ವೆಸ್ಪಾ ಪ್ರತಿಸ್ಪರ್ಧಿ ಸುಜುಕಿ ಸಲ್ಯೂಟೋ ಸ್ಕೂಟರ್ ಅನಾವರಣ!

By Suvarna News  |  First Published Dec 31, 2019, 7:43 PM IST

ರೆಟ್ರೋ ಸ್ಟೈಲ್ ಮೂಲಕ ಮೋಡಿ ಮಾಡಿರುವ ವೆಸ್ಪಾ ಸ್ಕೂಟರ್ ಈಗಲೂ ತನ್ನ ಬೇಡಿಕೆ ಉಳಿಸಿಕೊಂಡಿದೆ. ಇದೀಗ ವೆಸ್ಪಾಗೆ ಪ್ರತಿಸ್ಪರ್ಧಿಯಾಗಿ, ಇದೇ ರೀತಿ ಆಕರ್ಷಕ ಲುಕ್‌ನಲ್ಲಿ ಸುಜುಕಿ ಸ್ಕೂಟರ್ ಅನಾವರಣ ಮಾಡಿದೆ. ಸುಜುಕಿ ಸಲ್ಯೂಟೋ 125cc ಸ್ಕೂಟರ್ ಹೊಸ ಸಂಚಲನ ಮೂಡಿಸಲು ಸಜ್ಜಾಗಿದೆ. 
 


ತೈಪಿ(ಡಿ.31): 2020ರಲ್ಲಿ ಆಟೋಮೊಬೈಲ್ ಕ್ಷೇತ್ರ ತೀವ್ರ ಪೈಪೋಟಿ ಎದುರಿಸಲಿದೆ. ಅದರಲ್ಲೂ  ಹೊಸ ಹೊಸ ವಾಹನ ಕಂಪನಿಗಳು ಭಾರತಕ್ಕೆ ಲಗ್ಗೆ ಇಡುತ್ತಿದೆ. ಹೀಗಾಗಿ ಹೊಸ ವಾಹನ ಬಿಡುಗಡೆ ಹೆಚ್ಚು  ಸವಾಲಿನಿಂದ ಕೂಡಿದೆ. ವಿಶ್ವದಲ್ಲಿ  ಈಗಾಗಲೇ ಹಳೇ ರೆಟ್ರೋ ಶೈಲಿಯ ವೆಸ್ಪಾ ಸ್ಕೂಟರ್ ಮಾರಾಟದಲ್ಲಿ ದಾಖಲೆ ಬರೆದಿದೆ. ಇದೀಗ ಈ ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಿ ಸುಜುಕಿ ಸಲ್ಯೂಟೋ ಸ್ಕೂಟರ್ ಅನಾವರಣ ಮಾಡಿದೆ.

Tap to resize

Latest Videos

ಇದನ್ನೂ ಓದಿ: ವೆಸ್ಪಾ ಅರ್ಬನ್ ಕ್ಲಬ್ 125 ಸ್ಕೂಟರ್ ಬಿಡುಗಡೆ-5 ವೇರಿಯೆಂಟ್ ಲಭ್ಯ!

ತೈಪಿ ಮೋಟಾರು ಶೋನಲ್ಲಿ ಸುಜುಕಿ ನೂತನ ಸ್ಕೂಟರ್ ಅನಾವರಣ ಮಾಡಿದೆ. ಮೊದಲ ನೋಟಕ್ಕೆ ಸುಜುಕಿ ಸಲ್ಯೂಟೋ ವೆಸ್ಪಾ ರೀತಿಯಲ್ಲೇ ಕಾಣದಲಿದೆ. ಕೆಲ ಬದಲಾವಣೆ, ಕ್ರೋಮ್ ಫೀನಿಶ್ ಸೇರಿದಂತೆ ಹೆಚ್ಚುವರಿ ಫೀಚರ್ಸ್‌ನಿಂದ ಸಲ್ಯೂಟೋ ಸ್ಕೂಟರ್ ವೆಸ್ಪಾಗಿಂತ ಭಿನ್ನವಾಗಿದೆ.

ಇದನ್ನೂ ಓದಿ: ರೆಯೊ ಎಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ; ಬುಕಿಂಗ್ ಬೆಲೆ 1999 ರೂ!

ಲುಕ್ ಮಾತ್ರವಲ್ಲಇತರ ಸ್ಕೂಟರ್‌ಗಳಲ್ಲಿ ಇಲ್ಲದ  ಹಲವು ಫೀಚರ್ಸ್ ಸಲ್ಯೂಟೋನಲ್ಲಿದೆ. ರಿಮೂಟ್ ಕೀ, ಹೊರಭಾಗದಲ್ಲಿನ ಫ್ಯುಯೆಲ್ ಕ್ಯಾಪ್, ಸ್ಟೋರೇಜ್ ಬಿನ್, usb ಚಾರ್ಜಿಂಗ್ ಪಾಯಿಂಟ್,  ಕ್ರೋಮ್ ಸರ್ಕ್ಯುಲರ್ ಮಿರರ್, ಡಿಜಿಟಲ್ ಅನಾಲಾಗ್ ಸೇರಿದಂತೆ ಹಲವು ಹೊಸತನಗಳಿವೆ.

ಇದನ್ನೂ ಓದಿ: ಟೆಕೋ ಎಲೆಕ್ಟ್ರಾ ಸ್ಕೂಟರ್ ಬಿಡುಗಡೆ- ಬೆಲೆ 43 ಸಾವಿರ ರೂ!.

ಸುಜುಕಿ ಸಲ್ಯೂಟೋ ಸ್ಕೂಟರ್  124 cc ಏರ್ ಕೂಲ್ಡ್ ಎಂಜಿನ್ ಹೊಂದಿದ್ದು,  9.4 hp ಪವರ್ ಹಾಗೂ 10 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ತೈಪಿ ಮೋಟಾರು ಶೋನಲ್ಲಿ ಅನವರಣಗೊಂಡಿರುವ ಈ ಸ್ಕೂಟರ್ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಭಾರಕ್ಕೆ ಎಂಟ್ರಿ ಕೊಡಲಿರುವ ಈ ಸ್ಕೂಟರ್ ತನ್ನ ಹೆಸರನ್ನು ಬದಲಿಸಲಿದೆ. ಕಾರಣ ಭಾರತದಲ್ಲಿ ಸಲ್ಯೂಟೋ ಹೆಸರಿನ ಹಕ್ಕು ಯಮಹಾ ಇಂಡಿಯಾ ವಶದಲ್ಲಿದೆ. ಹೀಗಾಗಿ ಸುಜುಕಿ ಸಲ್ಯೂಟೋ ಭಾರತಗಲ್ಲಿ ಬೇರೆ ಹೆಸರನಲ್ಲಿ ಬಿಡುಗಡೆಯಾಗಲಿದೆ.

click me!