ಕಳಚಿತು ಮಾರುತಿ ಆಲ್ಟೋ ಕಾರಿನ ನಂ.1 ಪಟ್ಟ-ಅಗ್ರಸ್ಥಾನ ಯಾರಿಗೆ?

By Web Desk  |  First Published Jan 5, 2019, 2:47 PM IST

ಕಳೆದ 13 ವರ್ಷಗಳಿಂದ ಮಾರುತಿ ಅಲ್ಟೋ ಕಾರು ಮಾರಾಟದಲ್ಲಿ ಮೊದಲ ಸ್ಥಾನದಲ್ಲಿ ರಾರಾಜಿಸುತ್ತಿತ್ತು. ಆದರೆ ಆಲ್ಟೋ ನಂ.1 ಪಟ್ಟ ಕಳಚಿದೆ. ಹಾಗಾದರೆ ಆಗ್ರಸ್ಥಾನ ಆಕ್ರಮಿಸಿಕೊಂಡ ಕಾರು ಯಾವುದು? ಇಲ್ಲಿದೆ ವಿವರ.
 


ಮುಂಬೈ(ಜ.05): ಮಾರುತಿ ಸಂಸ್ಥೆಯ ಕಾರುಗಳು ಪ್ರತಿ ವರ್ಷ ಅಗ್ರಸ್ಥಾನ ಕಾಪಾಡಿಕೊಂಡು ಬರುತ್ತಿದೆ. 1980ರ ದಶಕದಲ್ಲಿ ಮಾರುತಿ 800 ಭಾರತದಲ್ಲಿ ದಾಖಲೆ ಬರೆದಿತ್ತು. ಮಾರುತಿ 800 ಬಳಿಕ ಮಾರಾಟದಲ್ಲಿ ನಂ.1 ಸ್ಥಾನವನ್ನ ಮಾರುತಿ ಅಲ್ಟೋ ವಶಪಡಿಸಿಕೊಂಡಿತು. ಇದೀಗ ಬರೋಬ್ಬರಿ 13 ವರ್ಷಗಳ ಬಳಿಕ ಅಲ್ಟೋ ನಂ.1 ಪಟ್ಟ ಕಳಚಿದೆ. ಇದೀಗ ನೂತನ ಕಾರು ಈ ಅಗ್ರಸ್ಥಾನ ಆಕ್ರಮಿಸಿಕೊಂಡಿದೆ.

ಇದನ್ನೂ ಓದಿ: GSTಜೊತೆಗೆ TCS:10 ಲಕ್ಷಕ್ಕಿಂತ ಹೆಚ್ಚಿನ ಬೆಲೆ ಕಾರು ಖರೀದಿ ಇನ್ನೂ ಸುಲಭವಲ್ಲ!

Latest Videos

undefined

ಮಾರುತಿ ಅಲ್ಟೋ ಕಾರಿನಿಂದ ನಂ.1 ಸ್ಥಾನ ಆಕ್ರಮಿಸಿಕೊಂಡಿದ್ದು, ಮಾರುತಿ ಸಂಸ್ಥೆಯ ಡಿಸೈರ್ ಸೆಡಾನ್ ಕಾರು. ಅಲ್ಟೋ ಕಡಿಮೆ ಬೆಲೆ ಕಾರಾಗಿತ್ತು. ಹೀಗಾಗಿ ಭಾರತದಲ್ಲಿ ಹೆಚ್ಚಿನ ಗ್ರಾಹಕರು ಅಲ್ಟೋ ಮೊರೆ ಹೋಗುತ್ತಿದ್ದರು. ಆದರೆ ಡಿಸೈರ್ ಕಾರು ಅಲ್ಟೋಗಿಂತ ದುಬಾರಿ. ಆದರೆ ಬದಲಾದ ಭಾರತದ ಸಾಮಾನ್ಯ ಕಾರು ಮಾರುತಿ ಡಿಸೈರ್ ಆಗಿದೆ.

ಇದನ್ನೂ ಓದಿ: ಜ.23ಕ್ಕೆ ಬಿಡುಗಡೆಯಾಗಲಿರುವ ವ್ಯಾಗನ್‌ಆರ್ ಕಾರಿನ 6 ವಿಶೇಷತೆ ಏನು? ಇಲ್ಲಿದೆ!

2018ರಲ್ಲಿ ಮಾರುತಿ ಡಿಸೈರ್ ಕಾರು 2,47,815 ಕಾರು ಮಾರಾಟವಾಗಿದೆ. ಇನ್ನು ಮೊದಲ ಸ್ಥಾನದಲ್ಲಿದ್ದ ಅಲ್ಟೋ ಕಾರು 2,31,540 ಕಾರುಗಳು ಮಾರಾಟವಾಗಿದೆ. ಪ್ರತಿ ತಿಂಗಳ ಸರಾಸರಿ 22,528 ಕಾರುಗಳ ಮಾರಾಟವಾಗಿದೆ. ಆಲ್ಟೋ 21,049 ಕಾರುಗಳ ಮಾರಟಗೊಂಡಿದೆ. ಮಾರುತಿ ಅಲ್ಟೋ ಬೆಲೆ 2.7 ರಿಂದ 3.7 ಲಕ್ಷ ರೂಪಾಯಿ. ಆದರೆ ಮಾರುತಿ ಡಿಸೈರ್ ಬೆಲೆ 5.5 ರಿಂದ 10 ಲಕ್ಷ ರೂಪಾಯಿ.

click me!