ವಿರಾಟ್ ಕೊಹ್ಲಿ ಆಡಿ ಕಾರು ನಿಮ್ಮದಾಗಿಸಿಕೊಳ್ಳಲು ಇದೆ ಅವಕಾಶ!

By Suvarna News  |  First Published Dec 23, 2019, 8:31 PM IST

ಸ್ಟಾರ್ ಕ್ರಿಕೆಟಿಗರು ಹಲವು ಬಾರಿ ತಮ್ಮ ಜರ್ಸಿ, ಬ್ಯಾಟ್, ಹೆಲ್ಮೆಟ್, ಬಾಲ್, ಗ್ಲೌಸ್ ಸೇರಿದಂತೆ ಹಲವು ವಸ್ತುಗಳನ್ನು ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ಕ್ರಿಕೆಟಿಗರು ಬಳಸಿದ ವಸ್ತುಗಳನ್ನು ಅಭಿಮಾನಿಗಳಿಗೆ ತಮ್ಮ ಮನೆಯಲ್ಲಿಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದೀಗ ವಿರಾಟ್ ಕೊಹ್ಲಿಯ ಆಡಿ A8L ಕಾರು ನಿಮ್ಮದಾಗಿಸಿಕೊಳ್ಳಲು ಅತ್ಯುತ್ತಮ ಅವಕಾಶ ಒಂದು ಒದಗಿ ಬಂದಿದೆ. 


ದೆಹಲಿ(ಡಿ.23): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಬ್ಯಾಟ್, ಗ್ಲೌಸ್, ಜರ್ಸಿಯನ್ನೇ ಅಮೂಲ್ಯವಾಗಿ ಕಾಪಾಡುವ ಅಭಿಮಾನಿಗಳು ಇದೀಗ ಕೊಹ್ಲಿ ಓಡಾಡುತ್ತಿದ್ದ, ಕೊಹ್ಲಿ ಚಲಾಯಿಸಿದ, ಕೊಹ್ಲಿ ಪ್ರೀತಿಯಿಂದ ಖರೀದಿಸಿದ ಆಡಿ A8L ಕಾರು ನಿಮ್ಮದಾಗಿಸಿಕೊಳ್ಳುವ ಅವಕಾಶವಿದೆ ಅಂದರೆ ಯಾರು ತಾನೇ ಬೇಡ ಎನ್ನಲು ಸಾಧ್ಯ ಹೇಳಿ. ಖಂಡಿತ ಹಿಂದೆ ಮುಂದೆ ನೋಡದೆ OK ಹೇಳಿಬಿಡುತ್ತಾರೆ. 

Tap to resize

Latest Videos

undefined

ಇದನ್ನೂ ಓದಿ: ವಿರಾಟ್ ಕೊಹ್ಲಿ ನೆಚ್ಚಿನ ಆಡಿ ಕಾರಿನ ಈಗಿನ ಪರಿಸ್ಥಿತಿ ಶೋಚನೀಯ- ಕಾರಣವೇನು?

 ಆದರೆ ಕೊಹ್ಲಿಯ ಆಡಿ A8L ಕಾರು ನಿಮ್ಮದಾಗಿಸಿಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ. ಕಾರಣ ಕೊಹ್ಲಿ 2015ರಲ್ಲಿ ಬರೋಬ್ಬರಿ 1.87 ಕೋಟಿ ರೂಪಾಯಿ ನೀಡಿ ಖರೀದಿಸಿದ  A8L ಕಾರನ್ನು ಮಾರಾಟಕ್ಕಿಟ್ಟಿದ್ದಾರೆ. ಕೊಹ್ಲಿ ಹೇಳಿರುವ ಬೆಲೆ 75 ಲಕ್ಷ ರೂಪಾಯಿ. W12 ಎಂಜಿನ್ ಹೊಂದಿರುವ ಈ ಕಾರು, ಹರ್ಯಾಣ ರಿಜಿಸ್ಟ್ರೇಶನ್ ಹೊಂದಿದೆ. ಇಷ್ಟೇ ಅಲ್ಲ ಕೊಹ್ಲಿ ಫಸ್ಟ್ ಒನರ್.

ಇದನ್ನೂ ಓದಿ: ತಂದೆ ಹುಟ್ಟುಹಬ್ಬಕ್ಕೆ ಮಗನಿಂದ ಆಡಿ ಕಾರು ಸರ್ಪ್ರೈಸ್ ಗಿಫ್ಟ್

ಇಲ್ಲೀವರೆಗೆ ಈ ಕಾರು ಕೇವಲ 8,000 ಕಿ.ಮೀ ಪ್ರಯಾಣಿಸಿದೆ. ಅತ್ಯುತ್ತಮ ಕಂಡೀಷನ್‌ನಲ್ಲಿದ್ದು, ಇನ್ಶೂರೆನ್ಸ್, ಎಮಿಶನ್ ಸೇರಿದಂತೆ ಎಲ್ಲಾ ದಾಖಲೆಗಳು ಪಕ್ಕಾ ಇದೆ. ಕಾರಿನ ಬಾಡಿಯಲ್ಲಿ ಯಾವುದೇ ಸ್ಕ್ರಾಚ್, ಡೆಂಟ್ ಇಲ್ಲ. 75 ಲಕ್ಷ ರೂಪಾಯಿ ನೀಡಿ ವಿರಾಟ್ ಕೊಹ್ಲಿಯ ಕಪ್ಪು ಬಣ್ಣದ ಆಡಿ A8L ಕಾರು ನಿಮ್ಮದಾಗಿಸಿಕೊಳ್ಳ ಬಹುದು.

ಜರ್ಮನ್ ಮೂಲದ ಆಡಿ ಕಾರಿಗೆ ಭಾರತದಲ್ಲಿ ವಿರಾಟ್ ಕೊಹ್ಲಿ ರಾಯಭಾರಿ. ಹೀಗಾಗಿ ಕೊಹ್ಲಿ ಕಾರು ಸಂಗ್ರಹದಲ್ಲಿ ಹೆಚ್ಚಿನ ಕಾರುಗಳೆಲ್ಲಾ ಆಡಿ. ಇದೀಗ 2015ರ ಕಾರು ಮಾರಾಟ ಮಾಡಿ ಹೊಸ ಕಾರು ಖರೀದಿಸಲು ಕೊಹ್ಲಿ ಮುಂದಾಗಿದ್ದಾರೆ.

click me!