ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಇದೀಗ 2ನೇ ಬಾರಿಗೆ ಸರ್ಕಾರ ರಚಿಸಲಿದೆ. ಗೆಲುವಿನ ಬೆನ್ನಲ್ಲೇ ಮೋದಿ ಸರ್ಕಾರ ಹೊಸ ಯೋಜನೆ ಜಾರಿಗೆ ತರಲು ಮುಂದಾಗಿದೆ.
ನವದೆಹಲಿ(ಮೇ.24): ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ ಸತತ 2ನೇ ಬಾರಿಗೆ ಸರ್ಕಾರ ರಚಿಸಲಿದೆ. ನರೇಂದ್ರ ಮೋದಿ ಮುಂದಿನ 5 ವರ್ಷ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಲಿದ್ದಾರೆ. ಆರಂಭಿಕ 5 ವರ್ಷದಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿರುವ ಮೋದಿ ಇದೀಗ 2ನೇ ಅವಧಿಯಲ್ಲಿ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರಲಿದ್ದಾರೆ. ಇದೀಗ ಗೆಲುವಿನ ಬೆನ್ನಲ್ಲೇ ಸರ್ಕಾರ ಹೊಸ ಯೋಜನೆ ಜಾರಿಗೆ ಸಿದ್ದತೆ ನಡೆಸಿದೆ.
ಇದನ್ನೂ ಓದಿ: ಶೀಘ್ರದಲ್ಲೇ ಕೈಗೆಟುಕುವ ದರದಲ್ಲಿ ಹಾರ್ಲೆ ಡೇವಿಡ್ಸನ್ ಬೈಕ್ ಬಿಡುಗಡೆ!
undefined
ಮಾಲಿನ್ಯ ತಡೆಯಲು ಈಗಾಗಲೇ ದಿಟ್ಟ ಹೆಜ್ಜೆ ಇಟ್ಟಿರುವ ಮೋದಿ ಸರ್ಕಾರ ಇದೀಗ 2025ರಿಂದ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್ ಮಾತ್ರ ಮಾರಾಟ ಮಾಡಲು ಯೋಜನೆ ರೂಪಿಸುತ್ತಿದೆ. 2025ರ ಬಳಿಕ ಪೆಟ್ರೋಲ್ ಸ್ಕೂಟರ್ ಹಾಗೂ ಬೈಕ್ ಬದಲು ಕೇವಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟ ಮಾಡಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊಸ ಯೋಜನೆ ಜಾರಿ ಮಾಡಲಿದೆ.
ಇದನ್ನೂ ಓದಿ: ಬಜಾಜ್ ಪ್ಲಾಟಿನ ಬೈಕ್ ಮೇಲೆ 2.87 ಲಕ್ಷ ಕಿ.ಮೀ ರೈಡ್-ದಾಖಲೆ ಬರೆದ ರೈತ!
2025ರಿಂದ ಆಟೋ ರಿಕ್ಷಾ ಕೂಡ ಸಂಪೂರ್ಣ ಎಲೆಕ್ಟ್ರಿಕ್ ಮಯವಾಗಲಿದೆ. ಇನ್ನು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ಕೂಡ ಎಲೆಕ್ಟ್ರಿಕ್ ವಾಹನ ಬಳಸಲು ಸರ್ಕಾರ ಮುಂದಾಗಿದೆ. ಈ ಮೂಲಕ ಇಂಧನ ಬಳಕೆ ಹಾಗೂ ಮಾಲಿನ್ಯ ತಡೆಗೆ ಭಾರತ ಮಾದರಿಯಾಗಲಿದೆ.