ಮತ್ತೆ ರಸ್ತೆಗಿಳಿಯುತ್ತಿದೆ ಬಜಾಜ್ ಸ್ಕೂಟರ್!

By Web DeskFirst Published Jan 27, 2019, 3:04 PM IST
Highlights

ಒಂದು ಕಾಲದಲ್ಲಿ ಬಜಾಜ್ ಚೇತಕ್ ಸ್ಕೂಟರ್ ಭಾರತೀಯರ ನೆಚ್ಚಿನ ಸ್ಕೂಟರ್ ಆಗಿತ್ತು. ಇಷ್ಟೇ ಅಲ್ಲ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿತ್ತು. ಇದೀಗ ಬಜಾಜ್ ಮತ್ತೆ ಸ್ಕೂಟರ್ ಬಿಡುಗಡೆ ಮಾಡಲು ಮುಂದಾಗಿದೆ.
 

ಮುಂಬೈ(ಜ.27): ಭಾರತದಲ್ಲಿ ಬಜಾಜ್ ಚೇತಕ್ ಸ್ಕೂಟರ್ ಮಾಡಿದ ಮೋಡಿ ಯಾರು ಮರೆತಿಲ್ಲ. ಹಮಾರ ಬಜಾಜ್ ಅನ್ನೋ ಜಾಹೀರಾತು ಇನ್ನು ಹಲವರ ಮನದಲ್ಲಿ ಹಾಗೇ ಅಚ್ಚಳಿಯದೇ ಉಳಿದಿದೆ. ಇದೀಗ ಬಜಾಜ್ ಮತ್ತೆ ಸ್ಕೂಟರ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮುಂದಾಗಿದೆ. ಶೀಘ್ರದಲ್ಲೇ ಬಜಾಜ್ ಸ್ಕೂಟರ್ ಬಿಡುಗಡೆ ಮಾಡಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಟಾಟಾ ಹರಿಯರ್ ಕಾರಿನ ಆನ್ ರೋಡ್ ಬೆಲೆ ಎಷ್ಟು?

ಈ ಬಾರಿ ಬಜಾಜ್ ನಿರ್ಮಿಸುತ್ತಿರೋ ಸ್ಕೂಟರ್ ಸಂಪೂರ್ಣ ಎಲೆಕ್ಟ್ರಿಕ್ ಸ್ಕೂಟರ್. ಅರ್ಬನೈಟ್ ಎಲೆಕ್ಟ್ರಿಕ್ ಸ್ಕೂಟರ್ ಪರಿಕಲ್ಪನೆಯೊಂದಿಗೆ ಬಿಡುಗಡೆಯಾಗಲಿದೆ. ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ತ್ವರಿತಗತಿಯಲ್ಲಿ ಕೆಲಸಗಳು ನಡೆಯುತ್ತಿದೆ. ನೂತನ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಅತ್ಯಂತ ಆಕರ್ಷಕ ವಿನ್ಯಾಸ ಹೊಂದಿರಲಿದೆ ಎಂದು ಕಂಪನಿ ಚೇರ್ಮನ್ ರಾಜೀವ್ ಬಜಾಜ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತೀಯ ಸೇನೆಗೆ ಬಲಿಷ್ಠ ಟಾಟಾ ಮರ್ಲಿನ್ LSV ವಾಹನ!

ಬೆಂಗಳೂರು ಮೂಲದ ಎದೆರ್ ಕಂಪೆನಿ ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇನ್ನು ಜಪಾನ್ ಮೂಲಕ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇನ್ನು ಮಹೀಂದ್ರ ಜೆನ್‌ಜಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ. ಇದರ ಬೆನ್ನಲ್ಲೇ ಬಜಾಜ್ ಕೂಡ ಎಲೆಕ್ಟ್ರಿಕ್ ಸ್ಕೂಟರ್‌ನತ್ತ ಚಿತ್ತ ಹರಿಸಿದೆ.

click me!