ಕೈಗೆಟುಕುವ ದರದಲ್ಲಿ ಕ್ವಿಡ್ ರೀತಿಯ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಮುಂದಾದ ರೆನಾಲ್ಟ್!

By Suvarna News  |  First Published Oct 17, 2020, 8:01 PM IST

ಭಾರತದಲ್ಲಿ ಹಲವು ಎಲೆಕ್ಟ್ರಿಕ್ ಕಾರುಗಳು ಲಭ್ಯವಿದೆ. ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯಗಳು ಎಲೆಕ್ಟ್ರಿಕ್ ಕಾರುಗಳಿಗೆ ವಿಶೇಷ ಒತ್ತು ನೀಡುತ್ತಿದೆ. ಆದರೆ ಬೆಲೆ ಮಾತ್ರ ಕೈಗೆಟುಕುವಂತಿಲ್ಲ. ಇದೀಗ ರೆನಾಲ್ಟ್ ತನ್ನ ಕ್ವಿಡ್ ಎಲೆಕ್ಟ್ರಿಕ್ ಕಾರನ್ನು ಕಡಿಮೆ ಬೆಲೆ ಹಾಗೂ ಜನಸಾಮಾನ್ಯರಿಗೂ ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಲು ರೆಡಿಯಾಗಿದೆ.


ನವದೆಹಲಿ(ಅ.17):  ಪೆಟ್ರೋಲ್ ವೇರಿಯೆಂಟ್‌ಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಕಾರುಗಳು ಲಭ್ಯವಿದೆ. ಆದರೆ ಎಲೆಕ್ಟ್ರಿಕ್ ಕಾರುಗಳ ಬೆಲೆ ಅಗ್ಗವಾಗಿಲ್ಲ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಬ್ಸಿಡಿ ಪಡೆದರೂ ಕಾರು ಕೊಂಚ ದುಬಾರಿ. ಇದೀಗ ರೆನಾಲ್ಟ್ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ.

ಹೊಸ ಎಲೆಕ್ಟ್ರಿಕ್ ವಾಹನ ನೀತಿ ಜಾರಿ; ರೋಡ್ ಟ್ಯಾಕ್ಸ್ ಸಂಪೂರ್ಣ ಉಚಿತ!

Latest Videos

undefined

ರೆನಾಲ್ಟ್ ಮಾಲೀಕತ್ವ ಹೊಂದಿರುವ ಡೇಸಿಯಾ ಸ್ಪ್ರಿಂಗ್ ರೋಮನ್ ಕಾರ್ ಬ್ರ್ಯಾಂಡ್ ಇದೀಗ ರೆನಾಲ್ಟ್ ಕ್ವಿಡ್ ರೀತಿಯ ಎಲೆಕ್ಟ್ರಿಕ್ ಕಾರು ಬಿಡುದಡೆ ಮಾಡಲು ಸಜ್ಜಾಗಿದೆ. ಈ ಕಾರು ವಿಶ್ವದ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ರೆನಾಲ್ಟ್ ಹೇಳಿದೆ.

ಕರ್ನಾಟಕದಲ್ಲಿ ನೂತನ ಮಹೀಂದ್ರ ಟ್ರಿಯೋ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ!..

ಸರಿಸುಮಾರು 300 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ನೂತನ ಎಲೆಕ್ಟ್ರಿಕ್ ಕಾರು 2021ರ ಆರಂಭದಲ್ಲಿ ಬಿಡುಗಡೆ ಮಾಡಲು ಡೇಸಿಯಾ ಸ್ಪ್ರಿಂಗ್ ಸಜ್ಜಾಗಿದೆ. ಚೀನಾದಲ್ಲಿ ಸದ್ಯ ಸರಿಸುಮಾರು 6.60 ಲಕ್ಷ ರೂಪಾಯಿಗೆ ಎಲೆಕ್ಟ್ರಿಕ್ ಕಾರು ಲಭ್ಯವಿದೆ. ಇದೀಗ ಇದೇ ರೀತಿ ಕಡಿಮೆ ಬೆಲೆಗೆ ಡೇಸಿಯಾ ಸ್ಪ್ರಿಂಗ್ ಎಲೆಕ್ಟ್ರಿಕ್ ಕಾರು ಭಾರತ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ.
 

click me!