ಹೊಂಡಾ ಡಿಯೋ BS6 ಸ್ಕೂಟರ್ ಲಾಂಚ್; ವಿನ್ಯಾಸದಲ್ಲೂ ಬದಲಾವಣೆ!

By Suvarna NewsFirst Published Feb 10, 2020, 6:45 PM IST
Highlights

ಸುಪ್ರೀಂ ಕೋರ್ಟ್ ಆದೇಶದಂತೆ ಭಾರತದಲ್ಲಿ BS6 ಎಂಜಿನ್ ಗಡವು ಸಮೀಪಿಸುತ್ತಿದೆ. ಎಪ್ರಿಲ್ 1 ರಿಂದ ನೂತನ ವಾಹನಗಳೆಲ್ಲಾ BS6 ಎಂಜಿನ್ ಹೊಂದಿರಬೇಕು. ಹೀಗಾಗಿ ಎಲ್ಲಾ ಕಂಪನಿಗಳು ತಮ್ಮ ವಾಹನಗಳನ್ನು  BS6 ಎಂಜಿನ್ ಪರಿವರ್ತಿಸಿ ಬಿಡುಗಡೆ ಮಾಡುತ್ತಿದೆ. ಇದೀಗ ಹೊಂಡಾ ಡಿಯೋ ಬಿಡುಗಡೆಯಾಗಿದೆ. ವಿಶೇಷ ಅಂದರೆ ನೂತನ ಡಿಯೋ ವಿನ್ಯಾಸದಲ್ಲೂ ಬದಲಾವಣೆ ಮಾಡಲಾಗಿದೆ. 
 

ನವದೆಹಲಿ(ಫೆ.10): ಹೊಂಡಾ ಡಿಯೋ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಡಿಯೋ  BS6 ಎಂಜಿನ್ ಡಿಯೋ, ವಿಶೇಷವಾಗಿ ವಿನ್ಯಾಸದಲ್ಲಿ ಹೊಸತನ ತರಲಾಗಿದೆ. ಟಿವಿಎಸ್ Nಟಾರ್ಕ್ ಸ್ಕೂಟರ್‌ನಿಂದ ತೀವ್ರ ಪೈಪೋಟಿ ಎದುರಿಸಿದ ಡಿಯೋ ಇದೀಗ ಹೆಚ್ಚು ಅಗ್ರೆಸ್ಸೀವ್, ಹೆಚ್ಚು ಸ್ಟೈಲೀಶ್ ಲುಕ್ ಹೊಂದಿದೆ. 

ಇದನ್ನೂ ಓದಿ: ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್; ಇಲ್ಲಿದೆ ಬೆಲೆ, ವಿಶೇಷತೆ!.

ನೂತನ ಡಿಯೋ ಆರಂಭಿಕ ಬೆಲೆ 59,990 ರೂಪಾಯಿ(ಎಕ್ಸ್ ಶೋ ರೂಂ) ಹಾಗೂ ಗರಿಷ್ಠ ಬೆಲೆ 63,340ರೂಪಾಯಿ(ಎಕ್ಸ್ ಶೋ ರೂಂ) . ಹಳೇ ಡಿಯೋಗಿಂತ ವೀಲ್ಹ್‌ಬೇಸ್ ಕೂಡ ಹೆಚ್ಚಾಗಿದೆ. 3 ವರ್ಷ ಸ್ಟಾಂಡರ್ಡ್ ವಾರೆಂಟಿ ಜೊತೆಗೆ 3 ವರ್ಷ ಹೆಚ್ಚುವರಿ  ಸೇರಿದಂತೆ ಒಟ್ಟು 6 ವರ್ಷ ವಾರೆಂಟಿ ನೀಡುತ್ತಿದೆ. 

ಇದನ್ನೂ ಓದಿ: ಹೀರೋ AE-47 ಎಲೆಕ್ಟ್ರಿಕ್ ಬೈಕ್ ಅನಾವರಣ, 160KM ಮೈಲೇಜ್!.

ನೂತನ ಡಿಯೋ ಸ್ಟಾಂಡರ್ಸ್ ಹಾಗೂ ಡಿಲಕ್ಸ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. BS6 ಎಂಜಿನ್ ಡಿಯೋ 7 ಬಣ್ಣಗಳಲ್ಲಿ ಲಭ್ಯವಿದೆ. 110 cc ಎಂಜಿನ್ ಹೊಂದಿರು ಡಿಯೋ,  7.68 bhp ಪವರ್ ಹಾಗೂ  8.79 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 

click me!