ಕೋಟಿ ರೂ. ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಬಿಸಾಡಿದ ಪುಣ್ಮಾತ್ಮ!

By Suvarna News  |  First Published Dec 23, 2019, 9:50 PM IST

ಕಾರು, ಬೈಕ್ ಪದೇ ಪದೇ ಕೈಕೊಡುತ್ತಿದೆ ಎಂದರೆ ನಾವೆಲ್ಲಾ ಕಾರು, ಡೀಲರ್ ಅಥವಾ ಕಾರನ್ನು ಖರೀದಿಸಲು ಹೇಳಿದವರನ್ನು ರೇಗಾಡುತ್ತಾ ದಿನ ದೂಡುತ್ತೇವೆ. ಇನ್ನು ಹೆಚ್ಚೆಂದರೆ ಡೀಲರ್ ಬಳಿ ತೆರಳಿ ರಂಪಾಟ ಮಾಡುತ್ತೇವೆ. ಕೇಸ್ ದಾಖಲಿಸುತ್ತೇವೆ,  ಅಥವಾ ಈ ಕಾರಿನ ಸಹವಾಸವೇ ಸಾಕು ಎಂದು ಮಾರಾಟ ಮಾಡಿ, ಬೇರೆ ಕಾರನ್ನು ಖರೀದಿಸುತ್ತೇವೆ. ಇಲ್ಲೊಬ್ಬ ಅಸಾಮಿ ಖರೀದಿಸಿದ ಹೊಸ ಕಾರು ಸರಿಯಾಗಿಲ್ಲ ಎಂದು ಹೇಳಿ ಪುಡಿ ಪುಡಿ ಮಾಡಿದ ಘಟನೆ ವರದಿಯಾಗಿದೆ. 
 


ರಷ್ಯಾ(ಡಿ.23): ಪಿತ್ತ ನೆತ್ತಿಗೇರಿದರೆ ಹೆಚ್ಚೆಂದರೆ ಕೈಯಲ್ಲಿದ್ದ ಗ್ಲಾಸ್, ಬ್ಯಾಗ್, ಹೆಲ್ಮೆಟ್ ಬಿಸಾಡಿ ಆಕ್ರೋಶ ವ್ಯಕ್ತಪಡಿಸಿದವರನ್ನು ನೋಡಿದ್ದೇವೆ. ಇನ್ನು ಹೆಚ್ಚಿನ ಕೋಪಗೊಂಡ ವ್ಯಕ್ತಿಗಳು ಮೊಬೈಲ್ ಬಿಸಾಡಿದ ಉದಾಹರಣೆಗಳು ಇವೆ. ಆದರೆ ಇಲ್ಲೊಬ್ಬ ಅಸಾಮಿ ಅಸಮಧಾನದಿಂದ  ಸರಿಸುಮಾರು 2.5 ಕೋಟಿ ರೂಪಾಯಿ(ಭಾರತದ ಬೆಲೆ) ಬೆಲೆಯ ತನ್ನ ಮರ್ಸಡೀಸ್ ಬೆಂಜ್ AMG G63 ಕಾರನ್ನು ಹೆಲಿಕಾಪ್ಟರ್ ಮೂಲಕ ಬಿಸಾಡಿ ಪುಡಿ ಪುಡಿ ಮಾಡಿದ್ದಾನೆ.

ಇದನ್ನೂ ಓದಿ: ಕಾರಿನ ನಂಬರ್ ಪ್ಲೇಟ್‌ಗೆ 60 ಕೋಟಿ ರೂ ಖರ್ಚು ಮಾಡಿದ ಭಾರತೀಯ ಉದ್ಯಮಿ!.

