ಸುಜುಕಿ ಬರ್ಗಮನ್‌ಗೆ ಪ್ರತಿಸ್ಪರ್ಧಿಯಾಗಿ ಎಪ್ರಿಲಿಯಾ ಮ್ಯಾಕ್ಸಿ ಸ್ಕೂಟರ್ ಬಿಡುಗಡೆಯಾಗುತ್ತಿದೆ. ಈ ಬೈಕ್ ವಿಶೇಷತೆ ಏನು? ಇಲ್ಲಿದೆ ವಿವರ.
ನವದೆಹಲಿ(ಮಾ.14): ಸುಜುಕಿ ಬರ್ಗಮನ್ ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಿ ಇದೀಗ ಎಪ್ರಿಲಿಯಾ ನೂತನ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ನೂತನ ಎಪ್ರಿಲಿಯಾ 160CC ಮ್ಯಾಕ್ಸಿ ಸ್ಕೂಟರ್ ಬಿಡುಗಡೆಗೆ ಸಜ್ಜಾಗಿದೆ. ಬರ್ಗಮನ್‌ಗಿಂತ ಬಲಿಷ್ಠ ಹಾಗೂ ಆಕರ್ಷಕವಾಗಿರುವ ಎಪ್ರಿಲಿಯಾ ಮ್ಯಾಕ್ಸಿ ದಾಖಲೆ ಬರೆಯಲಿದೆ ಎಂದು ಕಂಪನಿ ಹೇಳಿದೆ.
undefined
ಇದನ್ನೂ ಓದಿ: ಸುಜುಕಿ ಬರ್ಗಮನ್ ಸ್ಕೂಟರ್ ವಿಶೇಷತೆ ಇಲ್ಲಿದೆ
ಮ್ಯಾಕ್ಸಿ ಸ್ಕೂಟರ್ ವಿಭಾಗದಲ್ಲಿ ಭಾರತದಲ್ಲಿ, ಸುಜುಕಿ ಬರ್ಗಮನ್ ಮಾತ್ರ ಮಾರುಕಟ್ಟೆಯಲ್ಲಿದೆ. ಇದೀಗ ಎಪ್ರಿಲಿಯಾ 160cc ಸ್ಕೂಟರ್ ಲಗ್ಗೆ ಇಡುತ್ತಿದೆ. ಆದರೆ ಸುಜುಗಿ ಬರ್ಗಮನ್ 125 ಸಿಸಿ ಹೊಂದಿದೆ, ನೂತನ ಎಪ್ರಿಲಿಯಾ 160cc ಎಂಜಿನ್ ಹೊಂದಿದೆ.
ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ನೀಡಿ ಹಾರ್ಲೆ ಡೇವಿಡ್ಸನ್ ಖರೀದಿಸಿ - ಭರ್ಜರಿ ಎಕ್ಸ್‌ಚೇಂಜ್ ಆಫರ್!
ಸಂಪೂರ್ಣವಾಗಿ ಇಟಲಿಯಲ್ಲಿ ಡಿಸೈನ್ ಮಾಡಲಾಗಿರುವ ಎಪ್ರಿಲಿಯಾ ಮ್ಯಾಕ್ಸಿ ಭಾರತದ ಕಂಡೀಷನ್‌ಗೆ ಅನುಗುಣವಾಗಿ ನಿರ್ಮಾಣವಾಗಲಿದೆ. ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿದೆ. ಇದರ ಬೆಲೆ ಹಾಗೂ ಇತರ ಮಾಹಿತಿ ಕುರಿತು ಕಂಪನಿ ಶೀಘ್ರದಲ್ಲೇ ಪ್ರಕಟಣೆ ಹೊರಡಿಸಲಿದೆ.