ರಾಯಲ್ ಎನ್‌ಫೀಲ್ಡ್-ಬಜಾಜ್ ಚೇತಕ್ ಹಗ್ಗ ಜಗ್ಗಾಟ - ಗೆದ್ದವರು ಯಾರು?

By Web Desk  |  First Published Jan 6, 2019, 2:44 PM IST

ರಾಯಲ್ ಎನ್‌ಫೀಲ್ಡ್  ಹಾಗೂ ಬಜಾಜ್ ಚೇತಕ್ ನಡುವಿನ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ನೂತನ ಬೈಕ್ ಪ್ರಬಲ ಪೈಪೋಟಿ ಎದುರಿಸಿದೆ. ಈ ರೋಚಕ ಹಣಾಹಣಿಯಲ್ಲಿ ಗೆದ್ದವರು ಯಾರು? ಇಲ್ಲಿದೆ ವಿವರ.


ಜಲಂಧರ್(ಜ.06): ಭಾರತೀಯರಿಗೆ ಬಜಾಜ್ ಚೇತಕ್ ಮೇಲಿನ ಪ್ರೀತಿ ಯಾವತ್ತೂ ಕಡಿಮೆಯಾಗಲ್ಲ. ಕಾರಣ ಹಲವರ ಮೊದಲ ಸ್ಕೂಟರ್ ಇದೇ ಬಜಾಜ್ ಚೇತಕ್. ಹಮಾರ ಬಜಾಜ್ ಜಾಹೀರಾತು ಹೆಚ್ಚಿನವರು ಮರೆತಿಲ್ಲ. ಇದೀಗ ಇದೇ ಬಜಾಜ್ ಚೇತಕ್ ಹಾಗೂ ರಾಯಲ್ ಎನ್‌ಫೀಲ್ಡ್ ಬೈಕ್ ಬಲಾಬಲದ ಪರೀಕ್ಷೆ ನಡೆಸಿದೆ. 

ಇದನ್ನೂ ಓದಿ: ಹೆಲ್ಮೆಟ್ ಧರಿಸಿದ 9,500 ಮಂದಿಗೆ ದಂಡ-ಪೊಲೀಸರ ವಿರುದ್ಧ ಪ್ರತಿಭಟನೆ!

Tap to resize

Latest Videos

undefined

ಬಜಾಜ್ ಚೇತಕ್ ಹಾಗೂ ರಾಯಲ್ ಎನ್‌ಫೀಲ್ಡ್ ನಡುವೆ ಹಗ್ಗ ಜಗ್ಗಾಟ ಎರ್ಪಡಿಸಲಾಗಿತ್ತು. ವಿಶೇಷ ಅಂದರೆ ರಾಯಲ್ ಎನ್‌ಫೀಲ್ಡ್‌ಗೆ ತೀವ್ರ ಪೈಪೋಟಿ ನೀಡಿದ ಚೇತಕ್ ತಾನೂ ಕೂಡ  ಬಲಿಷ್ಠ ಅನ್ನೋದನ್ನ ಸಾರಿ ಹೇಳಿದೆ.

ರಾಯಲ್ ಎನ್‌ಫೀಲ್ಡ್ ಹೆಚ್ಚಿನ ಭಾರದಿಂದ ಈ ಹಗ್ಗಜಗ್ಗಾಟದಲ್ಲಿ ಗೆಲುವು ಸಾಧಿಸಿದೆ. ಆದರೆ ಎಂಜಿನ್ ಪವರ್ ನೋಡಿದರೆ ಬಜಾಜ್ ಚೇತಕ್, ಎನ್‌ಫೀಲ್ಡ್‌ಗಿಂತ ಕಡಿಮೆ ಇಲ್ಲ. ಕಾರಣ ಈ ಸ್ಪರ್ಧೆಯಲ್ಲಿ ಎನ್‌ಫೀಲ್ಡ್ ಗೆಲುವಿಗೆ ಹರಸಾಹಸ ಪಟ್ಟಿತು.
 

click me!