ಈ 5 ಕಡೆ ಮಾಡಬೇಡಿ ಕಾರು ಡ್ರೈವ್ -ಅಪಾಯ ಕಟ್ಟಿಟ್ಟ ಬುತ್ತಿ!

By Web DeskFirst Published Nov 8, 2018, 11:26 AM IST
Highlights

ಕಾರು ಡ್ರೈವ್ ಇಷ್ಟಪಡುವವರು ಲಾಂಗ್ ಡ್ರೈವ್, ಆಫ್ ರೋಡ್ ಡ್ರೈವ್‌ಗಳನ್ನ ಇಷ್ಟಪಡುತ್ತಾರೆ. ಆದರೆ ಕೆಲ ಪ್ರದೇಶಗಳಲ್ಲಿ ಕಾರನ್ನ ಕೊಂಡೊಯ್ಯುವುದು ಸೂಕ್ತವಲ್ಲ. ಡ್ರೈವ್ ಮಾಡಬಾರದ ಕೆಲ ರಸ್ತೆಗಳ ಕುರಿತ ಮಾಹಿತಿ ಇಲ್ಲಿದೆ.
 

ಬೆಂಗಳೂರು(ನ.08): ಕಾರು ಅಥವಾ ವಾಹನಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಅದರಲ್ಲೂ ಇತ್ತೀಚೆಗೆ SUV ಕಾರುಗಳನ್ನೇ ಜನರು ಹೆಚ್ಚಾಗಿ ಇಷ್ಟುಪಡುತ್ತಾರೆ. ಇಷ್ಟೇ ಅಲ್ಲ SUV ಕಾರು ಯಾವುದೇ ರಸ್ತೆ, ಗುಡ್ಡಗಳಲ್ಲೂ ಸರಾಗವಾಗಿ ಚಲಿಸುವ ಸಾಮಾರ್ಥ್ಯ ಹೊಂದಿದೆ.

SUV ಎಂಜಿನ್ ಸಾಮರ್ಥ್ಯ, ಚಕ್ರಗಳು ಸೇರಿದಂತೆ ಇಡೀ ಕಾರನ್ನ ಅಷ್ಟೇ ಬಲಿಷ್ಠವಾಗಿ ನಿರ್ಮಾಣಮಾಡಿರುತ್ತಾರೆ. ಆದರೆ ಅದೆಂತಾ ಕಾರಾಗಿದ್ದರು, ಕೆಲ ಪ್ರದೇಶಗಳಿಗೆ ಕೊಂಡೊಯ್ಯಬಾರದು. ಅದು SUV ಮಾತ್ರವಲ್ಲ, ಇತರ ಹ್ಯಾಚ್‌ಬ್ಯಾಕ್ ಸೆಡಾನ್ ಕಾರುಗಳಿಗೂ ಇಲ್ಲಿ ಅಪಾಯ ತಪ್ಪಿದ್ದಲ್ಲ. ಇಂತದ ಕಾರು ಡ್ರೈವ್ ಮಾಡಬಾರದ 5 ಪ್ರದೇಶಗಳು ಇಲ್ಲಿದೆ.

1 ಸಮುದ್ರ ತೀರ:

ಸಮುದ್ರ ದಡದಲ್ಲಿ ಸೇರಿರುವ ಮರಳಿನಲ್ಲಿ ಕಾರು ನಿಲ್ಲಿಸಿ ಫೋಟೋ ತೆಗೆಸಿಕೊಳ್ಳೋದೇ ಚಂದದ ಅನುಭವ. ಆದರೆ ಈ ಮರಳಿನ ಮೇಲೆ ಕಾರು ಕೊಂಡೊಯ್ಯಬಾರದು. ಕಾರಣ ಸಮುದ್ರ ದಡದ ಮರಳಿನಲ್ಲಿ ಕಾರು ಹೂತು ಹೋಗುವ ಸಾಧ್ಯತೆ ಹೆಚ್ಚು. ಹೀಗಾಗಿ ನಿಮ್ಮ ಟ್ರಿಪ್ ನಿರಾಸೆಯಾಗೋ ಸಾಧ್ಯತೆ ಇದೆ. 

