ದ್ವಿಚಕ್ರ ವಾಹನ ಮತ್ತು ಕಾರುಗಳು ಕಡ್ಡಾಯವಾಗಿ ತೆಗೆದುಕೊಳ್ಳಲೇಬೇಕಾದ ಥರ್ಡ್‌ಪಾರ್ಟಿ ವಿಮೆಯ ಪ್ರೀಮಿಯಂ ದರವನ್ನು ಜೂನ್ 16ರಿಂದ ಹೆಚ್ಚಿಸಲು ನಿರ್ಧರಿಸಲಾಗಿದೆ.
ನವದೆಹಲಿ: ವಿವಿಧ ಮಾದರಿಯ ದ್ವಿಚಕ್ರ ವಾಹನ ಮತ್ತು ಕಾರುಗಳು ಕಡ್ಡಾಯವಾಗಿ ತೆಗೆದುಕೊಳ್ಳಲೇಬೇಕಾದ ಥರ್ಡ್‌ಪಾರ್ಟಿ ವಿಮೆಯ ಪ್ರೀಮಿಯಂ ದರವನ್ನು ಜೂನ್ 16ರಿಂದ ಹೆಚ್ಚಿಸಲು ನಿರ್ಧರಿಸಲಾಗಿದೆ.
ಸಾಮಾನ್ಯವಾಗಿ ಪ್ರತಿ ವರ್ಷದ ಏಪ್ರಿಲ್ 1ರಿಂದ ನೂತನ ದರಗಳು ಜಾರಿಯಾಗುತ್ತವೆಯಾದರೂ, ಈ ಬಾರಿ ಜೂನ್ 16ರಿಂದ ಹೊಸ ದರ ಜಾರಿಗೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ. ದ್ವಿಚಕ್ರ ಮತ್ತು ಕಾರುಗಳ ವಿಮಾ ಪ್ರೀಮಿಯಂ ದರವು ಕನಿಷ್ಠ ಶೇ.12ರಿಂದ ಗರಿಷ್ಠ ಶೇ.21ರವರೆಗೂ ಹೆಚ್ಚಳವಾಗಲಿದೆ.
ಇದೇ ವೇಳೆ ಖಾಸಗಿ ಮತ್ತು ಸಾರ್ವಜನಿಕ ಸರಕು ಸಾಗಣೆ ವಾಹನಗಳ ಮೇಲಿನ ಥರ್ಡ್ ಪಾರ್ಟಿ ವಿಮೆಯ ಪ್ರೀಮಿಯಂ ಕೂಡಾ ಹೆಚ್ಚಿಸಲಾಗಿದೆ. ಜೊತೆಗೆ ಶಾಲಾ ಬಸ್‌ಗಳ ವಿಮಾ ಪ್ರೀಮಿಯಂ ಕೂಡಾ ಹೆಚ್ಚಳವಾಗಲಿದೆ.
ಹೊಸ ವಿಮಾ ಪ್ರೀಮಿಯಂ ದರ ಕಾರು
ಮಾದರಿ ಹಳೆದರ ಹೊಸ ದರ ಹೆಚ್ಚಳ
1000 ಸಿಸಿಗಿಂತ ಕಡಿಮೆ 1850 2072 ಶೇ.12
1000-1500 ಸಿಸಿ 2863 3221 ಶೇ.12.5
1500 ಸಿಸಿಗಿಂತ ಹೆಚ್ಚಳ 7890 7890 ಶೇ.0
ಹೊಸ ವಿಮಾ ಪ್ರೀಮಿಯಂ ದರ ಬೈಕ್
ಹೊಸ ವಿಮಾ ಪ್ರೀಮಿಯಂ ದರ ಕಾರು
75 ಸಿಸಿಗಿಂತ ಕಡಿಮೆ 427 482 ಶೇ.12.88
75-150 ಸಿಸಿ 720 752 ಶೇ.4.4
150-350 ಸಿಸಿ 985 1193 ಶೇ.21.11
350 ಸಿಸಿಗಿಂತ ಹೆಚ್ಚು 2323 2323 ಶೇ.0