ಭಾರತದಲ್ಲಿ ರೆನಾಲ್ಟ್ ಕ್ಯಾಪ್ಚರ್ ಕಾರು ಸ್ಥಗಿತ; ಬಿಡುಗಡೆಯಾಗಲಿದೆ ನೂತನ ಕಾರು!

By Suvarna News  |  First Published Jun 21, 2020, 3:13 PM IST

ರೆನಾಲ್ಟ್ ಡಸ್ಟರ್, ರೆನಾಲ್ಟ್ ಕ್ವಿಡ್, ರೆನಾಲ್ಟ್ ಟ್ರೈಬರ್ ಸೇರಿದಂತೆ ಹಲವು ಜನಪ್ರಿಯ ಕಾರುಗಳಿಂದ ಭಾರತದಲ್ಲಿ ರೆನಾಲ್ಟ್ ಕಂಪನಿ ಜನರ ವಿಶ್ವಾಸಗಳಿಸಿದೆ. ಆದರೆ ರೆನಾಲ್ಟ್ ಕ್ಯಾಪ್ಚರ್ ಕಾರಿಗೆ ನಿರೀಕ್ಷಿತ ಯಶಸ್ಸ ಸಿಗಲಿಲ್ಲ. ಇದೀಗ ಕ್ಯಾಪ್ಚರ್ ಕಾರು ಭಾರತದಲ್ಲಿ ಸ್ಥಗಿತಗೊಂಡಿದೆ.


ನವದೆಹಲಿ(ಜೂ.21): ರೆನಾಲ್ಟ್ ಡಸ್ಟರ್ ಹಾಗೂ ರೆನಾಲ್ಟ್ ಕ್ವಿಡ್ ಮಾಡಿದ ಮೋಡಿ ರೆನಾಲ್ಟ್ ಕ್ಯಾಪ್ಚರ್ ಕಾರು ಮಾಡಲಿಲ್ಲ. ಬಿಡುಗಡೆಯಾದ ಬಳಿಕ ಇಲ್ಲೀವರೆಗೂ ತಿಂಗಳ ಮಾರಾಟ ಲಿಸ್ಟ್‌ನಲ್ಲಿ ಕಾಣಿಸಿಕೊಳ್ಳದ ಕ್ಯಾಪ್ಚರ್ ಕಾರು ಸ್ಥಗಿತಗೊಂಡಿದೆ.  ಕಡಿಮೆ ಬೇಡಿಕೆ ಹೊಂದಿರುವ ಕಾರಾಗಿರುವ ಕಾರಣ ರೆನಾಲ್ಟ್ ಇಂಡಿಯಾ, ಕ್ಯಾಪ್ಟರ್ ಕಾರನ್ನು ಭಾರತದಲ್ಲಿ ಸ್ಥಗಿತಗೊಳಿಸುತ್ತಿದೆ. ಆದರೆ ಇತರ ದೇಶಗಳಲ್ಲಿ ರೆನಾಲ್ಟ್ ಕ್ಯಾಪ್ಟರ್ ಕಾರು ಮುಂದುವರಿಯಲಿದೆ.

ರೆನಾಲ್ಟ್ ಡಸ್ಟರ್ ಪೆಟ್ರೋಲ್ ಕಾರು ಅನಾವರಣ!.

Tap to resize

Latest Videos

ಕಡಿಮೆ ಬೇಡಿಕೆ, ಹಾಗೂ ನೂತನ ಎಮಿಶನ್ ನಿಯಮದಿಂದ ರೆನಾಲ್ಟ್ ಕ್ಯಾಪ್ಟರ್ ಓಟ ನಿಲ್ಲಿಸುತ್ತಿದೆ. ರೆನಾಲ್ಟ್ ಕ್ಯಾಪ್ಚರ್ BS4 ಎಮಿಶನ್ ಎಂಜಿನ್‌ನಿಂದ BS6ಗೆ ಅಪ್‌ಗ್ರೇಡ್ ಮಾಡುತ್ತಿಲ್ಲ. ರಷ್ಯಾದಲ್ಲಿ   BS6  ಅಪ್‌ಗ್ರೇಡ್ ಮೂಲಕ ರೆನಾಲ್ಟ್ ಕ್ಯಾಪ್ಚರ್ ಬಿಡುಗಡೆಯಾಗಿದೆ. ಕ್ಯಾಪ್ಚರ್ ಬದಲು ರೆನಾಲ್ಟ್ ಇಂಡಿಯಾ ಸಬ್ ಕಾಂಪಾಕ್ಟ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ.

BS6 ಎಂಜಿನ್ ರೆನಾಲ್ಟ್ ಕ್ವಿಡ್ ಬಿಡುಗಡೆ; ಕೇವಲ 9 ಸಾವಿರ ರೂ ಹೆಚ್ಚಳ!

ನಿಸಾನ್ ಕಿಕ್ಸ್ ಮಾದರಿಯಲ್ಲಿ ಇದೀಗ ಕ್ಯಾಪ್ಚರ್ ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ. BS6 ಪೆಟ್ರೋಲ್ ಎಂಜಿನ್, 4 ಸಿಲಿಂಡರ್ ಹಾಗೂ 1.5 ಲೀಟರ್ ಎಂಜಿನ್ ಬಿಡುಗಡೆ ಮಾಡಲಿದೆ. ಈ ಮೂಲಕ ಹ್ಯುಂಡೈ ಕ್ರೆಟಾ ಹಾಗೂ ಕಿಯಾ ಸೆಲ್ಟೋಸ್ ಕಾರಿಗೆ ಪ್ರತಿಸ್ಪರ್ಧಿಯಾಗಿ ರೆನಾಲ್ಟ್ ನೂತನ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.

click me!