ಸುಜುಕಿ ಸಮುರೈ ಬೈಕ್ ಎಂಜಿನ್‌ನಿಂದ ಬೀಟಲ್ ಕಾರು ನಿರ್ಮಿಸಿದ ಯುವಕ!

By Suvarna NewsFirst Published Jan 30, 2020, 5:37 PM IST
Highlights

ಸೂಪರ್ ಕಾರು ಖರೀದಿಸುವುದು ಸಾಮಾನ್ಯರಿಗೆ ಸಾಧ್ಯವಿಲ್ಲ. ಕಾರಣ ಸೂಪರ್ ಕಾರಿನ ಬೆಲೆ ಕೋಟಿ ರೂಪಾಯಿಂದ ಆರಂಭ. ಹೀಗಾಗಿ ಹಲವು ಯುವಕರು ಸಣ್ಣ ಕಾರನ್ನು ಸೂಪರ್ ಕಾರು ರೀತಿ ಮಾಡಿಫಿಕೇಶನ್ ಮಾಡುತ್ತಾರೆ. ಇದೀಗ ಬೈಕ್ ಎಂಜಿನ್ ಬಳಸಿ ಸೂಪರ್ ಕಾರು ನಿರ್ಮಿಸಿದ ಯುವಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಚೆರ್ಥಳ(ಜ.30): ಲ್ಯಾಂಬೋರ್ಗಿನಿ ಸೇರಿದಂತೆ ಸೂಪರ್ ಕಾರು ಎಲ್ಲರಿಗೂ ಕೈಗೆಟುಕುವುದಿಲ್ಲ. ಹೀಗಾಗಿ ಹಲವರು ತಮ್ಮ ಕಾರುಗಳನ್ನು ಅಥವಾ ಕಡಿಮೆ ಬೆಲೆಯಲ್ಲಿ ಕಾರು ಖರೀದಿಸಿ ಮಾಡಿಫಿಕೇಶನ್ ಮಾಡಿಸುತ್ತಾರೆ. ಸುಜುಕಿ ಸಮುರೈ ಹಳೇ ಬೈಕ್ ಎಂಜಿನ್ ಬಳಸಿ ವೋಕ್ಸ್‌ವ್ಯಾಗನ್ ಬೀಟಲ್ ಕಾರು ನಿರ್ಮಿಸಲಾಗಿದೆ.

ಇದನ್ನೂ ಓದಿ: ದುಬಾರಿ ದಂಡದ ಬಳಿಕ ವಾಹನ ಸವಾರರಿಗೆ ಮತ್ತೊಂದು ಶಾಕ್!

ಕೇರಳದ ಚೆರ್ಥಳದ ಯುವಕ ರಾಕೇಶ್ ಬಾಬು ಹೊಸ ಸಾಧನೆ ಮಾಡಿದ್ದಾನೆ. ಈ ಕಾರನ್ನು ಸಂಪೂರ್ಣವಾಗಿ ಮನೆಯಲ್ಲಿ ನಿರ್ಮಿಸಲಾಗಿದೆ. ಸುಜುಕಿ ಸಮುರೈ 2 ಸ್ಟ್ರೋಕ್ ಎಂಜಿನ್ ಬಳಸಲಾಗಿದೆ. ಬೈಕ್‌ನಲ್ಲಿದ್ದ ಗೇರ್ ಬಾಕ್ಸ್ ಕಾರಿಗೂ ಬಳಸಲಾಗಿದೆ. ಇದಕ್ಕೆ ರಿವರ್ಸ್ ಗೇರ್ ಸೇರಿಸಲಾಗಿದೆ. 

 

ಇದನ್ನೂ ಓದಿ: 2020 ಕೇಂದ್ರ ಬಜೆಟ್: ಆಟೋಮೊಬೈಲ್ ಕ್ಷೇತ್ರದ ನಿರೀಕ್ಷೆಗಳೇನು?.

ಎರಡು ಸೀಟಿನ ಈ ಕಾರಿ ವಿನ್ಯಾಸವನ್ನು ವೋಕ್ಸ್‌ವ್ಯಾಗನ್ ಬೀಟಲ್ ಕಾರಿನಿಂದ ಸ್ಪೂರ್ತಿ ಪಡೆದು ನಿರ್ಮಿಸಲಾಗಿದೆ. ಮೆಕಾನಿಕ್ ಆಗಿರುವ ರಾಕೇಶ್ ಬಾಬು ಇದುವರೆಗೆ ವೋಕ್ಸ್‌ವ್ಯಾಗನ್ ಬೀಟಲ್ ಕಾರು ಡ್ರೈವ್ ಮಾಡಿಲ್ಲ, ನೋಡಿಲ್ಲ. ಬೀಟಲ್ ಕಾರಿನ ಚಿತ್ರ ನೋಡಿ ವಿನ್ಯಾಸ ಮಾಡಲಾಗಿದೆ.

ಮೆಟಲ್ ಶೀಟ್‌ನಿಂದ ಕಾರಿನ ಬಾಡಿ ನಿರ್ಮಿಸಲಾಗಿದೆ. ಇನ್ನು ಆಟೋ ರಿಕ್ಷಾ ಚಕ್ರಗಳನ್ನು ಬಳಸಲಾಗಿದೆ. ಈ ಕಾರು ತಯಾರಿಸಲು ರಾಕೇಶ್ ಸತತ 3 ತಿಂಗಳು ಪರಿಶ್ರಮವಹಿಸಿದ್ದಾರೆ. ಪ್ರತಿ ಲೀಟರ್ ಪೆಟ್ರೋಲ‌್‌ಗೆ 30 ಕಿ.ಮಿ ಮೈಲೇಜ್ ನೀಡುತ್ತಿದೆ. 

click me!