‌ಗೆ BMW ಬೈಕ್ ಗಿಫ್ಟ್ ನೀಡಿದ ಅಭಿಮಾನಿ!
2015ರಲ್ಲಿ ಮೊದಲ ಬಾರಿಗೆ ಬಲೆನೊ ಕಾರು ಬಿಡುಗಡೆ ಮಾಡಿತ್ತು. ಇದೀಗ 4 ವರ್ಷಗಳ ಬಳಿಕ ಬಲೆನೊ ಕಾರು ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಕೇವಲ 11,000 ರೂಪಾಯಿ ನೀಡಿ ಕಾರು ಬುಕಿಂಗ್ ಮಾಡಬಹುದಾಗಿದೆ.
ಬಲೆನೊ ಫೇಸ್‌ಲಿಫ್ಟ್ ಕಾರಿನ ಬೆಲೆ (ಎಕ್ಸ್ ಶೋ ರೂಂ)
ವೇರಿಯೆಂಟ್ | ಪೆಟ್ರೋಲ್ | ಅಟೋಮ್ಯಾಟಿಕ್ | ಡೀಸೆಲ್ |
ಬಲೆನೊ ಸಿಗ್ಮಾ | 5.45 ಲಕ್ಷ ರೂ | 6.60 ಲಕ್ಷ ರೂ | |
ಬಲೆನೊ ಡೆಲ್ಟಾ | 6.16 ಲಕ್ಷ ರೂ | 7.48 ಲಕ್ಷ ರೂ | 7.31 ಲಕ್ಷ ರೂ |
ಬಲೆನೊ ಜಿಟಾ | 6.84 ಲಕ್ಷ ರೂ | 8.16 ಲಕ್ಷ ರೂ | 7.99 ಲಕ್ಷ ರೂ |
ಬಲೆನೊ ಆಲ್ಫಾ | 7.45 ಲಕ್ಷ ರೂ | 8.77 ಲಕ್ಷ ರೂ | 8.60 ಲಕ್ಷ ರೂ |
ಹೆಡ್ ಲ್ಯಾಂಪ್ ಕ್ಲಸ್ಟರ್, ಮುಂಭಾಗದ ಬಂಪರ್ ಸೇರಿದಂತೆ ಕೆಲ ಬದಲಾವಣೆಗಳೊಂದಿಗೆ ಹೊಸ ಬಲೆನೋ ಕಾರು ಬಿಡುಗಡೆಯಾಗುತ್ತಿದೆ. ಸ್ಟೈಲಿಶ್ ಫಾಗ್ ಲ್ಯಾಂಪ್, ಆಲೋಯ್ ವೀಲ್ಹ್ಸ್ ಸೇರಿದಂತೆ ಹೊರ ವಿನ್ಯಾಸದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಇನ್ನೂ ಡ್ಯಾಶ್ ಬೋರ್ಡ್ ಸೇರಿದಂತೆ ಒಳವಿನ್ಯಾಸದಲ್ಲೂ ಕೆಲ ಬದಲಾವಣೆಗಳೊಂದಿಗೆ ಬಲೆನೋ ರಸ್ತೆಗಿಳಿಯಲಿದೆ.
ಇದನ್ನೂ ಓದಿ: ರಾಜಧಾನಿಯಲ್ಲಿ ಬಾಡಿಗೆಗೆ ಎಲೆಕ್ಟ್ರಿಕ್ ಸ್ಕೂಟರ್ -ಪ್ರತಿ ಕಿ.ಮೀಗೆ 20 ಪೈಸೆ!
ನೂತನ ಬಲೆನೋ 1.2 ಲೀಟರ್ ಕೆ12 ಪೆಟ್ರೋಲ್ ಎಂಜಿನ್ ಹೊಂದಿದೆ. 83 bhp ಪವರ್ ಹಾಗೂ 115nm ಟಾರ್ಕ್ ಹೊಂದಿದೆ. ಇನ್ನು 1.3 ಲೀಟರ್ ಡೀಸೆಲ್ ಎಂಜಿನ್ ಕಾರು ಕೂಡ ಲಭ್ಯವಿದೆ. ಕಳೆದ ವರ್ಷ ಪ್ರತಿ ತಿಂಗಳು ಸರಾಸರಿ 17,000 ಕಾರುಗಳು ಮಾರಾಟವಾಗಿತ್ತು. ಇದೀಗ ಈ ದಾಖಲೆಯನ್ನ ಮತ್ತಷ್ಟು ಉತ್ತಮ ಪಡಿಸಿಕೊಳ್ಳಲು ಮಾರುತಿ ಮುಂದಾಗಿದೆ.