ಪ್ರಚಾರದಲ್ಲಿ ರೋಡ್ ಶೋ, ಬೈಕ್ ರ‍್ಯಾಲಿ ನಿಷೇಧ- ಸುಪ್ರೀಂ ಕೋರ್ಟ್‌ಗೆ PIL ಸಲ್ಲಿಕೆ!

By Web Desk  |  First Published Mar 14, 2019, 2:11 PM IST

ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳ ಸಮಾವೇಶ ಶುರುವಾಗಿದೆ. ಈ ಬಾರಿ ಚುನಾವಣಾ ಪ್ರಚಾರದಲ್ಲಿ ಬೈಕ್ ರ‍್ಯಾಲಿ , ರೋಡ್ ಶೋ ನಡೆಸಲು ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಬೈಕ್ ರ‍್ಯಾಲಿ , ರೋಡ್ ಶೋ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿದೆ.


ನವದೆಹಲಿ(ಮಾ.14): ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದರ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಪಕ್ಷಗಳ ಶಕ್ತಿ ಪ್ರದರ್ಶನ, ಸಮಾವೇಶ, ಚುನಾವಣಾ ಪ್ರಚಾರ ಭರಾಟೆ ಜೋರಾಗಿದೆ. ಆದರೆ ಈ ಭಾರಿ ಚುನಾವಣೆ ಪ್ರಚಾರದಲ್ಲಿ ಬೈಕ್ ರ‍್ಯಾಲಿ ಹಾಗೂ ಮುಖಂಡರ ರೋಡ್ ಶೋ ನಿಷೇಧವಾಗುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಚುನಾವಣಾ ದಿನಾಂಕ ನಿಗದಿ ಬೆನ್ನಲ್ಲೇ ಸಚಿನ್, ಕೊಹ್ಲಿ ನೆರವು ಕೇಳಿದ ಮೋದಿ!

Tap to resize

Latest Videos

undefined

ಚುನಾವಣೆ ಪ್ರಚಾರದಲ್ಲಿ ಮುಖಂಡರು ತಮ್ಮ ಶಕ್ತಿ ಪ್ರದರ್ಶನಕ್ಕೆ ಬೈಕ್ ರ‍್ಯಾಲಿ , ರೋಡ್ ಶೋ ಆಯೋಜಿಸುವುದು ಸಾಮಾನ್ಯ. ಇದು ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯ ಹಾಗೂ ಟ್ರಾಫಿಕ್ ಸಮಸ್ಯೆಗೆ ಮೂಲ ಕಾರಣವಾಗುತ್ತಿದೆ. ಇಷ್ಟೇ ಅಲ್ಲ ಬೈಕ್ ರ‍್ಯಾಲಿ ಹಾಗೂ ರೋಡ್‌ ಶೋಗಳಿದ ಸಾರ್ವಜನಿಕರಿಗೂ ಸಮಸ್ಯೆಯಾಗುತ್ತಿದೆ. ಹೀಗಾಗಿ ಚುನಾವಣಾ ಬೈಕ್ ರ‍್ಯಾಲಿ ಹಾಗೂ ರೋಡ್ ಶೋ ನಿಷೇಧಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ PIL ಸಲ್ಲಿಕೆಯಾಗಿದೆ.

ಇದನ್ನೂ ಓದಿ: ಉಡುಪಿ : ಜೆಡಿಎಸ್ ಅಭ್ಯರ್ಥಿಯಾಗ್ತಾರ ಬಿಜೆಪಿ ನಾಯಕ ಜಯಪ್ರಕಾಶ್ ಹೆಗ್ಡೆ?

ಉತ್ತರ ಪ್ರದೇಶದ ಮಾಜಿ ಪೊಲೀಸ್ ಮಹಾ ನಿರ್ದೇಶಕ ವಿಕ್ರಂ ಸಿಂಗ್ ಹಾಗೂ ಪರಿಸರವಾದಿ ಶೈವಿಕಾ ಅಗರ್ವಾಲ್ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. 1900ರ ಬಳಿಕ ಚುನಾವಣಾ ಬೈಕ್  ರ‍್ಯಾಲಿಯಿಂದ ಉಂಟಾದ 87 ಸಮಸ್ಯೆಗಳನ್ನು ಪಟ್ಟಿ ಮಾಡಿ PIL ಸಲ್ಲಿಕೆ ಮಾಡಲಾಗಿದೆ. ಇದರ ಜೊತೆಗೆ ರಾಜಕೀಯ ಮುಖಂಡರ ಬೆಂಗಾವಲು ವಾಹನ 10ಕ್ಕಿಂತ ಹೆಚ್ಚು ವಾಹನಗಳನ್ನ ಬಳಸಬಾರದು. ಇನ್ನು 2 ಬೆಂಗಾವಲು ವಾಹನ ಕನಿಷ್ಟ 200 ಮೀ. ಅಂತರವನ್ನು ಕಾಪಾಡಬೇಕು ಎಂದು PILನಲ್ಲಿ ಮನವಿ ಮಾಡಲಾಗಿದೆ. 

ಇದನ್ನೂ ಓದಿ: ಮೋಟಾರು ನಿಯಮ- ಕಾರು ಮಾಡಿಫೈ ಮಾಡಿದರೆ ಕೇಸ್!

ರಾಜಕೀಯ ಮುಖಂಡರ ರೋಡ್ ಶೋ, ಬೈಕ್  ರ‍್ಯಾಲಿಯಲ್ಲಿ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಲಾಗುತ್ತೆ. ರೋಡ್ ಶೋಗಳಲ್ಲಿ ರಾಜಕೀಯ ಮುಖಂಡರು ಮಾಡಿಫೈ ಮಾಡಿದ ವಾಹನಗಳನ್ನು ಬಳಸುತ್ತಾರೆ. ಇದು ಮೋಟಾರು ಕಾಯ್ದೆಗೆ ವಿರುದ್ಧವಾಗಿದೆ. ಇಷ್ಟಾದರೂ ಇಲ್ಲೀವರೆಗೆ ದೂರು ದಾಖಲಾಗಿಲ್ಲ. ನಿಯಮ ಪಾಲನೆಯಾಗಿಲ್ಲ. ಹೀಗಾಗಿ ಈ ಕುರಿತು ಕಟ್ಟು ನಿಟ್ಟಿನ ಆದೇಶ ಹೊರಡಿಸಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿದೆ.

click me!