Latest Videos

undefined

ರಷ್ಯಾದ ಈ ಮಹಾಶೂರನ ಹೆಸರು ಇಗೋರ್ ಮೊರಾಝ್. ಈತ 2018ರ ಅಕ್ಟೋಬರ್‌ನಲ್ಲಿ 270, 000 ಯುಎಸ್ ಡಾಲರ್ ನೀಡಿ ಮರ್ಸಡೀಸ್ ಬೆಂಜ್ AMG G63 ಕಾರನ್ನು ಖರೀದಿಸಿದ್ದ. ಭಾರತೀಯ ರೂಪಾಯಿಯಲ್ಲಿ ಹೇಳುವುದಾದದರೆ 1.92 ಕೋಟಿ ರೂಪಾಯಿ ನೀಡಿ SUV ಕಾರು ಖರೀದಿಸಿದ್ದ. ಹೊಸ ಕಾರಾದರೂ ಪ್ರತಿ ಬಾರಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು ಅನ್ನೋದು ಇಗೋರ್ ಮೊರಾಝ್ ಆರೋಪ.

ಇದನ್ನೂ ಓದಿ: ಆಧುನಿಕ ಬಾಹುಬಲಿ; ನಡು ರಸ್ತೆಯಲ್ಲಿದ್ದ ಸ್ವಿಫ್ಟ್ ಕಾರನ್ನೇ ಎತ್ತಿ ಬದಿಗಿಟ್ಟ ಚಾಲಕ!.

ಸರಿಸುಮಾರು  ಒಂದೂವರೆ ವರ್ಷದಲ್ಲಿ ಕಾರು ಗ್ಯಾರೇಜ್‌ನಲ್ಲಿ ಕೊಳೆತದ್ದೇ ಹೆಚ್ಚು. ಪ್ರತಿ ಬಾರಿ ಡೀಲರ್ ಬಳಿ ಹೋಗುತ್ತಿದ್ದ ಕಾರಣ, ಸರಿ ಮಾಡಿಕೊಡಲು ನಿರಾಕರಿಸಿದ್ದಾರೆ. ಬೇಸತ್ತ ಇಗೋರ್ ಮೊರಾಝ್, ಕಾರನ್ನೇ ಪುಡಿ ಮಾಡಲು ನಿರ್ಧರಿಸಿದ್ದಾನೆ. ಇದಕ್ಕಾಹಿ ಹೆಲಿಕಾಪ್ಟರ್ ಬುಕ್ ಮಾಡಿದ್ದಾನೆ. ಬಳಿಕ ಹಿಮಚ್ಚಾದಿತ ಪ್ರದೇಶಕ್ಕೆ ತೆರಳಿ, ಹೆಲಿಕಾಪ್ಟರ್‌ಗೆ ತನ್ನ ಕಾರನ್ನು ಕಟ್ಟಿದ್ದಾನೆ.

ಬಳಿಕ 1,000 ಅಡಿ ಎತ್ತರದಿಂದ ಹೆಲಿಕಾಪ್ಟರ್‌ನಲ್ಲಿ ಕಟ್ಟಿದ್ದ ಕಾರನ್ನು ಬಿಚ್ಚಿ ಕೆಳಕ್ಕೆ ಹಾಕಲಾಗಿದೆ. ಕಾರು ರಭಸವಾಗಿ ನೆಲಕ್ಕೆ ಅಪ್ಪಳಿಸಿ ಪುಡಿ ಪುಡಿಯಾಗಿದೆ. ಈ ವೇಳೆ ಮೊರಾಝ್ ಕೆಳಗೆ ಕುಳಿತು ತನ್ನ ಕಾರು ಪುಡಿ ಪುಡಿಯಾಗುವುದನ್ನು ನೋಡಿ ಆನಂದಿಸಿದ್ದಾನೆ. ಸಂಪೂರ್ಣ ಘಟನೆಯ ವಿಡಿಯೋ ಕೂಡ ಮಾಡಲಾಗಿದೆ.

ಇದನ್ನೂ ಓದಿ: ಕಾಲೇಜು ಹುಡುಗಿಯರ ಗೋವಾ ಟ್ರಿಪ್; ಬಸ್ ಚಾಲಕನ ಲೈಸೆನ್ಸ್ ರದ್ದು

ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಸಲಿಗೆ ಕಾರಿನಲ್ಲಿ ಯಾವುದೇ ದೋಷ ಇರಲಿಲ್ಲ. ತಾನು ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಬೇಕೆಂಬ ಉದ್ದೇಶದಿಂದ ಮೊರಾಝ್ ಈ ರೀತಿ ಮಾಡಿದ್ದಾನೆ ಅನ್ನೋದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ.

 

click me!