
ನವದೆಹಲಿ(ಅ.30): ಭಾರತದಲ್ಲಿ SUV ಕಾರಿಗೆ ಹೊಸ ಆಯಾಮ ನೀಡಿ ರೆನಾಲ್ಟ್ ಡಸ್ಟರ್ ಕಾರು ಕಾರು ಪ್ರೀಯರ ನೆಚ್ಚಿನ ಕಾರಾಗಿ ಹೊರಹೊಮ್ಮಿತ್ತು. 2012ರಲ್ಲಿ ಭಾರತಕ್ಕೆ ಕಾಲಿಟ್ಟ ಈ ರೆನಾಲ್ಟ್ ಡಸ್ಟರ್ ಇತರ SUV ಕಾರುಗಳಿಗೆ ಭಾರಿ ಪೈಪೋಟಿ ನೀಡಿದೆ.
ಹೆಚ್ಚು ಬಲಿಷ್ಠ, ಹೆಚ್ಚು ಆಕರ್ಷಕ ರೆನಾಲ್ಟ್ ಡಸ್ಟರ್ 85ps ಡೀಸೆಲ್ ಇಂಜಿನ್ ಕಾರು ಭಾರತದಲ್ಲಿ ತನ್ನ ಓಟ ನಿಲ್ಲಿಸಿದೆ. ರೆನಾಲ್ಟ್ ಡಸ್ಟರ್ 85ps ಡೀಸೆಲ್ ಕಾರಿಗೆ ಬೇಡಿಕೆ ಇಲ್ಲದ ಕಾರಣ ರೆನಾಲ್ಟ್ ಇಂಡಿಯಾ ಈ ನಿರ್ಧಾರ ತೆಗೆದುಕೊಂಡಿದೆ.
ರೆನಾಲ್ಟ್ ಡಸ್ಟರ್ AMT ಪೆಟ್ರೋಲ್ ಕಾರಿಗಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಪೆಟ್ರೋಲ್ ವೆರಿಯೆಂಟ್ ಕಾರು ಲಭ್ಯವಿದೆ. ಆದರೆ ರೆನಾಲ್ಟ್ ಡಸ್ಟರ್ 85ps ಡೀಸೆಲ್ ಕಾರು ಇನ್ಮುಂದೆ ಲಭ್ಯವಿರೋದಿಲ್ಲ ಎಂದು ರೆನಾಲ್ಟ್ ಇಂಡಿಯಾ ಹೇಳಿದೆ.