
ಬೆಂಗಳೂರು(ನ.14): ರಾಯಲ್ ಎನ್‌ಫೀಲ್ಡ್ ಸಂಸ್ಥೆ ಇಂಟರ್‌ಸೆಪ್ಟರ್ 650 ಹಾಗೂ ಕಾಂಟಿನೆಂಟಲ್ ಜಿಟಿ 650 ಎಂಬ 2 ನೂತನ ಬೈಕ್ ಬಿಡುಗಡೆಯಾಗಿದೆ. ಹಲವು ವಿಶೇಷತೆಗಳನ್ನೊಳಗೊಂಡಿರುವ ಈ ಬೈಕ್ ಬೆಲೆ ಕೂಡ ಬಹಿರಂಗವಾಗಿದೆ.
ನೂತನ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಬೆಲೆ 2.34 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ), ಕಾಂಟಿನೆಂಟಲ್ ಜಿಟಿ 650 ಬೆಲೆ 2.49 ಲಕ್ಷರೂಪಾಯಿ(ಎಕ್ಸ್ ಶೋ ರೂಂ). ಕಾಂಟಿನೆಂಟಲ್ ಜಿಟಿ 650 ಬೈಕ್ ರೇಸ್ ಲುಕ್ ಹೊಂದಿದೆ. ಫ್ಲಾಟ್ ಹಾಂಡ್ಲ್‌ಬಾರ್, ಮಸ್ಕುಲರ್ ಟ್ಯಾಂಕ್ ಹೊಂದಿದೆ . ಬೈಕ್ ತೂಕ 198 ಕೆಜಿ. ಇನ್ನು 535 ಸಿಸಿ ಎಂಜಿನ್ ಹೊಂದಿದೆ.
ಎರಡೂ ಬೈಕ್ ತಾಂತ್ರಿಕತೆ ಹಾಗೂ ಎಂಜಿನ್‌ನಲ್ಲಿ ಸಾಮ್ಯತೆ ಇದೆ. ಏರ್ ಆಯಿಲ್ ಕೂಲ್‌ಡ್ ಫೋರ್ ಸ್ಟ್ರೋಕ್ ಎಂಜಿನ್ ಹೊಂದಿರುವ ಈ ಬೈಕ್, 47 bhp ಪೀಕ್ ಪವರ್, 52 Nm ಟಾರ್ಕ್ ಉತ್ಪಾದಿಸಲಿದೆ. 6 ಸ್ವೀಡ್ ಮ್ಯಾನ್ಯುಯೆಲ್ ಗೇರ್‌ಬಾಕ್ಸ್ ಹೊಂದಿದೆ.
ಮುಂಭಾಗದ ಚಕ್ರ 320mm ಡಿಸ್ಕ್, ಹಿಂಬಂದಿ ಚಕ್ರ 240mm ಡಿಸ್ಕ್ ಹೊಂದಿದೆ. ಡ್ಯುಯೆಲ್ ಚಾನೆಲ್ ಎಬಿಎಸ್ ಬ್ರೇಕ್ ಸಿಸ್ಟಮ್, ಹಾಗೂ 41 mm ಟೆಲಿಸ್ಕೋಪಿಕ್ ಸಸ್ಪೆನ್ಶನ್ ಹೊಂದಿದೆ. ಎರಡು ಬೈಕ್‌ಗಳು 174 mm ಗ್ರೌಂಡ್ ಕ್ಲೀಯರೆನ್ಸ್ ಹೊಂದಿದೆ.