ಪ್ರತಿ ದಿನ ಸರಿ ಸುಮಾರು 5 ಲಕ್ಷ ಟ್ರಾಫಿಕ್ ನಿಯಮ ಉಲ್ಲಂಘನೆಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದಾರೆ. ಹೀಗಾಗಿ ಇನ್ನು ಟ್ರಾಫಿಕ್ ನಿಯಮ ಕುರಿತು ಎಚ್ಚರ ವಹಿಸುವುದು ಒಳಿತು.
ಆಗ್ರಾ(ಜ.03): ರಸ್ತೆ ನಿಯಮ ಉಲ್ಲಂಘನೆ ಪೊಲೀಸರಿಗೆ ಸವಾಲಾಗಿ ಪರಿಣಮಿಸುತ್ತಿದೆ. ಹೆಚ್ಚುತ್ತಿರುವ ವಾಹನ, ನಿಯಮ ಪಾಲನೆ ಮಾಡದ ಸವಾರರಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಇದೀಗ ಆಗ್ರಾ ಪೊಲೀಸರು ಫೋಟೋ ಚಲನ್ ಮೂಲಕ ದಂಡ ಕಲೆಹಾಕಲು ಮುಂದಾಗಿದೆ.
ಇದನ್ನೂ ಓದಿ: ಬೀಚ್‌ಗೆ ಹೋದ ಸಚಿವರ ಕಾರಿಗೆ ಬಂತು ಸಂಕಟ-ವಿಡಿಯೋ ವೈರಲ್
undefined
ಆಗ್ರಾದಲ್ಲಿ ಪ್ರತಿ ದಿನ ಸರಾಸರಿ 5 ಲಕ್ಷಕ್ಕೂ ಹೆಚ್ಚಿನ ಟ್ರಾಫಿಕ್ ನಿಯಮಗಳು ಉಲ್ಲಂಘನೆಯಾಗುತ್ತಿದೆ. ಇದರಲ್ಲಿ ಕೇವಲ 300 ಮಂದಿಗೆ ಮಾತ್ರ ದಂಡ ವಿಧಿಸಲಾಗುತ್ತಿದೆ. ಹೀಗಾಗಿ ಹೆಚ್ಚಿನ ಜನರು ರಸ್ತೆ ನಿಯಮ ಉಲ್ಲಂಘಿಸುತ್ತಿದ್ದಾರೆ. ಇದಕ್ಕಾಗಿ ಪೊಲೀಸರು ಫೋಟೋ ಚಲನ್ ಮೂಲಕವೂ ದಂಡ ಕಲೆ ಹಾಕಲು ನಿರ್ಧರಿಸಿದ್ದಾರೆ.
ಏನಿದು ಫೋಟೋ ಚಲನ್:
ಟ್ರಾಫಿಕ್ ಪೊಲೀಸರು ವಿವಿದೆಡೆ ನಿಯಮ ಉಲ್ಲಂಘನೆ ಮಾಡಿದಾಗ ತೆಗೆದ ಫೋಟೋಗಳನ್ನ ಪ್ರಿಂಟ್ ತೆಗೆದು, ವಾಹನ ಸವಾರರ ವಿಳಾಸಕ್ಕೆ ಕಳುಹಿಸಲಾಗುತ್ತಿದೆ. ಪೊಲೀಸರ ಹೈ ರೆಸಲ್ಯೂಶನ್ ಕ್ಯಾಮರ ಮೂಲಕ ತೆಗೆದ ಫೋಟೋಗಳಲ್ಲಿ ಶೇಕಡಾ 90 ರಷ್ಟು ಫೋಟೋಗಳು ನಿಖರ ಮಾಹಿತಿ ನೀಡುತ್ತದೆ. ಹೀಗಾಗಿ ಇದೇ ಫೋಟೋಗಳನ್ನ ಬಳಸಿಕೊಂಡ ಚಲನ್ ಕಳುಹಿಸಲಾಗುತ್ತೆ.
ಇದನ್ನೂ ಓದಿ: 2019ರಲ್ಲಿ 8 ಹೊಸ ನಿಯಮ-ವಾಹನ ಮಾಲೀಕರು, ಸವಾರರೇ ಇರಲಿ ಗಮನ!
ಚಲನ್ ತಲುಪಿದ ಬಳಿಕ ದಂಡ ಪಾವತಿಸಲು ಒಂದು ವಾರಗಳ ಕಾಲವಕಾಶವಿದೆ. ಇಷ್ಟರೊಳಗೆ ದಂಡ ಪಾವತಿಸದಿದ್ದರೆ, ಚಲನ್ ಕೋರ್ಟ್ ತಲುಪಲಿದೆ. ಬಳಿಕ ದಂಡ ಜೊತೆಗೆ ಹೆಚ್ಚಿನ ಹಣವನ್ನೂ ಪಾವತಿಬೇಕಾಗುತ್ತೆ.
ಇದನ್ನೂ ಓದಿ: ಬಜಾಜ್ ಪಲ್ಸಾರ್‌ಗೆ ಗುಡ್ ಬೈ- TVS ಅಪಾಚೆ ಮೊರೆ ಹೋದ ಬೆಂಗಳೂರು ಪೊಲೀಸ್!
ಫೋಟೋ ಚಲನ್ ಈಗಾಗಲೇ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡುವುದರಲ್ಲಿ ಬೆಂಗಳೂರು ಪೊಲೀಸರು ಇತರ ನಗರ ಪೊಲೀಸರಿಗಿಂತ ಮುಂದಿದೆ.
ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: