ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಆಲೋಯ್ ವೀಲ್ಹ್ ಹಾಕಿದ್ರೆ ಎಚ್ಚರ!

By Chethan Kumar  |  First Published Mar 13, 2019, 2:41 PM IST

ರಾಯಲ್ ಎನ್‌ಫೀಲ್ಡ್ ಬೈಕ್‌‌ಗೆ ಆಲೋಯ್ ವೀಲ್ಹ್ ಇದ್ರೆ ಅದರ ಲುಕ್ ಇನ್ನು ಹೆಚ್ಚಾಗುತ್ತೆ. ಹೀಗಾಗಿ ಬಹುತೇಕರು ಅಲೋಯ್ ವೀಲ್ಹ್ ಹಾಕಿಸುತ್ತಾರೆ. ಆದರೆ ಅಲೋಯ್ ವೀಲ್ಹ್ ಕುರಿತು ಎಚ್ಚರ ವಹಿಸಲೇಬೇಕು. ಯಾಕೆ? ಇಲ್ಲಿದೆ ವಿವರ.
 


ದೆಹಲಿ(ಮಾ.13): ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸಿ ಮಾಡಿಫೈ ಮಾಡುವವರ ಸಂಖ್ಯೆ ಹೆಚ್ಚು. ಕನಿಷ್ಠ ಅಲೋಯ್ ವೀಲ್ಹ್ ಹಾಗೂ ಹೆಡ್ ಲೈಟ್ ಬದಲಿಸಿ ಆಕರ್ಷಕ ಲುಕ್ ನೀಡುತ್ತಾರೆ. ಆದರೆ ಆಲೋಯ್ ವೀಲ್ಹ್ಸ್ ಹಾಕುವವರು ಎಚ್ಚರ ವಹಿಸುವುದು ಅಗತ್ಯ. ಕಾರಣ ಇದೇ ರೀತಿ ಅಲೋಯ್ ವೀಲ್ಹ್ ಮಾಡಿಸಿಕೊಂಡ ರಾಯಲ್ ಎನ್‌ಫೀಲ್ಡ್ ಮಾಲೀಕ ಸರಿಯಾಗಿ ದಂಡ ತೆತ್ತಿದ್ದಾರೆ.

ಇದನ್ನೂ ಓದಿ: ನೆಲಕ್ಕೆ ಬಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಸುಲಭವಾಗಿ ಎತ್ತಲು ಇಲ್ಲಿದೆ ಟಿಪ್ಸ್!

Latest Videos

ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸಿದ ಬಳಿಕ, ಮಾಡಿಫಿಕೇಶನ್ ಮಾಡಿಸಿದ್ದಾರೆ. ಈ ವೇಳೆ ಬ್ರಾಂಡೆಡ್ ಆಲೋಯ್ ಹಾಕಿಲ್ಲ. ಕಡಿಮೆ ಬೆಲೆಯ ಆಲೋಯ್ ವೀಲ್ಹ್ ಹಾಕಿದ್ದಾರೆ. ಬೈಕ್ ಮಾಲೀಕ ಪ್ರಯಾಣಿಸುತ್ತಿದ್ದಂತೆ ಮುಂಭಾಗದ ಆಲೋಯ್ ವೀಲ್ಹ್ ಮುರಿದಿದೆ. ಇದರಿಂದ ಅಪಘಾತ ಸಂಭವಿಸಿದೆ. ಬೈಕ್ ನಿಧಾನವಾಗಿ ಚಲಿಸುತ್ತಿದ್ದ ಕಾರಣ ಹೆಚ್ಚಿನ ಅಪಾಯ ಸಂಭವಿಸಿಲ್ಲ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್-ಬಜಾಜ್ ಚೇತಕ್ ಹಗ್ಗ ಜಗ್ಗಾಟ - ಗೆದ್ದವರು ಯಾರು?

ಕಂಪನಿ ಅಥವಾ ಬ್ರಾಂಡೆಡ್ ಅಲೋಯ್ ವೀಲ್ಹ್ ಬದಲು ಬೇರೆ ಗ್ಯಾರೇಜ್‌ಗಳಲ್ಲಿ ಆಲೋಯ್ ವೀಲ್ಹ್ ಹಾಕುವಾಗ ಎಚ್ಚರ ವಹಿಸುವುದು ಅಗತ್ಯ. ಕಾರಣ ಕಡಿಮೆ ಬೆಲೆ, ಕಳಪೆ ಗುಣಮಟ್ಟದ ಅಲೋಯ್ ವೀಲ್ಹ್ಸ್ ಪ್ರಾಣಕ್ಕೆ ಕುತ್ತು ತರಬಹುದು. ಹೀಗಾಗಿ ಬೈಕ್ ಮಾಡಿಫಿಕೇಶನ್ ಮಾಡಿಸುವವರು ಎಲ್ಲಾ ವಿಚಾರಗಳನ್ನು ಗಮನಿಸುವುದು ಸೂಕ್ತ.

click me!