50 ಸಾವಿರಕ್ಕೆ ಬುಕ್ ಮಾಡಿ MG ಹೆಕ್ಟರ್ ಕಾರು!

Published : Jun 04, 2019, 07:58 PM IST
50 ಸಾವಿರಕ್ಕೆ ಬುಕ್ ಮಾಡಿ MG ಹೆಕ್ಟರ್ ಕಾರು!

ಸಾರಾಂಶ

ಬಹುನಿರೀಕ್ಷಿತ MG ಹೆಕ್ಟರ್ ಕಾರಿನ ಬುಕಿಂಗ್ ಆರಂಭಗೊಂಡಿದೆ. ನೂತನ ಕಾರಿನ ವಿಶೇಷತೆ ಹಾಗೂ ಬುಕಿಂಗ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. 

ನವದೆಹಲಿ(ಜೂ.04): ಭಾರತದಲ್ಲಿ ಹೊಸ ಹೊಸ ಕಾರುಗಳು ಬಿಡುಗಡೆಯಾಗುತ್ತಿದೆ. ಇದೀಗ ಬಹುನಿರೀಕ್ಷಿತ MG ಮೋಟಾರ್ಸ್ ಕಾರು ಬಿಡುಗಡೆಗೆ ಸಜ್ಜಾಗಿದೆ. MG ಹೆಕ್ಟರ್ SUV ಕಾರು ಇದೇ ತಿಂಗಳ ಅಂತ್ಯದಲ್ಲಿ ಬಿಡುಗಡೆಯಾಗಲಿದೆ. ಇದೀಗ ನೂತನ ಕಾರಿನ ಬುಕಿಂಗ್ ಆರಂಭಗೊಂಡಿದೆ. ಆನ್‌ಲೈನ್ ಹಾಗೂ ಡೀಲರ್ ಬಳಿ ನೂತನ ಕಾರು ಬುಕ್ ಮಾಡಬಹುದು.

ಇದನ್ನೂ ಓದಿ: 44 ತಿಂಗಳಲ್ಲಿ ಹೊಸ ದಾಖಲೆ ಬರೆದ ಮಾರುತಿ ಬಲೆನೊ ಕಾರು!

50,000 ರೂಪಾಯಿ ಪಾವತಿಸಿ MG ಹೆಕ್ಟರ್ ಕಾರು ಬುಕ್ ಮಾಡಬಹುದಾಗಿದೆ. ನೂತನ ಕಾರು 5 ಬಣ್ಣಗಳಲ್ಲಿ ಲಭ್ಯವಿದೆ. 10 ಸ್ಪೋಕ್ ಆಲೋಯ್ ವೀಲ್ಹ್, ದೊಡ್ಡದಾದ ಔಟ್‌ಸೈಡ್ ರೇರ್ ವಿವ್ಯೂ ಮಿರರ್, ಪವರ್ ಅಡ್ಜಸ್ಟೇಬರ್ ಸೀಟ್, ಕ್ರ್ಯೂಸ್ ಕಂಟ್ರೋಲ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 360 ಡಿಗ್ರಿ ಕ್ಯಾಮರಾ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. 

ಇದನ್ನೂ ಓದಿ: ಭಾರತದಲ್ಲಿ ಟ್ರೆಂಡ್ ಆಯ್ತು ಕಾರು ಸೆಗಣಿ ಪೈಂಟ್!

MG ಹೆಕ್ಟರ್ ಕಾರು ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. 1.5 ಲೀಟರ್ ಟರ್ಬೋ ಪೆಟ್ರೋಲ್ ಹಾಗೂ 2.0 ಲೀಟರ್ FCA ಡೀಸೆಲ್ ಎಂಜಿನ್ ಕಾರು ಲಭ್ಯವಿದೆ. ನೂತನ ಕಾರಿನ ಬೆಲೆ 15 ರಿಂದ ಆರಂಭಗೊಳ್ಳಲಿದ್ದು, ಗರಿಷ್ಟ ಬೆಲೆ 20 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

PREV
click me!

Recommended Stories

Cheapest Electric Cars in India: ದೀಪಾವಳಿಗೆ ಕೇವಲ ₹4.69 ಲಕ್ಷಕ್ಕೆ ಇವಿ ಕಾರು ಮನೆಗೆ ತನ್ನಿ! 331 ಕಿ.ಮೀ ಮೈಲೇಜ್, ಇಲ್ಲಿವೆ 4 ಬೆಸ್ಟ್ ಚಾಯ್ಸ್
ಪೆಟ್ರೋಲ್ ಕಾರುಗಳಿಗೆ ಬೇಡಿಕೆ ಕಮ್ಮಿ, ಸಿಎನ್‌ಜಿ-ಇವಿ ವಾಹನಕ್ಕೆ ಜೈ ಎಂದ ಗ್ರಾಹಕರು: ಅಕ್ಟೋಬರ್ ಆಟೋ ಸೇಲ್ಸ್‌ನಲ್ಲಿ ಭಾರತೀಯರ ಹೊಸ ಟ್ರೆಂಡ್