ಬೈಕ್ ರೈಡ್ ಮಾಡುವುದು ಎಲ್ಲರಿಗೂ ಇಷ್ಟ. ಆದರೆ ನಗರದಲ್ಲಿ ಮಾತ್ರ ಉಲ್ಟಾ. ಇತ್ತೀಚೆಗೆ ಅಮೇರಿಕಾದಲ್ಲಿ ನಡೆಸಿದ ಅಧ್ಯಯನದಲ್ಲಿ ಅಚ್ಚರಿ ವಿಚಾರ ಬಹಿರಂಗವಾಗಿದೆ. ಬೈಕ್ ರೈಡ್ ಮಾಡುವುದರಿಂದ ಒತ್ತಡ ನಿವಾರಣೆಯಾಗಲಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಲಾಸ್ ಎಂಜೆಲ್ಸ್(ಜ.27): ಬೈಕ್ ಹೆಚ್ಚಿನವರಿಗೆ ಆತ್ಮೀಯ ಗೆಳೆಯನಿದ್ದಂತೆ. ಹೀಗಾಗಿಯೇ ಬೈಕ್‌ನ್ನ ಅಷ್ಟೇ ಉತ್ತಮವಾಗಿ ನೋಡಿಕೊಳ್ಳುತ್ತಾರೆ. ಇದೀಗ ಅಮೇರಿಕಾದ UCLA ನ್ಯೂರೋ ಸೈನ್ಸ್ ಹಾಗೂ ಹ್ಯುಮನ್ ಬಿಹೆವಿಯರ್ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಅಚ್ಚರಿಯ ಅಂಶ ಬಹಿರಂಗವಾಗಿದೆ.
ಇದನ್ನೂ ಓದಿ: ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ ಮಾರುತಿ ಅಲ್ಟೋ ಕಾರು!
ಹಾರ್ಲೆ ಡೇವಿಡ್ಸನ್ ಬೈಕ್ ಸಹಯೋಗದಲ್ಲಿ UCLA ನ್ಯೂರೋ ಸೈನ್ಸ್ ಹಾಗೂ ಹ್ಯುಮನ್ ಬಿಹೆವಿಯರ್ ಸಂಸ್ಥೆ ಅಧ್ಯಯನ ನಡೆಸಿತ್ತು. ಬೈಕ್ ರೈಡ್ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತೆ ಎಂದು ಈ ಅಧ್ಯಯನ ಹೇಳುತ್ತಿದೆ. ಮೂವರ ತಜ್ಞರ ಸಮಿತಿ ಈ ಅಧ್ಯಯನ ನಡೆಸಿದೆ.
ಇದನ್ನೂ ಓದಿ: 11 ಸಾವಿರಕ್ಕೆ ಬುಕ್ ಮಾಡಿ ನೂತನ ಮಾರುತಿ ಬಲೆನೊ ಕಾರು!
ಬೈಕ್ ರೈಡ್ ವೇಳೆ ವ್ಯಕ್ತಿಯ ಮೆದುಳಿನ ಚಟುವಟಿಕೆ, ಹಾರ್ಟ್ ರೇಟ್, ಹಾರ್ಮೋನ್ ಲೆವೆಲ್(ಬೈಕ್ ರೈಡ್‌ಗಿಂತ ಮೊದಲು, ರೈಡ್ ವೇಳೆ ಹಾಗೂ ರೈಡ್ ಬಳಿಕ) ಸೇರಿದಂತೆ ಹಲವು ಅಂಶಗಳ ಕುರಿತು ಸಂಶೋದನೆ ನಡೆಸಿತ್ತು. ಬಳಿಕ ಈ ವರದಿಯನ್ನ ತಯಾರಿಸಲಾಗಿದೆ.
ಇದನ್ನೂ ಓದಿ: ಅಂಬಾನಿ ಪುತ್ರರ ಭದ್ರತೆಗಾಗಿ ಹೊಸ ರೇಂಜ್ ರೋವರ್ ಕಾರು!
ಈ ಅಧ್ಯಯನದ ಪ್ರಕಾರ ಲಾಂಗ್ ರೈಡ್ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತೆ. ಮಾನಸಿಕ ನೆಮ್ಮದಿ ಸಿಗುತ್ತೆ ಎಂದಿದೆ. ಅಧ್ಯಯನದ ಪ್ರಕಾರ ನಿಮ್ಮಲ್ಲಿ ಬೈಕ್ ಇಲ್ಲ ಎಂದಾದರೆ ಈಗಲೇ ಖರೀದಿಸಿ ರೈಡ್ ಮಾಡುವುದು ಸೂಕ್ತ. ಇನ್ನು ಬೈಕ್ ಇರುವವರು ಸಮಯ ಮಾಡಿಕೊಂಡು ಲಾಂಗ್ ರೈಡ್ ಮಾಡುವುದು ಉತ್ತಮ. ಇದರಿಂದ ನಿಮ್ಮ ಆರೋಗ್ಯ ವೃದ್ಧಿಸಲಿದೆ ಅನ್ನೋದು ಅಧ್ಯಯನದ ಸಾರಾಂಶ.