ಜನವರಿಯಲ್ಲಿ ನೂತನ ಗ್ರ್ಯಾಂಡ್ ಐ10 ಕಾರು ಬಿಡುಗಡೆ-ಬೆಲೆ ಎಷ್ಟು?

Published : Nov 02, 2018, 05:26 PM ISTUpdated : Nov 02, 2018, 07:42 PM IST
ಜನವರಿಯಲ್ಲಿ ನೂತನ ಗ್ರ್ಯಾಂಡ್ ಐ10 ಕಾರು ಬಿಡುಗಡೆ-ಬೆಲೆ ಎಷ್ಟು?

ಸಾರಾಂಶ

ಹ್ಯುಂಡೈ ಗ್ರ್ಯಾಂಡ್ ಐ10 ಕಾರು ಮತ್ತೆ ಬಿಡುಗಡೆಯಾಗುತ್ತಿದೆ. ಹೆಚ್ಚುವರಿ ಫೀಚರ್ಸ್, ಹೊಸ ವಿನ್ಯಾಸಗಳೊಂದಿಗೆ ಹೊಸ ಕಾರು ಬಿಡುಗಡೆಯಾಗುತ್ತಿದೆ.  ಹೆಚ್ಚುವರಿ ಫೀಚರ್ಸ್ ಹಾಗೂ ಮೈಲೇಜ್ ನೀಡಬಲ್ಲ ಗ್ರ್ಯಾಂಡ್ ಐ10 ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಬೆಂಗಳೂರು(ನ.02): ಹ್ಯುಂಡೈ ಕಾರು ಸಂಸ್ಥೆಯ ಫೇವರಿಟ್ ಸೆಗ್ಮೆಂಟ್ ಹ್ಯುಂಡೈ ಗ್ರ್ಯಾಂಡ್ ಐ10 ಕಾರು ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ನೂತನ ಐ10 ಕಾರು ಹೆಚ್ಚುವರಿ ಫೀಚರ್ಸ್ ಹಾಗೂ ಹಲವು ವಿಶೇಷತೆ ಹೊಂದಿದೆ.

ಮಾರುತಿ ಸುಜುಕಿ ಸ್ವಿಫ್ಟ್, ಫೋಕ್ಸ್‌ವ್ಯಾಗನ್ ಪೋಲೋ ಸೇರಿದಂತೆ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಪೈಪೋಟಿ ನೀಡಬಲ್ಲ ಐ10 ಕಾರು ಮೈಲೇಜ್‌ನಲ್ಲೂ ಗ್ರಾಹಕರ ನಿರೀಕ್ಷೆಗೂ ಮೀರಿ ಸ್ಪಂದಿಸಲಿದೆ ಅನ್ನೋ ಹ್ಯುಂಡೈ ಸಂಸ್ಥೆ ಹೇಳಿದೆ.

2019ರ ಜನವರಿಯಲ್ಲಿ ಗ್ರ್ಯಾಂಡ್ ಐ10 ಕಾರಿನ ಜೊತೆಗೆ ಎಕ್ಸೆಂಟ್, ಎಲೈಟ್ ಐ20 ಹಾಗೂ ಕ್ರೇಟಾ ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ. ಇದರ ಜೊತೆಗೆ ಕೋನಾ ಎಲೆಕ್ಟ್ರಿಕಲ್ ಕಾರು ಹಾಗೂ ಸಣ್ಣ SUV ಕಾರು ಕೂಡ ಬಿಡುಗಡೆಯಾಗಲಿದೆ.

ನೂತನ ಗ್ರ್ಯಾಂಡ್ ಐ10 ಕಾರು ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯಿಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ, ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸ್ಟೇರಿಂಗ್ ಮೌಂಟೆಡ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಸೇರಿಸಲಾಗಿದೆ.

ವಿನ್ಯಾಸದಲ್ಲೂ ಕೆಲ ಬದಲಾವಣೆ ಮಾಡಲಾಗಿದೆ. ಇನ್ನು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ ಮ್ಯಾನ್ಯುಯೆಲ್ ಗೇರ್ ಬಾಕ್ಸ್ ಹಾಗೂ ಎಎಂಟಿ ಹೊಂದಿದೆ. ಇದರ ಬೆಲೆ 4.90 ಲಕ್ಷ ರೂಪಾಯಿಂದ ಪ್ರಾರಂಭವಾಗಲಿದೆ ಎಂದು ಅಂದಾಜಿಸಲಾಗಿದೆ.

PREV
click me!

Recommended Stories

ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?
ವಿರಾಟ್ ಕೊಹ್ಲಿ to ಕೆಎಲ್ ರಾಹುಲ್, ಭಾರತೀಯ ಕ್ರಿಕೆಟಿಗರಲ್ಲಿದೆ ಅತೀ ದುಬಾರಿ ಕಾರು