ಹೊಸ ವರ್ಷಕ್ಕೆ ಶಾಕ್; ಭಾರತದ ವಾಹನಗಳಿಗೆ ನಿಷೇಧ!

By Suvarna News  |  First Published Dec 28, 2019, 8:31 PM IST

ಹೊಸ ವರ್ಷ ಆಚರಣೆಗೆ ಬಹುತೇಕರ ಪ್ಲಾನ್ ಫಿಕ್ಸ್ ಆಗಿದೆ. ಇನ್ನು ಕೆಲವರದ್ದು ಅನ್‌ಪ್ಲಾನ್ ಟ್ರಿಪ್. ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ. ಕಾರು, ಬೈಕ್ ಏರಿ ಪ್ರಯಾಣ ಮಾಡುವುದೊಂದೆ ಬಾಕಿ. ಆದರೆ ಪ್ರಯಾಣ ಮಾಡೋ ಮುನ್ನ ಕೆಲ ಸೂಚನೆ ಗಮನಿಸುವುದು ಸೂಕ್ತ. ಕಾರಣ ಹೊಸ ವರ್ಷಾಚರಣೆಗೆ ಕೆಲ ಪ್ರದೇಶಗಳಲ್ಲಿ ಭಾರತೀಯ ರಿಜಿಸ್ಟ್ರೇಶನ್ ವಾಹನಗಳಿಗೆ ನಿಷೇಧ ಹೇರಲಾಗಿದೆ.  


ಕಠ್ಮಂಡು(ಡಿ.28): ಈಗ ಬಹುತೇಕರಲ್ಲಿ ಹೆವಿ ಬೈಕ್ ಇದೆ. ಗುಂಪು ಕಟ್ಟಿಕೊಂಡು ಲಾಗ್ ರೈಡ್ ಸದ್ಯದ ಟ್ರೆಂಡ್. ಇನ್ನು ಹೊಸ ವರ್ಷ ಅಂದಾಗ ಕೇಳಬೇಕಾ? ಗಡಿ ಗಾಡಿ ಮುಂದೆ ಸಾಗುವುದೇ ಪುಳಕ. ಹೀಗೆ ಹೊಸ ವರ್ಷಾಚರಣೆಗೆ ಹೆಚ್ಚಿನ ಭಾರತೀಯರು ನೇಪಾಳದ ಪೊಖರಗೆ ತೆರಳುವುದು ಹೆಚ್ಚು. ಪೊಖರ ಹಿಮಾಲದ ತಪ್ಪಲಿನಲ್ಲಿರುವ ಪ್ರದೇಶ. ಅತ್ಯಂತ ಸುಂದರ ಹಾಗೂ ಪ್ರವಾಸಿ ತಾಣ ಹೊಂದಿರುವ ಪೊಖರ ಹೊಸ ವರ್ಷಕ್ಕೆ ತುಂಬಿ ತುಳುಕಲಿದೆ.

ಇದನ್ನೂ ಓದಿ: ಫಾಸ್ಟ್ ಟ್ಯಾಗ್ ಖಾತೆಯಿಂದ ಹೋಯ್ತು 600 ರೂ; ಯಾರಿಗೆ ಹೇಳೋಣ ಪ್ಲಾಬ್ಲೆಮ್?

Latest Videos

undefined

ಈ ಬಾರಿಯ ಹೊಸ ವರ್ಷಕ್ಕೆ ನೇಪಾಳ ಸರ್ಕಾರ, ಪೊಖರ ಪ್ರವೇಶಿಸವು ಭಾರತೀಯ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಕಾರಣ ಹೊಸ ವರ್ಷ ಆಚರಣೆಗೆ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಾರೆ. ಹೀಗಾಗಿ ಭಾರತೀಯ ವಾಹನಗಳಿಂದ ಟ್ರಾಫಿಕ್ ನಿಯಂತ್ರಿಸುವುದು ಕಷ್ಟ. ಹೀಗಾಗಿ ಭಾರತೀಯ ನಂಬರ್ ಪ್ಲೇಟ್ ವಾಹನ ಪೊಖರ ಪ್ರವೇಶಿಸದಂತೆ ನಿಷೇಧ ಹೇರಲಾಗಿದೆ.

ಇದನ್ನೂ ಓದಿ: ಗುಡ್ ಬೈ 2019: ಆಟೋ ಕ್ಷೇತ್ರದಲ್ಲಿ ಅಚ್ಚರಿ ನೀಡಿದ ಟಾಪ್ 10 ಸುದ್ದಿ!

ಹೊಸ ವರ್ಷದಂದು ಜನಸಂದಣಿ, ವಾಹನ ದಟ್ಟಣೆ ಕಡಿಮೆಯಾದಾಗ ಭಾರತೀಯ ವಾಹನಗಳಿಗೆ ಅನುವು ಮಾಡಿಕೊಡಲಾಗುವುದು. ಆದರೆ ಈಗಾಗಲೇ ಪೊಖರ ವಾಹನಗಳಿಂದ ತುಂಬಿದೆ. ಹೀಗಾಗಿ ನಿರ್ಬಂಧ ಅನಿವಾರ್ಯ ಎಂದು ನೇಪಾಳ ಹೇಳಿದೆ. ಭಾರತದಿಂದ ಆಗಮಿಸುವವರಿಗೆ ಇಲ್ಲಿನ ಪಾರ್ಕಿಂಗ್ ವ್ಯವಸ್ಥೆ, ಪಾರ್ಕಿಂಗ್ ಸ್ಥಳ ಸೇರಿದಂತೆ ಇತರ ಮಾಹಿತಿ ತಿಳಿದಿರುವುದಿಲ್ಲ. ಹೀಗಾಗಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಲಿದೆ. ಇದೇ ಕಾರಣಕ್ಕೆ ನಿರ್ಬಂಧ ಹೇರಲಾಗಿದೆ ಎಂದು ನೇಪಾಳ ಸ್ಪಷ್ಟಪಡಿಸಿದೆ.

click me!