ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವವರಿಗೆ ಇಲ್ಲಿದೆ 5 ಟಿಪ್ಸ್!

By Web Desk  |  First Published Nov 14, 2018, 7:42 PM IST

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಗೊಂದಲ ಭಯ ಸಹಜ. ಹೀಗಾಗಿ ಬಳಸಿದ ಕಾರು ಖರೀದಿಸಲು ಹೊರಟಿರುವವರಿಗೆ ಇಲ್ಲಿ ಕೆಲ ಟಿಪ್ಸ್ ನೀಡಲಾಗಿದೆ. 
 


ಬೆಂಗಳೂರು(ನ.14): ಹೊಸ ಕಾರು ದುಬಾರಿ, ಹಳೇ ಕಾರಿನ ಕಂಡೀಷನ್ ಹೇಗಿದೆ ಅನ್ನೋ ಭಯ. ಇದು ಸೆಕೆಂಡ್‌ ಹ್ಯಾಂಡ್ ಕಾರು ಖರೀದಿಸವ ಬಹುತೇಕರಿಗೆ ಎದುರಾಗೋ ಸಮಸ್ಯೆ. ಹಳೇ ಕಾರು ಖರೀದಿಸುವಾಗ ಹೆಚ್ಚಿನ ಎಚ್ಚರ ವಹಿಸಬೇಕು ಅನ್ನೋದರಲ್ಲಿ ಎರಡು ಮಾತಿಲ್ಲ. ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವವರಿಗೆ ಇಲ್ಲಿ ಕೆಲ ಟಿಪ್ಸ್ ನೀಡಲಾಗಿದೆ.  

1 ಮಾರುಕಟ್ಟೆ ಬೆಲೆ ಅರಿತುಕೊಳ್ಳಿ
ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಇಂತಿಷ್ಟೇ ಬೆಲೆ ಎಂಬ ನಿಯಮವಿಲ್ಲ. ಅಥವಾ MSRP ಟ್ಯಾಗ್‌ಗಳಿಲ್ಲ.  ಡೀಲರ್ ಅಥವ ಮಾರಾಟಗಾರರು ಹೇಳೋ ಬೆಲೆ ಮೇಲೆ ಮಾರಾಟ ನಡೆಯುತ್ತೆ. ಹೀಗಾಗಿ ನೀವು ಖರೀದಿಸಲು ಹೊರಟಿರೋ ಸೆಕೆಂಡ್ ಹ್ಯಾಂಡ್ ಕಾರಿನ ಮಾರುಕಟ್ಟೆ ಬೆಲೆಯನ್ನ ಅರಿತುಕೊಳ್ಳಿ. ಬಳಿಕ ಮಾರಾಟಗಾರ/ಡೀಲರ್ ಹೇಳಿದ ಬೆಲೆಯನ್ನ ಪರಿಶೀಲಿಸಿ.

Tap to resize

Latest Videos

2 ಸರ್ವೀಸ್ ಇತಿಹಾಸ ಪರಿಶೀಲಿಸಿ
ನೀವು ಖರೀದಿಸಲು ಹೊರಟಿರುವ ಕಾರಿನ ಸರ್ವೀಸ್ ಇತಿಹಾಸ ಪರಿಶೀಲಿಸಿ. ಇತರ ವರ್ಕ್ ಶಾಪ್‌ಗಳಲ್ಲಿ ಕಾರು ರಿಪೇರಿ ಮಾಡಿದ್ದಾರ? ಅಥವಾ ಶೋ ರೂಂಗಳಲ್ಲೇ ಸರ್ವೀಸ್ ಮಾಡಿಸಲಾಗಿದೆಯೇ ಅನ್ನೋದನ್ನ ಸರ್ವೀಸ್ ಹಿಸ್ಟರಿ ಮೂಲಕ  ಪರಿಶೀಲಿಸಿ. ಇಷ್ಟೇ ಅಲ್ಲ ಕಾರಿನ ವಿಮೆ ಬಳಸಲಾಗಿದೆಯಾ? ಅನ್ನೋದನ್ನ ಮುಖ್ಯವಾಗಿ ಪರಿಶೀಲಿಸಿ.

3 ಟೆಸ್ಟ್ ಡ್ರೈವ್ ಮಾಡಿ
ಟೆಸ್ಟ್ ಡ್ರೈವ್ ಹೊಸ ಕಾರಿಗೆ ಮಾತ್ರ ಸೀಮಿತವಲ್ಲ. ಹಳೇ ಕಾರು ಖರೀದಿಸುವ ಮುನ್ನ ಟೆಸ್ಟ್ ಡ್ರೈವ್ ಮಾಡಲೇ ಬೇಕು. ಕಾರಿನ ಎಂಜಿನ್, ಕಾರು ಬಳಸಿದ ರೀತಿ, ಇಗ್ನೀಷನ್, ಮೈಲೇಜ್ ಸೇರಿದಂತೆ ಸೂಕ್ಷ್ಮ ವಿಚಾರಗಳ ಕುರಿತು ಹೆಚ್ಚಿನ ಗಮನ ಹರಿಸಬೇಕು.

4 ಕಾರಿನ ದಾಖಲೆ ಪರಿಶೀಲಿಸಿ
ಕಾರಿನ ರಿಜಿಸ್ಟ್ರೇಶನ್, ಎಮಿಶನ್ ಟೆಸ್ಟ್, ಇನ್ಶೂರೆನ್ಸ್ ಒರಿಜಿನಲ್ ಕಾಪಿ, ವಾರೆಂಟ್ ಕಾರ್ಡ್, ಬ್ಯಾಟರಿ, ಟೈಯರ್, ವಾಹನ ಪ್ರಯಾಣಿಸಿದ ಕಿಲೋಮೀಟರ್, ಕಾರಿನ ಲೋನ್ ಇದ್ದರೆ ಅಥವಾ ಮುಗಿದಿರುವ ಸರ್ಟಿಫಿಕೇಶನ್(ಹೈಪೋಥಿಕೇಶನ್) ಸೇರಿದಂತೆ ಕಾರಿನ ಡಾಕ್ಯುಮೆಂಟ್ ಪರಿಶೀಲಿಸಿ.

5 ಡೀಲರ್,ಮಾರಾಟಗಾರರ ಮಾತಿಗೆ ಮರುಳಾಗಬೇಡಿ
ಕಾರು ಮಾರಾಟಗಾರ ಅಥವಾ ಡೀಲರ್ ಹೇಳೋ ಮಾತಿಗೆ ಮರುಳಾಗಬೇಡಿ. ಆಫರ್, ಕಡಿಮೆ ಬೆಲೆ, ಅತ್ಯುತ್ತಮ ಕಾರು, ನಿಮಗೆ ಸೂಕ್ತ.. ಈ ರೀತಿ ಮಾತುಗಳಿಗೆ ಮರುಳಾಗಬೇಡಿ. ನಿಮ್ಮ ಬಜೆಟ್, ನಿಮ್ಮ ಅವಶ್ಯಕತೆ, ಕಾರಿನ ಗುಣಮಟ್ಟ, ಮಾಡೆಲ್, ಖರ್ಚು ವೆಚ್ಚದ ಕುರಿತು ಗಮನದಲ್ಲಿಡಿ.

click me!