ಹೊಸ ಅವತಾರದಲ್ಲಿ ನೂತನ ರೆನಾಲ್ಟ್ ಡಸ್ಟರ್- ಇಲ್ಲಿದೆ ವಿಶೇಷತೆ, ಬೆಲೆ!

By Web Desk  |  First Published Jul 1, 2019, 9:31 PM IST

ರೆನಾಲ್ಟ್ ಡಸ್ಟರ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಹೊಸ ಅವತಾರದಲ್ಲಿ ಡಸ್ಟರ್ ಕಾರು ಬಿಡುಗಡೆಯಾಗುತ್ತಿದೆ. ಇದೀಗ ಡಸ್ಟರ್ ಕಾರಿನ ಟೀಸರ್ ಬಿಡುಗಡೆಯಾಗಿದೆ. 


ನವದೆಹಲಿ(ಜು.01): ಭಾರತದಲ್ಲಿ SUV ಕಾರಿಗೆ ಹೊಸ ಅರ್ಥ ನೀಡಿದ ಕಾರು ಅಂದರೆ ಅದು ರೆನಾಲ್ಟ್ ಡಸ್ಟರ್. ಡಸ್ಟರ್ ಕಾರು ಬಿಡುಗಡೆ ಬಳಿಕ ಭಾರತದ SUV ಕಾರು ವಿಭಾಗದಲ್ಲಿ ಹೊಸ ಬದಲಾವಣೆ ಆರಂಭಗೊಂಡಿತು. ಇತರ ಕಾರು ಕಂಪನಿಗಳು ಆಕರ್ಷಕ SUV ಕಾರುಗಳನ್ನು ಬಿಡುಗಡೆ ಮಾಡಿತು. ಆದರೆ ರೆನಾಲ್ಟ್ ತನ್ನ ಜನಪ್ರಿಯತೆಯನ್ನು  ಹಾಗೆ ಉಳಿಸಿಕೊಂಡಿದೆ. ಇದೀಗ ರೆನಾಲ್ಟ್ ಡಸ್ಟರ್ ಕಾರು ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ರೆನಾಲ್ಟ್ ಟ್ರೈಬರ್ ಬೆಲೆ ಬಹಿರಂಗ- ಕಡಿಮೆ ದರದ MPV ಕಾರು!

Tap to resize

Latest Videos

undefined

ಕಳೆದ  6 ತಿಂಗಳಿಂದ ರೋಡ್ ಟೆಸ್ಟ್ ನಡೆಸುತ್ತಿದ್ದ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಬಿಡುಗಡೆ ಬೆನ್ನಲ್ಲೇ ರೆನಾಲ್ಟ್ ಅಪ್‌ಗ್ರೇಡ್ ಕಾರಿನ ಟೀಸರ್ ಬಿಡುಗಡೆ ಮಾಡಿದೆ. ಹ್ಯುಂಡೈ ಕ್ರೆಟಾ, ನಿಸಾನ್ ಕಿಕ್ಸ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್ ಜುಲೈ 9 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: ದೂರ ಪ್ರಯಾಣ ಮಾಡುವವರಿಗೆ ಸಂತಸದ ಸುದ್ದಿ!​​​​​​​

ನೂತನ ಡಸ್ಟರ್ ಕಾರಿನನಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್ ಬಳಸಲಾಗಿದೆ. ಮುಂಭಾಗದ ಗ್ರಿಲ್ ಡಿಸೈನ್ ಹೆಚ್ಚು ಆಕರ್ಷಕವಾಗಿದೆ. ಗ್ರಿಲ್ ಸೈಡ್‌ಗೆ ಕ್ರೋಮ್ ಫಿನೀಶಿಂಗ್  ಬಳಸಲಾಗಿದೆ. ಫಾಗ್ ಲ್ಯಾಂಪ್ಸ್‌ನಲ್ಲೂ ಬದಲಾವಣೆ ತರಲಾಗಿದೆ. ಹೊಸ ಬಣ್ಣ ಹಾಗೂ ಶೇಡ್ ಕಲರ್‌ಗಳಲ್ಲಿ ನೂತನ ಡಸ್ಟರ್ ಲಭ್ಯವಿದೆ. ಇಂಟೀರಿಯರ್, ಇನ್ಫೋಟೈನ್‌ಮೆಂಟ್ ಸೇರಿದಂತೆ ಹಲವು ಫೀಚರ್ಸ್ ಅಪ್‌ಗ್ರೇಡ್ ಮಾಡಲಾಗಿದೆ. ನೂತನ ಡಸ್ಟರ್ ಬೆಲೆ 7.99ಲಕ್ಷ ರೂಪಾಯಿಯಿಂದ(ಎಕ್ಸ್ ಶೋ ರೂಂ) ಆರಂಭಗೊಳ್ಳಲಿದೆ. ಗರಿಷ್ಠ ಬೆಲೆ 12.15 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

click me!