ಹೊಸ ಅವತಾರದಲ್ಲಿ ಸುಜುಕಿ ಇಂಟ್ರುಡರ್ ಬೈಕ್!

By Web DeskFirst Published Apr 6, 2019, 2:55 PM IST
Highlights

ಸುಜುಕಿ ಇಂಟ್ರುಡರ್ ಬೈಕ್ ಇದೀಗ ಅಪ್‌ಗ್ರೇಡ್ ಆಗಿದೆ. ಹಳೇ ಇಂಟ್ರುಡರ್ ಹಾಗೂ ಹೊಸ ಇಂಟ್ರುಡರ್ ಬೈಕ್‌ನಲ್ಲಿ ಕೆಲ ಬದಲಾವಣೆಗಳಿವೆ. ಗೇರ್ ಶಿಫ್ಟ್ ಸೇರಿದಂತೆ ಕೆಲ ಬದಲಾವಣೆ ಹಾಗೂ ಹೆಚ್ಚುವರಿ ಫೀಚರ್ಸ್ ಅಳವಡಿಸಿ ನೂತನ ಇಂಟ್ರುಡರ್ ಬೈಕ್ ಬಿಡುಗಡೆಯಾಗಿದೆ. ಆದರೆ ಬೆಲೆಯಲ್ಲಿ ಯಾವುದೇ ಏರಿಕೆ ಕಂಡಿಲ್ಲ. 

ನವದೆಹಲಿ(ಏ.06): ಸುಜುಕಿ ಇಂಟ್ರುಡರ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. 2019ರ ಇಂಟ್ರುಡರ್ ಬೈಕ್‌ನಲ್ಲಿ ಗೇರ್ ಶಿಫ್ಟ್ ಡಿಸೈನ್, ಬ್ರೇಕ್ ಪೆಡಲ್ ಸೇರಿದಂತೆ ಹೆಚ್ಚುವರಿ ಫೀಚರ್ಸ್‍ ಅಳವಡಿಕೆ ಮಾಡಿ ಬಿಡುಗಡೆ ಮಾಡಲಾಗಿದೆ.  ಇಷ್ಟೇ ಹೊಸ ಬಣ್ಣಗಳಲ್ಲೂ ನೂತನ ಬೈಕ್ ಲಭ್ಯವಿದೆ. ಅಪ್‌ಡೇಟ್ ವರ್ಶನ್ ಬೈಕ್ ಬೆಲೆ 1.08 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಇದನ್ನೂ ಓದಿ: ಜಾವಾ- ಜಾವಾ 42 ಬೈಕ್ ಮೈಲೇಜ್ ಬಹಿರಂಗ!

ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, LED ಲೈಟ್ಸ್, ಡಿಜಿಟಲ್ ಇನ್ಸುಸ್ಟ್ರುಮೆಂಟ್ ಕ್ಲಸ್ಟರ್, ಟ್ವಿನ್ ಎಕ್ಸಾಸ್ಟ್, ಬಕೆಟ್ ಸ್ಟೈಲ್ ಸೀಟ್, ಹಿಂಬದಿ ಸವಾರರಿಗೆ ಬ್ಯಾಕ್ ರೆಸ್ಟ್, ಬ್ಲಾಕ್ ಅಲೋಯ್ ವೀಲ್ಹ್ಸ್,  ಸಿಂಗಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೆಕಿಂಗ್ ಸಿಸ್ಟಮ್),  ಡಿಸ್ಕ್ ಬ್ರೇಕ್, ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್, ಮೋನೋ ಶಾಕ್ ಸಸ್ಪೆನ್ಶನ್ ನೂತನ ಸುಜುಕಿ ಇಂಟ್ರುಡರ್ ಬೈಕ್  ವಿಶೇಷತೆ.

ಇದನ್ನೂ ಓದಿ: KTM ಡ್ಯೂಕ್ 125 ಬೈಕ್ ಬೆಲೆ ಹೆಚ್ಚಳ- ಪರಿಷ್ಕರಿಸಿದ ಬೆಲೆ ಪಟ್ಟಿ ಬಿಡುಗಡೆ!

2019ರ ಸುಜುಕಿ ಇಂಟ್ರುಡರ್ ಬೈಕ್ 154.9 cc ಸಿಂಗಲ್ ಸಿಲಿಂಡರ್ , ಏರ್ ಕೂಲ್ಡ್, 4-ಸ್ಟ್ರೋಕ್ ಎಂಜಿನ್ ಹೊಂದಿದೆ. ಸುಜುಕಿ ಜಿಕ್ಸರ್ ಬೈಕ್‌ನಲ್ಲಿ ಇದೇ ಎಂಜಿನ್ ಬಳಸಲಾಗಿದೆ.  14 bhp ಪವರ್(@ 8000 rpm) ಹಾಗೂ 14 Nm (@ 6000 rpm)ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. 

click me!