ಕಿರಿಕ್ ಪಾರ್ಟಿ, ಉಪ್ಪಿ-2, ಅಣ್ಣಾ ಬಾಂಡ್, ರಾಜರಥದ ಹಿಂದಿನ ಶಕ್ತಿ ಕಣ್ಮರೆ

By Web Desk  |  First Published Feb 8, 2019, 11:00 PM IST

ಕಿರಿಕ್ ಪಾರ್ಟಿ ಮತ್ತು ರಾಜರಥ ಬಸ್ ಸಿನಿಮಾದಲ್ಲಿ ಇವರು ಇಲ್ಲ. ಆದರೆ ಇವರ ಪಾತ್ರ ಇದೆ. ಆ ಸಿನಿಮಾಗಳ ಯಶಸ್ಸಿನ ಹಿಂದೆ ಇವರು ಇದ್ದಾರೆ. ಆ ಕಲಾವಿದರೊಬ್ಬರು ನಮ್ಮನ್ನು ಬಿಟ್ಟು ಅಗಲಿದ್ದಾರೆ.


ಬೆಂಗಳೂರು[ಫೆ. 08] ಸ್ಯಾಂಡಲ್‌ವುಡ್‌ನಲ್ಲಿ ಹೊಸ ಇತಿಹಾಸ ಬರೆದಿದ್ದ ಕಿರಿಕರ್ ಪಾರ್ಟಿ ಚಿತ್ರದಲ್ಲಿನ ಹಳದಿ ಕಾರು ಯಾರಿಗೆ ತಾನೆ ಗೊತ್ತಿಲ್ಲ. ಚಿತ್ರದಲ್ಲಿ ಆ ಕಾರು ಸಹ ಒಂದು ಪಾತ್ರವಾಗಿತ್ತು. ಆದರೆ ಆ ಕಾರನ್ನು ಆಲ್ಟರ್ ಮಾಡಿದ್ದ ದಿಲೀಪ್ ಇಂದು ನಮ್ಮೊಂದಿಗೆ ಇಲ್ಲ.

ದಿಲೀಪ್ ಅವರಿಗೆ ಶುಕ್ರವಾರ ಸಂಜೆ ಹೃದಯಾಘಾತವಾಗಿದೆ. ಮನೆಯಿಂದ ಜಯದೇವ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾಗಿದ್ದಾರೆ. ಕಿರಿಕ್ ಪಾರ್ಟಿ ಮತ್ತು ರಾಜರಥ ಅಲ್ಲದೇ ಅಣ್ಣಾ ಬಾಂಡ್, ಉಪ್ಪಿ-2 ಸಿನಿಮಾಕ್ಕೆ ವಿಶಿಷ್ಟ ಶೈಲಿಯ ಬೈಕ್ ಸಿದ್ಧಮಾಡಿದ್ದರು. ಸರಳ ಜೀವಿಯಾಗಿದ್ದ ದಿಲೀಪ್  ಅವರನ್ನು ಕಳೆದುಕೊಂಡಿರುವ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ.

Tap to resize

Latest Videos

click me!