ರಾಯಲ್ ಎನ್‌ಫೀಲ್ಡ್ ನೂತನ ಬೈಕ್ ಬಿಡುಗಡೆಗೆ ಸಜ್ಜಾಗಿದೆ. ಮಾರುಕಟ್ಟೆಯಲ್ಲಿ ಕಠಿಣ ಸ್ಪರ್ಧೆ ಎದುರಿಸುತ್ತಿರುವ ಎನ್‌ಫೀಲ್ಡ್ ಕಡಿಮೆ ಬೆಲೆಯಲ್ಲಿ 250CC ಬೈಕ್ ಬಿಡುಗಡೆಗೆ ಮುಂದಾಗಿದೆ. 250CC ಬೈಕ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಚೆನ್ನೈ(ಜು.01): ಜಾವಾ ಮೋಟರ್ ಬೈಕ್ ಆಗಮನದಿಂದ ರಾಯಲ್ ಎನ್‌ಫೀಲ್ಡ್ ಬೈಕ್ ತೀವ್ರ ಸ್ಪರ್ಧೆ ಎದುರಿಸುತ್ತಿದೆ. ಕಳೆದ ಮೂರು ತಿಂಗಳಲ್ಲಿ ರಾಯಲ್ ಎನ್‌ಫೀಲ್ಡ್ ಮಾರಾಟದಲ್ಲಿ ಕುಸಿತ ಕಂಡಿದೆ. ರಾಯಲ್ ಎನ್‌ಪೀಲ್ಡ್ ಇಂಟರ್‌ಸೆಪ್ಟರ್ 650 ಸೇರಿದಂತೆ ದುಬಾರಿ ಬೆಲೆಯ ಬೈಕ್ ಬಿಡುಗಡೆ ಮಾಡಿದರೂ ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿಲ್ಲ. ಹೀಗಾಗಿ ಕಡಿಮೆ ಬೆಲೆಯಲ್ಲಿ 250CC ಬೈಕ್ ಬಿಡುಗಡೆ ಮಾಡಲು ಮುಂದಾಗಿದೆ.
ಇದನ್ನೂ ಓದಿ: ಚೆನ್ನೈ ಮೂಲದ ಬ್ಲಾಕ್‌ಸ್ಮಿತ್ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಸದ್ಯದಲ್ಲೇ ಬಿಡುಗಡೆ !
undefined
ಸದ್ಯ ರಾಯಲ್ ಎನ್‌ಫೀಲ್ಡ್ ಎಂಟ್ರಿ ಲೆವೆಲ್ ಬೈಕ್ 350CC ಎಂಜಿನ್ ಹೊಂದಿದೆ. ಇನ್ಮುಂದೆ ರಾಯಲ್ ಎನ್‌ಫೀಲ್ಡ್ ಎಂಟ್ರಿ ಲೆವೆಲ್ ಬೈಕ್ 250CC ಆಗಲಿದೆ. ಸದ್ಯ ಮಾರುಕಟ್ಟೆಯಲ್ಲಿ 250CC- 300CC ಎಂಜಿನ್ ಬೈಕ್ ಹೆಚ್ಚು ಮಾರಾಟವಾಗುತ್ತಿದೆ. ಕಡಿಮೆ ಬೆಲೆ, ಸರಾಸರಿ ಮೈಲೇಜ್ ಗ್ರಾಹಕರನ್ನು ಆಕರ್ಷಿಸುತ್ತಿದೆ. ರಾಯಲ್ ಎನ್‌ಫೀಲ್ಡ್ 350CC ಬೈಕ್ ಬೆಲೆ 1.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಹೀಗಾಗಿ 1 ಲಕ್ಷ ರೂಪಾಯಿ ಒಳಗೆ ಬೈಕ್ ಖರೀದಿಸೋ ಗ್ರಾಹಕರನ್ನು ಆಕರ್ಷಿಸಿಲು ಎನ್‌ಫೀಲ್ಡ್ ಹೊಸ ಪ್ರಯತ್ನಕ್ಕೆ ಕೈಹಾಕಿದೆ.
ಇದನ್ನೂ ಓದಿ: ಭಾರತಕ್ಕೆ ಬರುತ್ತಿದೆ ಚೀನಾದ CF ಮೋಟೋ ಬೈಕ್-ಜುಲೈನಲ್ಲಿ ಅನಾವರಣ!
ರಾಯಲ್ ಎನ್‌ಫೀಲ್ಡ್ ನೂತನ 250CC ಬೈಕ್ ಬೆಲೆ 1 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ಕಡಿಮೆ ಬೆಲೆಯಲ್ಲಿ ಬೈಕ್ ಬಿಡುಗಡೆ ಮಾಡೋ ಮೂಲಕ ಜಾವ ಮೋಟಾರ್ ಬೈಕ್ ಸೇರಿದಂತೆ ಇತರ ಬೈಕ್‌ಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದೆ. ನೂತನ ಬೈಕ್ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ.