ವಾಹನ ಮೇಲೆ ಸ್ಟಿಕ್ಕರ್ ಅಂಟಿಸಿದವರಿಗೆ ಫೈನ್, ಕೋರ್ಟ್ ಆದೇಶ ಜಾರಿಗೊಳಿಸಿದ ಪೊಲೀಸ್!

By Suvarna NewsFirst Published Jan 31, 2020, 6:08 PM IST
Highlights

ವಾಹನಗಳ ಮೇಲೆ ಜಾತಿ, ಧರ್ಮ, ಪ್ರಚೋದನಾತ್ಮಕ ಸ್ಕಿಕ್ಕರ್ ಅಂಟಿಸಿದವರ ವಿರುದ್ಧ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಇದೀಗ ಸ್ಟಿಕ್ಕರ್ ಅಂಟಿಸಿ ರಾಜಾರೋಶವಾಗಿ ತಿರುಗಾಡುತ್ತಿದ್ದವರಿಗೆ ಸಂಕಷ್ಟ ಶುರುವಾಗಿದೆ.  

ಚಂಡಿಗಢ(ಜ.31): ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಬಳಿಕ ಟ್ರಾಫಿಕ್ ನಿಯಮ ಉಲ್ಲಂಘಿಸುವವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದೀಗ ಪೊಲೀಸರು ವಾಹನ ಮೇಲೆ ಸ್ಟಿಕ್ಕರ್ ಅಂಟಿಸಿದವರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಸ್ಟಿಕ್ಕರ್ ಅಂಟಿಸಿದವರಿಗೆ ದುಬಾರಿ ದಂಡ ಹಾಕಲಾಗುತ್ತಿದೆ.

ಇದನ್ನೂ ಓದಿ: ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಫೋನ್ ಮೂಲಕ ಮಾತನಾಡಿದರೂ ಬೀಳುತ್ತೆ ಫೈನ್!.

ವಾಹನ ಮೇಲೆ ಮೇಲೆ ಜಾತಿ, ಧರ್ಮ, ಕುಟುಂಬದ ಹೆಸರು, ಉದ್ಯೋಗ,  ಪ್ರಚೋದನಾತ್ಮಕ, ವಿವಾದಾತ್ಮಕ ಸ್ಕಿಕ್ಕರ್ ಅಂಟಿಸಿದವರಿಗೆ ದಂಡ ಹಾಕಲಾಗುತ್ತದೆ. ಕಳೆದ ವರ್ಷ ನೋಯ್ಡಾ ಪೊಲೀಸರು ಈ ಆದೇಶ ಜಾರಿಗೊಳಿಸಿದ್ದರು. ಇದೀಗ ಚಂಡಿಗಢ ಪೊಲೀಸರು ಕೋರ್ಟ್ ಆದೇಶವನ್ನು ಜಾರಿಗೊಳಿಸಿದ್ದಾರೆ.

ಇದನ್ನೂ ಓದಿ: ಹೆಲ್ಮೆಟ್ ಧರಿಸಿದ್ದರೆ 26 ಸಾವಿರ ರೂ ಉಳಿಯುತ್ತಿತ್ತು, ಅಪ್ಪ-ಮಗನಿಗೆ ಎದುರಾಯ್ತು ಸಂಕಷ್ಠ!

ಕೋರ್ಟ್ ನೀಡಿದ ಆದೇಶದ ಪ್ರಕರಾ ವಾಹನ ಮೇಲೆ ಯಾವುದೇ ಸ್ಟಿಕ್ಕರ್ ಅಂಟಿಸುವಂತಿಲ್ಲ. ಖಾಸಗಿ ವಾಹನಗಳ ಮೇಲೆ ಪೊಲೀಸ್, ನೇವಿ, ಆರ್ಮಿ, ಏರ್‌ಫೋರ್ಸ್,  ಪ್ರೆಸ್, ಚೇರ್ಮೆನ್, ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತ ಯಾವುದೇ ಸ್ಟಿಕ್ಕರ್ ಅಥವಾ ಪ್ಲೇಟ್ ಅಂಸಿದರೂ ಬೀಳುತ್ತೆ ದುಬಾರಿ ದಂಡ. ವಾಹನ ಮೇಲೆ ರಿಜಿಸ್ಟ್ರೇಶನ್ ನಂಬರ್ ಹೊರತು ಪಡಿಸಿ ಇನ್ಯಾವುದು ಇರುವಂತಿಲ್ಲ. 

ಸ್ಟಿಕ್ಕರ್ ಅಂಟಿಸಿದವರಿಗೆ ಮೊದಲ ಬಾರಿ 500 ರೂಪಾಯಿ ದಂಡ ಹಾಗೂ ಎರಡನೇ ಬಾರಿ 1,000 ರೂಪಾಯಿ ದಂಡ ವಿಧಿಸಲಾಗುತ್ತಿದೆ. 

click me!