ಭಾರತದ ಅತೀ ದೊಡ್ಡ ಆಟೋ ಎಕ್ಸ್ಪೋ 2020 ವಿಶ್ವದ ಗಮನಸೆಳೆದಿದೆ. ಭಾರತ ಸೇರಿದಂತೆ ವಿವಿದ ದೇಶಗಳ 30ಕ್ಕೂ ಹೆಚ್ಚು ಕಂಪನಿಗಳು ಈ ಮೋಟಾರು ಶೋನಲ್ಲಿ ಪಾಲ್ಗೊಂಡಿದೆ. ಮೋಟಾರು ಶೋನ ಬೈಕ್ ವಿಭಾದಲ್ಲಿ ಸುಜುಕಿ ಕಟಾನ ಬೆಸ್ಟ್ ಬೈಕ್ ಪ್ರಶಸ್ತಿ ಗೆದ್ದುಕೊಂಡಿದೆ.
ಗ್ರೇಟರ ನೋಯ್ಡಾ(ಫೆ.11): ದಹೆಲಿ ಆಟೋ ಎಕ್ಸ್ಪೋದಲ್ಲಿ 70ಕ್ಕೂ ಹೆಚ್ಚು ವಾಹನಗಳು ಈಗಾಗಲೇ ಅನಾವರಣಗೊಂಡಿದೆ. 30ಕ್ಕೂ ಹಚ್ಚು ಕಂಪನಿಗಳು ಪಾಲ್ಗೊಂಡಿದೆ. ಸುಜುಕಿ ಮೋಟಾರ್‌ಸೈಕಲ್ ಕಟಾನ ಬೈಕ್ ಅನಾವರಣ ಮಾಡಿತ್ತು. ಇದೀಗ ದೆಹಲಿ ಮೋಟಾರು ಶೋನಲ್ಲಿ ಅನಾವರಣಗೊಂಡ ಬೆಸ್ಟ್ ಬೈಕ್ ಅನ್ನೋ ಪ್ರಶಸ್ತಿ ಪಡೆದುಕೊಂಡಿದೆ.
The icon arrives at the . Catch a glimpse of the in all its glory at our stall. Visit now! pic.twitter.com/7bqjxBOi7W
— Suzuki Motorcycle India (@suzuki2wheelers)undefined
ಇದನ್ನೂ ಓದಿ: ಒಂದೇ ದಿನ 1 ಲಕ್ಷ ಜನ ಭೇಟಿ, ದಾಖಲೆ ಬರೆದ Auto Expo 2020
ಸುಜುಕಿ GSX-S1000F ಬೈಕ್‌ನಿಂದ ಸ್ಪೂರ್ತಿ ಪಡೆದು ಸುಜುಕಿ ಕಟಾನ ಬೈಕ್ ನಿರ್ಮಾಣ ಮಾಡಲಾಗಿದೆ. 1980ರಲ್ಲಿ ಸುಜುಕಿ ಕಟಾನ ಹೆಸರಿನ ಬೈಕ್ ಹೆಚ್ಚು ಜನಪ್ರಿಯವಾಗಿತ್ತು. ಇದೇ ಹೆಸರನ್ನು ನೂತನ ಬೈಕ್‌ಗೆ ಇಡಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಅನಾವರಣಗೊಂಡಿತು ಚೀನಾ ಕಾರು, ಶುರುವಾಯ್ತು ದರ್ಬಾರು!
ಸುಜುಕಿ ಕಟಾನ ಬೈಕ್ 999 cc, 4 ಸಿಲಿಂಡರ್ ಎಂಜಿನ್ ಹೊಂದಿದ್ದು, 147 bhp ಪವರ್ ಹಾಗೂ 105 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಈ ಬೈಕ್ ಆಟೋ ಎಕ್ಸ್ಪೋ 2020ರಲ್ಲಿ ಅನಾವರಣಗೊಂಡ ಬೆಸ್ಟ್ ಬೈಕ್ ಅನ್ನೋ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.