ರಾಯಲ್ ಎನ್‌ಫೀಲ್ಡ್ ಸಿಗ್ನಲ್ಸ್ 350 ಬೈಕ್‌ಗೆ ಭಾರತೀಯ ಸೇನೆಯೇ ಸ್ಪೂರ್ತಿ!

By Web DeskFirst Published Nov 2, 2018, 6:18 PM IST
Highlights

ಭಾರತೀಯ ಸೇನೆ ಜೊತೆ ಅವಿನಾಭಾವ ಸಂಬಂಧವಿರುವ ರಾಯಲ್ ಎನ್‌ಫೀಲ್ಡ್ ಬೈಕ್ ಕಳೆದ ಆಗಸ್ಟ್‌ನಲ್ಲಿ ಸಿಗ್ನಲ್ಸ್ 350 ಬೈಕ್ ಬಿಡುಗಡೆ ಮಾಡಿತ್ತು. ಸೇನೆಯಿಂದ ಸ್ಪೂರ್ತಿ ಪಡೆದಿರುವ ಈ ಬೈಕ್ ಪರ್ಫಾಮೆನ್ಸ್ ಹೇಗಿದೆ? ಇಲ್ಲಿದೆ.

ನವದೆಹಲಿ(ನ.02): ಭಾರತೀಯ ಸೇನೆಗೂ ರಾಯಲ್ ಎನ್‌ಫೀಲ್ಡ್ ಬೈಕ್‌ಗೂ ಅವಿನಾಭಾವ ಸಂಬಂಧವಿದೆ. 1952ರಿಂದ  ಭಾರತೀಯ ಸೇನೆ ಜೊತೆ ರಾಯಲ್ ಎನ್‌ಫೀಲ್ಡ್ ಕೈಜೋಡಿಸಿದೆ.  ಹೀಗಾಗಿ ಕಳೆದ ಆಗಸ್ಟ್‌ನಲ್ಲಿ ಭಾರತೀಯ ಸೇನೆಯಿಂದ ಸ್ಪೂರ್ತಿ ಪಡೆದ ರಾಯಲ್ ಎನ್‌ಫೀಲ್ಡ್ ಸ್ಪೆಷಲ್ ಎಡಿಶನ್ ಸಿಗ್ನಲ್ಸ್ 350 ಬೈಕ್ ಬಿಡುಗಡೆ ಮಾಡಿದೆ.

ರಾಯಲ್ ಎನ್‌ಫೀಲ್ಡ್ ಸಿಗ್ನಲ್ಸ್ 350 ಸ್ಪೆಷಲ್ ಎಡಿಶನ್ ಬೈಕ್ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಏರ್‌ಬೊರ್ನ್ ಬ್ಲೂ ಹಾಗೂ ಸ್ಟೊರ್ಮ್‌ರೈಡರ್ ಸ್ಯಾಂಡ್ ಕಲರ್‌ಗಳಲ್ಲಿ ನೂತನ ರಾಯಲ್ ಎನ್‌ಫೀಲ್ಡ್ ಲಭ್ಯವಿದೆ.

ಸ್ಪೆಷಲ್ ಎಡಿಶನ್ ಈ ಬೈಕ್‌ಗಳಿಗೆ ಆರ್ಮಿ ಲುಕ್ ನೀಡಲಾಗಿದೆ. ಟ್ಯಾಂಕ್ ಮೇಲಿನ ಸ್ಟಿಕರ್ ಸೇರಿದಂತೆ ಹೊರ ವಿನ್ಯಾಸದಲ್ಲಿ ಅಗ್ರೆಸ್ಸಿವ್‌ನೆಸ್ ನೀಡಲಾಗಿದೆ. ಇನ್ನು ಡ್ಯುಯೆಲ್ ಚಾನೆಲ್ ಎಬಿಎಸ್ ಬ್ರೇಕ್ ಸಿಸ್ಟಮ್ ನೀಡಲಾಗಿದೆ. 

ನೂತನ ರಾಯಲ್ ‌ಎನ್‌ಪೀಲ್ಡ್ ಸಿಗ್ನಲ್ಸ್ 350 ಬೆಲೆ 1.61 ಲಕ್ಷ(ಎಕ್ಸ್ ಶೋ ರೂಂ). ಆಗಸ್ಟ್‌ನಿಂದಲೇ ಈ ಬೈಕ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಕ್ಲಾಸಿಕ್ 350 ಬೈಕ್ ಎಂಜಿನ್ ಹಾಗೂ ಸಿಗ್ನಲ್ಸ್ 350 ಎಂಜಿನ್‌ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಎಬಿಎಸ್ ಹಾಗೂ ವಿನ್ಯಾಸದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಹೀಗಾಗಿ ಕ್ಲಾಸಿಕ್ 350 ಬೈಕ್‌ಗಿಂತ ಬೆಲೆ ಹೆಚ್ಚಾಗಿದೆ.
 

click me!