2 ಹೆಚ್ಚು ನೀರಿನ ಪ್ರದೇಶ:
ನೀರು ಹೆಚ್ಚಿರುವ ಪ್ರದೇಶಗಳಲ್ಲಿ ಕಾರು ಚಲಾಯಿಸುವುದು ಉಚಿತವಲ್ಲ. ಪ್ರವಾದ ಬಂದು ರಸ್ತೆ ಮೇಲೆ ನೀರು ತುಂಬಿಕೊಂಡ ವೇಳೆ, ಸೇತುವೆ ಮೇಲಿನಿಂದ ನೀರು ಹರಿಯುತ್ತಿರುವ ಪ್ರದೇಶ, ಹಿಮಾಲಯದಲ್ಲಿ ದಾರಿ ನಡುವೆ ಸಿಗೋ ನದಿಗಳಲ್ಲಿ ಕಾರು ಚಲಾಯಿಸುವುದು ಸೂಕ್ತವಲ್ಲ. ಅದೆಷ್ಟೇ ತೂಕವಿದ್ದರೂ ನೀರಿನಲ್ಲಿ ಕಾರು ತೇಲಿ ಹೋಗಬಹುದು. ಇಷ್ಟೇ ಅಲ್ಲ ಗಂಭೀರ ಅಪಾಯಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ.

3 ಕೆಸರು ಪ್ರದೇಶ
ಮಳೆಗಾಲದಲ್ಲಿ ಹೆಚ್ಚಾಗಿ ಮಣ್ಣಿನ ರಸ್ತೆಗಳು,  ಹಾಗೂ ಕೆಲ ಪ್ರದೇಶಗಳು ಕೆಸರಿನಿಂದ ತುಂಬಿರುತ್ತೆ. ಇಲ್ಲಿ ಕಾರು ಚಲಾಯಿಸುವುದು ಸೂಕ್ತವಲ್ಲ. ಇಂತಹ ರಸ್ತೆಗಳನ್ನ ಬಿಟ್ಟು ಪರ್ಯಾಯ ಮಾರ್ಗದಲ್ಲಿ ಚಲಿಸುವುದು ಸೂಕ್ತ. ಈ ರಸ್ತೆಗಳಲ್ಲಿ ಕಾರು ನೆಲಕ್ಕೆ ಹೂತು ಹೋಗುವ ಸಾಧ್ಯತೆ ಹೆಚ್ಚು. ಇಷ್ಟೇ ಅಲ್ಲ ಇದು ಎಂಜಿನ್ ಮೇಲೂ ಪರಿಣಾಮ ಬೀರಲಿದೆ.

4 ಮಂಜಿನ ಪ್ರದೇಶ
ಮಂಜಿನ ಮೇಲೆ ವಾಹನ ಚಲಾಯಿಸುವುದು ಹಲವರು ಇಷ್ಟಪಡುತ್ತಾರೆ. ಆದರೆ ಇದು ಅತ್ಯಂತ ಅಪಾಯಕಾರಿ. ಮಂಜಿನ ಮೇಲೆ ವಾಹನ ಜಾರುತ್ತದೆ. ಹೀಗಾಗಿ ಡ್ರೈವ್ ವೇಳೆ ವಾಹನದ ಮೇಲೆ ನಿಯಂತ್ರಣ ಸಾಧಿಸಲು ಕಷ್ಟ. ಬ್ರೇಕ್ ಹಾಕಿದರೂ ವಾಹನ ಜಾರಿ ಇನ್ನೆಲ್ಲೋ ಹೋಗಬಹುದು. ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು. 

5 ಮರಳುಗಾಡು ಪ್ರದೇಶ
ಮರುಳುಗಾಡು ಪ್ರದೇಶದಲ್ಲೂ ವಾಹನ ಚಲಾಯಿಸುವುದು ಸೂಕ್ತವಲ್ಲ. ಮರುಳುಗಾಡಿನ ಮೇಲೆ ವಾಹನ ಚಕ್ರಗಳು ಸ್ಲಿಪ್ ಆಗಲಿದೆ. ಹೀಗಾಗಿ ವಾಹನ ಮುಂದೆಕ್ಕೆ ಚಲಿಸದೇ ನಿಂತಲ್ಲೇ  ಕಾರಿನ ಚಕ್ರಗಳು ಮರಳಿನಲ್ಲಿ ಹೂತುಹೋಗಲಿದೆ.  

click me!