ರೆನಾಲ್ಟ್ ಕ್ವಿಡ್ ಬಳಿಕ ಇದೀಗ ಕಡಿಮೆ ಬೆಲೆ, ಗರಿಷ್ಠ ಫೀಚರ್ಸ್ ಒಳಗೊಂಡಿರುವ ನೂತನ ಟ್ರೈಬರ್ ಕಾರು ಬಿಡುಗಡೆಯಾಗಿದೆ. ಸಬ್ 4 ಮೀಟರ್ MPV ಕಾರಿನ ವಿಶೇಷತೆ, ಬೆಲೆ ಹಾಗೂ ಎಂಜಿನ್ ಮಾಹಿತಿ ಇಲ್ಲಿದೆ.
ನವದೆಹಲಿ(ಆ.28): ಬಹುನಿರೀಕ್ಷಿತ ರೆನಾಲ್ಟ್ ಟ್ರೈಬರ್ MPV ಕಾರು ಬಿಡುಗಡೆಯಾಗಿದೆ. ದಾಟ್ಸನ್ ಗೋ +, ಮಹೀಂದ್ರ TUV300 ಸೇರಿದಂತೆ ಸಬ್ 4 ಮೀಟರ್ MPV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರೆನಾಲ್ಟ್ ಟ್ರೈಬರ್ ಕಾರು ಬಿಡುಗಡೆಯಾಗಿದೆ. ಈ ವಿಭಾಗದ ಇತರ ಕಾರುಗಳಿಗೆ ಹೋಲಿಸಿದರೆ ಬೆಲೆಯೂ ಕಡಿಮೆಯಾಗಿದೆ. ರೆನಾಲ್ಟ್ ಕ್ವಿಡ್ ಮಾದರಿಯಲ್ಲೇ ಕಡಿಮೆ ಬೆಲೆ ಹಾಗೂ ಹೆಚ್ಚಿನ ಫೀಚರ್ಸ್‍ನೊಂದಿಗೆ ಟ್ರೈಬರ್ ಮಾರುಕಟ್ಟೆ ಪ್ರವೇಶಿಸಿದೆ.
undefined
ಇದನ್ನೂ ಓದಿ: ಟ್ರೈಬರ್ to ಬಜಾರ್ಡ್; ಬಿಡುಗಡೆಯಾಗಲಿರುವ 7 ಸೀಟರ್ ಕಾರು!
ಈ ಕಾರಿನ ಬೆಲೆ 4.95 ಲಕ್ಷ ರೂಪಾಯಿಂದ ಆರಂಭವಾಗುತ್ತಿದ್ದು, ಟಾಪ್ ಮಾಡೆಲ್ ಬೆಲೆ 6.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ನೂತನ ರೆನಾಲ್ಟ್ ಟ್ರೈಬರ್ ಕಾರಿನಲ್ಲಿ 4 ವೇರಿಯೆಂಟ್ ಲಭ್ಯವಿದೆ. RXE, RXL, RXT ಹಾಗೂ RXZ. 7 ಸೀಟರ್ ಸಾಮರ್ಥ್ಯ ಹೊಂದಿರುವ ನೂತನ ಕಾರು ಭಾರತದ ಕಾರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ರೆಡಿಯಾಗಿದೆ.
ಇದನ್ನೂ ಓದಿ: ರೆನಾಲ್ಟ್‌ನಿಂದ 7 ಸೀಟರ್ ಫ್ಯಾಮಿಲಿ ಕಾರ್
ರೆನಾಲ್ಟ್ ಟ್ರೈಬರ್ ಕಾರಿನ ಬೆಲೆ(ಎಕ್ಸ್ ಶೋ ರೂಂ)
RXE | 4.95 ಲಕ್ಷ ರೂಪಾಯಿ |
RXL | 5.49 ಲಕ್ಷ ರೂಪಾಯಿ |
RXT | 5.99 ಲಕ್ಷ ರೂಪಾಯಿ |
RXZ | 6.49 ಲಕ್ಷ ರೂಪಾಯಿ |
ಟ್ರೈಬರ್ ಕಾರು ಕ್ವಿಡ್ ರೀತಿಯಲ್ಲೇ 1.0-ಲೀಟರ್, 3-ಸಿಲಿಂಡರ್ ಎಂಜಿನ್ ಹೊಂದಿದ್ದು, 71 bhp ಪವರ್ ಹಾಗೂ 96 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ. 8 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪುಶ್ ಬಟನ್ ಸ್ಟಾರ್ಟ್, USB ಚಾರ್ಜಿಂಗ್ ಪಾಯಿಂಟ್, ರಿವರ್ಸ್ ಕ್ಯಾಮರ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.