HBC ಕಾಂಪಾಕ್ಟ್ SUV ಕಾರು ಬಿಡುಗಡೆ ಖಚಿತ ಪಡಿಸಿದ ರೆನಾಲ್ಟ್!

By Suvarna NewsFirst Published Dec 29, 2019, 6:48 PM IST
Highlights

ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯೂ ಸೇರಿದಂತೆ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರೆನಾಲ್ಟ್ ಕಾರು ಬಿಡುಗಡೆ ಮಾಡುತ್ತಿದೆ. ಕಡಿಮೆ ಬೆಲೆ, ಆಕರ್ಷಕ ವಿನ್ಯಾಸ, ಗರಿಷ್ಠ ಭದ್ರತೆ ಸೇರಿದಂತೆ ಎಲ್ಲಾ ಸೌಲಭ್ಯಗಳು ಈ ಕಾರಿನಲ್ಲಿರಲಿದೆ ಎಂದು ಕಂಪನಿ ಹೇಳಿದೆ. ಈ ಕಾರಿನ ಹೆಚ್ಚಿನ ಮಾಹಿತಿ ಇಲ್ಲಿದೆ.

ನವದೆಹಲಿ(ಡಿ.29): ರೆನಾಲ್ಟ್ ಕ್ವಿಡ್ ಕಾರಿನ ಬಳಿಕ ಕೆಲ ವರ್ಷಗಳ ಕಾಲ ಭಾರತದಲ್ಲಿ ಕಾರು ಬಿಡುಗಡೆಯಿಂದ ದೂರ ಸರಿದಿದ್ದ ರೆನಾಲ್ಟ್ 2019ರಲ್ಲಿ ಟ್ರೈಬರ್ 7 ಸೀಟರ್ ಕಾರು ಬಿಡುಗಡೆ ಮಾಡಿ ಸಂಚನಲ ಮೂಡಿಸಿತು. ಕಡಿಮೆ ಬೆಲೆಯ ಅತ್ಯುತ್ತಮ 7 ಸೀಟರ್ ಕಾರು ಎಂಬ ಹೆಗ್ಗಳಿಕೆಗೆ ರೆನಾಲ್ಟ್ ಟ್ರೈಬರ್ ಪಾತ್ರವಾಗಿದೆ. ಇದರ ಯಶಸ್ಸಿನ ಬೆನ್ನಲ್ಲೇ ಇದೀಗ ರೆನಾಲ್ಟ್ ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡುತ್ತಿದೆ. 

ಇದನ್ನೂ ಓದಿ: ರೆನಾಲ್ಟ್ ಟ್ರೈಬರ್ MPV ಕಾರು ಲಾಂಚ್; ಬೆಲೆ 4.95 ಲಕ್ಷ ರೂ!

ರೆನಾಲ್ಟ್ HBC ಕಾಂಪಾಕ್ಟ್ SUV ಕಾರು ಬಿಡುಗಡೆ ಖಚಿತಪಡಿಸಿದೆ. ಮಾರುತಿ ಬ್ರೆಜಾ, ಹ್ಯುಂಡೈ ವೆನ್ಯೂ, ಮಹೀಂದ್ರ XUV300 ಕಾರು, ಫೋರ್ಡ್ ಇಕೋಸ್ಪೋರ್ಟ್ ಸೇರಿದಂತೆ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರೆನಾಲ್ಟ್ ಕಾರು ಬಿಡುಗಡೆ ಮಾಡುತ್ತಿದೆ. ನೂತನ ಕಾರು 2020ರ ಅಂತ್ಯದಲ್ಲಿ ಬಿಡುಗಡೆಯಾಗಲಿದೆ ಎಂದು ರೆನಾಲ್ಟ್ ಇಂಡಿಯಾ ಖಚಿತ ಪಡಿಸಿದೆ. 

ಇದನ್ನೂ ಓದಿ: ಬರಲಿದೆ ಮಾರುತಿ ಡಿಜೈರ್ ಪ್ರತಿಸ್ಪರ್ಧಿ ರೆನಾಲ್ಟ್ ಕ್ವಿಡ್ ಸೆಡಾನ್ ಕಾರು!.

ನೂತನ ಕಾರು 3 ಸಿಲಿಂಡರ್ ವರ್ಶನ್ ಇರಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ರೆನಾಲ್ಟ್ HBC ಕಾಂಪಾಕ್ಟ್ SUV ಕಾರು 1.3-ಲೀಟರ್, 4 ಸಿಲಿಂಡರ್ ‘HR13’ ಟರ್ಬೋ ಪೆಟ್ರೋಲ್ ಹಾಗೂ 1. ಲೀಟರ್ ಎಂಜಿನ್ ವೇರಿಯೆಂಟ್ ಲಭ್ಯವಿದೆ.  5  ಸ್ವೀಡ್ ಮ್ಯಾನ್ಯುಯೆಲ್ ಹಾಗೂ AMT ಗೇರ್ ಆಯ್ಕೆ ಲಭ್ಯವಿದೆ.

ರೆನಾಲ್ಟ್ ಕ್ವಿಡ್, ಟ್ರೈಬರ್ ರೀತಿಯಲ್ಲಿ ನೂತನ HBC ಕಾಂಪಾಕ್ಟ್ SUV ಕಾರು ಕಡಿಮೆ ಬೆಲೆಯ ಹಾಗೂ ಎಲ್ಲಾ ರೀತಿಯ ಸುರಕ್ಷತೆ ನೀಡುವ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಕಂಪನಿ ಹೇಳಿದೆ. ಸದ್ಯ ಬೆಲೆ ಬಹಿರಂಗವಾಗಿಲ್ಲ. ಈಗಾಗಲೇ ನೂತನ ಕಾರಿನ ತಯಾರಿ ಆರಂಭಗೊಂಡಿದ್ದು, 365 ದಿನವೂ ರೆನಾಲ್ಟ್ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಲು ಸಜ್ಜಾಗಿದೆ ಎಂದು ಕಂಪನಿ ಹೇಳಿದೆ.
 

click me!