ಫೋರ್ಡ್ ಇಕೋಸ್ಪೋರ್ಟ್ ಥಂಡರ್ ಎಡಿಶನ್ ಬಿಡುಗಡೆಯಾಗಿದೆ. ಕೆಲ ಬದಲಾವಣೆ ಹಾಗೂ ಅಪ್‌ಗ್ರೇಡ್‌ನೊಂದಿಗೆ ನೂತತನ ಕಾರು ಮಾರುಕಟ್ಟೆ ಪ್ರವೇಶಿಸಿದೆ. ಈ ಕಾರಿನ ವಿಶೇಷತೆ ಹಾಗೂ ಬೆಲೆ ಮಾಹಿತಿ ಇಲ್ಲಿದೆ.
ನವದೆಹಲಿ(ಜೂ.04): ಫೋರ್ಡ್ ಇಂಡಿಯಾ ಇಕೋಸ್ಪೋರ್ಟ್ ಕಾರನ್ನು ಅಪ್‌ಗ್ರೇಡ್ ಮಾಡಿ ಬಿಡುಗಡೆ ಮಾಡಿದೆ. ಫೋರ್ಡ್ ಇಕೋಸ್ಪೋರ್ಟ್ ಥಂಡರ್ ಎಡಿಶನ್ ಕಾರು ಮಾರುಕಟ್ಟೆ ಪ್ರವೇಶಿಸಿದೆ. ಸಬ್ ಕಾಂಪಾಕ್ಟ್ SUV ಕಾರಿನ ವಿನ್ಯಾಸ, ಆಲೋಯ್ ವೀಲ್ಹ್, ಕಾಂಟ್ರಾಸ್ಟ್ ರೂಫ್ ಸೇರಿದಂತೆ ಹಲವು ಬದಲಾವಣೆ ಮಾಡಲಾಗಿದೆ.
undefined
ಇದನ್ನೂ ಓದಿ: 50 ಸಾವಿರಕ್ಕೆ ಬುಕ್ ಮಾಡಿ MG ಹೆಕ್ಟರ್ ಕಾರು!
ಫೋರ್ಡ್ ಇಕೋಸ್ಪೋರ್ಟ್ ಥಂಡರ್ ಎಡಿಶನ್ ಪೆಟ್ರೋಲ್ ಕಾರಿನ ಬೆಲೆ 10.18 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಹಾಗೂ ಡೀಸೆಲ್ ಕಾರಿನ ಬೆಲೆ 10.68 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇಕೋಸ್ಪೋರ್ಟ್ ಟೈಟಾನಿಯಂ ವೇರಿಯೆಂಟ್ ಮಾಡೆಲ್ ಕಾರನ್ನೇ ಅಪ್‌ಗ್ರೇಡ್ ಮಾಡಿ ಥಂಡರ್ ಎಡಿಶನ್ ಕಾರಾಗಿ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆ ದಿನಾಂಕ ಬಹಿರಂಗ-482KM ಮೈಲೇಜ್!
ಇಕೋಸ್ಪೋರ್ಟ್ ಥಂಡರ್ ಎಡಿಶನ್ ಪೆಟ್ರೋಲ್ ಎಂಜಿನ್ ಕಾರು 1.5 ಲೀಟರ್-3 ಸಿಲಿಂಡರ್ ಹೊಂದಿದ್ದು, 123 Bhp ಪವರ್-150 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ. ಡೀಸೆಲ್ ಎಂಜಿನ್ 1.5 ಲೀಟರ್-4 ಸಿಲಿಂಡರ್ TDCI ಟರ್ಬೋಚಾರ್ಜಡ್ ಎಂಜಿನ್, 98.6 Bhp ಪವರ್-215 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.