ಕಡಿಮೆ ಬೆಲೆ, ಗರಿಷ್ಠ ಮೈಲೇಜ್; ಹಿರೋ HF ಡಿಲಕ್ಸ್ ಬೈಕ್ ಬಿಡುಗಡೆ!

Suvarna News   | Asianet News
Published : Dec 31, 2019, 03:25 PM IST
ಕಡಿಮೆ ಬೆಲೆ, ಗರಿಷ್ಠ ಮೈಲೇಜ್; ಹಿರೋ HF ಡಿಲಕ್ಸ್ ಬೈಕ್ ಬಿಡುಗಡೆ!

ಸಾರಾಂಶ

ಹೀರೋ ಮೋಟಾರ್ ಕಾರ್ಪ್ ಹೊಸ ಬೈಕ್ ಬಿಡುಗಡೆ ಮಾಡಿದೆ. 2019ನೇ ವರ್ಷದ ಕೊನೆಯ ದಿನ ಬೈಕ್ ಮಾರುಕಟ್ಟೆ ಪ್ರವೇಶಿಸಿದ್ದು, ಕಡಿಮೆ ಬೆಲೆ ಹಾಗೂ ಹಲವು ವಿಶೇಷತೆ ಹೊಂದಿದೆ. 

ನವದೆಹಲಿ(ಡಿ.31):  ಹೊಸ ವರ್ಷದಲ್ಲಿ ಮಾರಾಟವಾಗುವ ಎಲ್ಲಾ ವಾಹನಗಳು BS6 ಎಂಜಿನ್ ಹೊಂದಿರಲೇಬೇಕು. ಸದ್ಯ ಬಿಡುಗಡೆಯಾಗುತ್ತಿರುವ ವಾಹನಗಳು  BS6 ಎಮಿಶನ್ ಎಂಜಿನ್ ಹೊಂದಿದೆ. ಇದೀಗ ಹೊಸ ವರ್ಷಕ್ಕೆ ಒಂದು ದಿನ ಮೊದಲು ಹೀರೋಮೋಟಾರ್ ಕಾರ್ಪ್ ಹಿರೋ HF ಡಿಲಕ್ಸ್ ಬೈಕ್ ಬಿಡುಗಡೆ ಮಾಡಿದೆ. ಇದು  BS6 ಎಂಜಿನ್ ಹೊಂದಿದೆ.

ಇದನ್ನೂ ಓದಿ: ಜಾವಾ ಪೆರಾಕ್ ಬೈಕ್ ಬುಕಿಂಗ್ ದಿನಾಂಕ ಬಹಿರಂಗ!

ನೂತನ   ಹಿರೋ HF ಡಿಲಕ್ಸ್ ಬೈಕ್ ಬೆಲೆ 57,250 ರೂಪಾಯಿ(ಎಕ್ಸ್ ಶೋ ರೂಂ). ಭಾರತದ ಎಲ್ಲಾ ಡೀಲರ್ ಬಳಿಕ ನೂತನ ಬೈಕ್ ಲಭ್ಯವಿದೆ. HF ಡಿಲಕ್ಸ್ ಬೈಕ್ ಫ್ಯುಯೆಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದ್ದು, ಕಡಿಮೆ ಇಂಧನದಲ್ಲಿ ಹೆಚ್ಚು ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.   7.94 bhp ಪವರ್ ಹಾಗೂ 8.05 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಶಾಕ್; ಭಾರತದ ವಾಹನಗಳಿಗೆ ನಿಷೇಧ!

BS6 ಎಂಜಿನ್ ಹಿರೋ  HF ಡಿಲಕ್ಸ್ ಬೈಕ್ ಹೊಸ ಗ್ರಾಫಿಕ್ಸ್ ಡಿಸೈನ್ ಹೊಂದಿದ್ದು, ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಬ್ಲಾಕ್ ಹಾಗೂ ರೆಡ್, ಬ್ಲಾಕ್ ಹಾಗೂ ಪರ್ಪಲ್, ಬ್ಲಾಕ್ ಹಾಗೂ ಗ್ರೆ ಸೇರಿದಂತೆ ಹೊಸ ಎರಡು ಬಣ್ಣಗಳಲ್ಲಿ ಬೈಕ್ ಲಭ್ಯವಿದೆ. 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