ದ್ವಿಚಕ್ರ ವಾಹನ ಸವಾರರ ಸುರಕ್ಷತೆಗೆ ಜಾರಿಯಾಗಿರುವ ಹೆಲ್ಮೆಟ್ ಖಡ್ಡಾಯ ನಿಯಮದ ವಿರುದ್ಧವೇ ಇದೀಗ ಪ್ರತಿಭಟನೆ ಶುರುವಾಗಿದೆ. ಹೆಲ್ಮೆಟ್ ಧರಿಸದವರ ವಿರುದ್ಧ ದಂಡ ಹಾಕಿದ ಪೊಲೀಸರ ವಿರುದ್ಧವೇ ಪ್ರತಿಭಟನೆ ಮಾಡಲಾಗಿದೆ.
ಪುಣೆ(ಜ.06): ಹೆಲ್ಮೆಟ್ ಖಡ್ಡಾಯವಾಗಿದ್ದರೂ ಎಲ್ಲಾ ನಗರಗಳಲ್ಲಿ ಇದು ಇನ್ನೂ ಜಾರಿಯಾಗಿಲ್ಲ. ಪುಣೆಯಲ್ಲಿ ಈ ವರ್ಷದ ಆರಂಭದಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಖಡ್ಡಾಯ ಮಾಡಲಾಗಿದೆ. ಆದರೆ ಪುಣೆ ಪೊಲೀಸರು 2018ರ ನವೆಂಬರ್ ತಿಂಗಳಲ್ಲಿ 9500 ಹೆಲ್ಮೆಟ್ ರಹಿತ ವಾಹನ ಸವಾರರಿಗೆ ದಂಡ ವಿಧಿಸಿದ್ದಾರೆ.
ಇದನ್ನೂ ಓದಿ: ಕಳಚಿತು ಮಾರುತಿ ಆಲ್ಟೋ ಕಾರಿನ ನಂ.1 ಪಟ್ಟ-ಅಗ್ರಸ್ಥಾನ ಯಾರಿಗೆ?
undefined
9,500ರಲ್ಲಿ 6105 ಮಂದಿಯನ್ನ ಪೊಲೀಸರು ಹಿಡಿದು ಫೈನ್ ಹಾಕಿದ್ದಾರೆ. ಇನ್ನು 3414 ಮಂದಿಗೆ ಸಿಸಿಟಿ ಆಧಾರದಲ್ಲಿ ದಂಡ ವಿಧಿಸಲಾಗಿದೆ. ಇನ್ನು ಹೆಲ್ಮೆಟ್ ಖಡ್ಡಾಯದ ವಿರುದ್ಧ ಪ್ರತಿಭಟನೆ ನಡೆಸಸಿದ 50 ಬೈಕ್ ರೈಡರ್‌ಗಳಿಗೂ ದಂಡ ವಿಧಿಸಲಾಗಿದೆ. ಆದರೆ 2019ರಿಂದ ಹೆಲ್ಮೆಟ್ ಖಡ್ಡಾಯ ಜಾರಿಯಾಗೋ ಮೊದಲೇ ದಂಡ ವಿಧಿಸಿರೋದಕ್ಕೆ ದ್ವಿಚಕ್ರ ಸವಾರರು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: GSTಜೊತೆಗೆ TCS:10 ಲಕ್ಷಕ್ಕಿಂತ ಹೆಚ್ಚಿನ ಬೆಲೆ ಕಾರು ಖರೀದಿ ಇನ್ನೂ ಸುಲಭವಲ್ಲ!
ಪುಣೆ ನಗರದಲ್ಲಿ ಹೆಲ್ಮೆಟ್ ಖಡ್ಡಾಯ ನಿಯಮವನ್ನ 2 ತಿಂಗಳು ಮೊದಲೇ ಜಾರಿಗೊಳಿಸಲಾಗಿದೆ. ಈ ಕುರಿತು ಈಗಾಗಲೇ ಸೂಚನೆ ನೀಡಿದ್ದೇವೆ. ಪುಣೆ ನಗರದಲ್ಲಿ ನಡೆದಿರುವ ಅಪಘಾತದಲ್ಲಿ ಹೆಲ್ಮೆಟ್ ರಹಿತ ವಾಹನ ಸವಾರರು ಹೆಚ್ಚು ಸಾವೀಗಿಡಾಗಿದ್ದಾರೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ನಿಗಧಿತ ಸಮಯಕ್ಕಿಂತ ಬೇಗನೆ ನಿಯಮ ಜಾರಿಗೊಳಿಸಲಾಗಿದೆ. ಪ್ರತಿಭಟನೆಗೆ ಅವಕಾಶವಿದೆ. ಆದರೆ ಹೆಲ್ಮೆಟ್ ರಹಿತ ಬೈಕ್ ರ್ಯಾಲಿ ಮಾಡಿ ಪ್ರತಿಭಟಿಸಿದರೆ ಫೈನ್ ಹಾಕಲಾಗುವುದು ಎಂದು ಪುಣೆ ಡೆಪ್ಯೂಟಿ ಪೊಲೀಸ್ ಕಮಿಶನ್ ಹೇಳಿದ್ದಾರೆ.