ರೋಲ್ಸ್ ರಾಯ್ಸ್ ಕಲ್ಲಿನಾನ್ ವಿಶ್ವದ ಅತ್ಯಂತ ದುಬಾರಿ SUV ಕಾರು!

By Web Desk  |  First Published Apr 14, 2019, 5:56 PM IST

ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು ವಿಶ್ವದ ಅತ್ಯಂತ ದುಬಾರಿ  SUV ಕಾರು. ಈ ದುಬಾರಿ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.
 


ಲಂಡನ್(ಏ.14): ವಿಶ್ವದ ಅತ್ಯಂತ ದುಬಾರಿ SUV ಕಾರು ಅನ್ನೋ ಹೆಗ್ಗಳಿಕೆಗೆ ರೋಲ್ಸ್ ರಾಯ್ಸ್ ಕಲ್ಲಿನಾನ್ ಪಾತ್ರವಾಗಿದೆ. ಇದರ ಬೆಲೆ 6.95 ಕೋಟಿ(ಎಕ್ಸ್ ಶೋ ರೂಂ). ವಿಶ್ವದ ಶ್ರೀಮಂತರ ಬಳಿ ಈ ಕಾರು ಇದೆ. ಭಾರತದಲ್ಲಿ ಅಂಬಾನಿ ಇತ್ತೀಚೆಗೆ ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದಾರೆ. ದುಬಾರಿ ಮೌಲ್ಯದ ಈ ಕಾರಿನಲ್ಲಿ ಹಲವು ವಿಶೇಷತೆಗಳಿವೆ.

ಇದನ್ನೂ ಓದಿ: ರೋಲ್ಸ್ ರಾಯ್ಸ್ ದುಬಾರಿ ಕಾರು ಖರೀದಿಸಿದ ಭಾರತದ ಮೊದಲ ಮಹಿಳೆ!

Tap to resize

Latest Videos

undefined

ಇತರ ಕಾರುಗಳಿಗೆ ಹೋಲಿಸಿದರೆ ರೋಲ್ಸ್ ರಾಯ್ಸ್ ಕಾರಿನ ತಂತ್ರಜ್ಞಾನಕ್ಕೆ ಮನಸೋಲುವುದದು ಖಚಿತ. ಜಗತ್ತಿನ ಇತರ ಐಷಾರಾಮಿ ಕಾರುಗಳಿಗಿಂತ ರೋಲ್ಸ್ ರಾಯ್ಸ್ ಕಲಿನಿಯರ್ ಕಾರು ಮುಂದಿದೆ. 

ಇದನ್ನೂ ಓದಿ:  2018ರಲ್ಲಿ ಬಿಡುಗಡೆಯಾದ ಟಾಪ್ 6 ದುಬಾರಿ ಕಾರು!

ದಕ್ಷಿಣ ಆಫ್ರಿಕಾದಲ್ಲಿರುವ ವಿಶ್ವದ ಅತೀ ದೊಡ್ಡ ಕಲ್ಲಿನಾನ್  ಡೈಮಂಡ್ ಗಣಿ ಹೆಸರನ್ನೇ ಈ ಕಾರಿಗೆ ಇಡಲಾಗಿದೆ. ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರ 6.75 ಲೀಟರ್ ಎಂಜಿನ್ ಹೊಂದಿದ್ದು,  563 hp ಪವರ್ ಹಾಗೂ 850 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
 

click me!