ಐಷಾರಾಮಿ ಹಹಾಗೂ ದುಬಾರಿ ಕಾರು ಬುಗಾಟಿ ಇದೀಗ 110ನೇ ವಾರ್ಷಿಕೋತ್ವ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಬುಗಾಟಿ ಬೇಬಿ ಕಾರು ಅನಾವರಣ ಮಾಡಿದೆ. ಇದರ ಬೆಲೆ 25.95 ಲಕ್ಷ ರೂಪಾಯಿ. ಈ ಕಾರಿನ ವಿಶೇಷತೆ ಇಲ್ಲಿದೆ.
ಫ್ರಾನ್ಸ್(ಮಾ.14): ಐಷಾರಾಮಿ ಹಾಗೂ ದುಬಾರಿ ಕಾರುಗಳಲ್ಲಿ ಬುಗಾಟಿ ಕಾರು ಮುಂಚೂಣಿಯಲ್ಲಿದೆ. ದುಬಾರಿ ಕಾರು ಅನ್ನೋ ಹೆಗ್ಗಳಿಕೆ ಹೊಂದಿರುವ ಬುಗಾಟಿ ಇದೀಗ ಮಕ್ಕಳಿಗಾಗಿ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. ಬುಗಾಟಿ ಬೇಬಿ ಎಲೆಕ್ಟ್ರಿಕ್ ಕಾರು ಇದೀಗ ಸಂಚಲನ ಮೂಡಿಸಿದೆ.
ಇದನ್ನೂ ಓದಿ: ಬುಗಾಟಿ ಕಾರಿನ ಚಕ್ರ ಬದಲಾಯಿಸೋ ಹಣದಲ್ಲಿ BMW ಕಾರು ಖರೀದಿಸಬಹುದು!
undefined
ಬುಗಾಟಿ ಕಂಪನಿಯ 110ನೇ ವಾರ್ಷಿಕೋತ್ಸವದಲ್ಲಿ ಬುಗಾಟಿ ಬೇಬಿ ಕಾರು ಅನಾವರಣ ಮಾಡಿದೆ. ಈ ಕಾರಿನ ಬೆಲೆ ಬರೋಬ್ಬರಿ 25.95 ಲಕ್ಷ ರೂಪಾಯಿ. 1927ರಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಿದ್ದ ಬೇಬಿ ಕಾರನ್ನು ಇದೀಗ ಕೆಲ ಬದಲಾವಣೆಯೊಂದಿಗೆ ವಾರ್ಷಿಕೋತ್ಸವ ಸಂದರ್ಭದಲ್ಲಿ ಅನಾವರಣ ಮಾಡಿದೆ.
You don’t need a driving license to drive this Bugatti. Presenting the revival of the Baby Bugatti II. Originally designed by Ettore for his son Roland, revived and distributed through https://t.co/2WEZBSWa7V pic.twitter.com/Vfh68ogQxS
— Bugatti (@Bugatti)
ಇದನ್ನೂ ಓದಿ: ದುಬಾರಿ ಬುಗಾಟಿ ಡಿವೋ ಕಾರಿನ 5 ಅಂಶಗಳು ನಿಮಗೆ ಗೊತ್ತಿರಲೇಬೇಕು!
ಈ ಕಾರು ಚಲಾಯಿಸಲು ಲೈಸೆನ್ಸ್ ಬೇಕಿಲ್ಲ. ಇದರ ಗರಿಷ್ಠ ವೇಗ 20 KMPH. 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗಾದರೆ ಇದರ ವೇಗವನ್ನು ಹೆಚ್ಚಿಸುವ ಅವಕಾಶವಿದೆ. ನೂತನ ಬುಗಾಟಿ ಬೇಬಿ 500 ಕಾರುಗಳನ್ನು ಉತ್ಪಾದಿಸಲು ಬುಗಾಟಿ ನಿರ್ಧರಿಸಿದೆ.