ಶೀಘ್ರದಲ್ಲೇ ಕೈಗೆಟುಕುವ ದರದಲ್ಲಿ ಹಾರ್ಲೆ ಡೇವಿಡ್ಸನ್ ಬೈಕ್ ಬಿಡುಗಡೆ!

Published : May 21, 2019, 09:45 PM IST
ಶೀಘ್ರದಲ್ಲೇ ಕೈಗೆಟುಕುವ ದರದಲ್ಲಿ ಹಾರ್ಲೆ ಡೇವಿಡ್ಸನ್ ಬೈಕ್ ಬಿಡುಗಡೆ!

ಸಾರಾಂಶ

ಅಮೇರಿಕಾದ ಹಾರ್ಲೇ ಡೇವಿಡ್ಸನ್ ನೂತನ ಬೈಕ್ ಬಿಡುಗಡೆ ಮಾಡಲು ಮುಂದಾಗಿದೆ. ಭಾರತದ ಮಾರುಕಟ್ಟೆ ಗಮನದಲ್ಲಿಟ್ಟು ಬೈಕ್ ಬಿಡುಗಡೆ ಮಾಡುತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ನವದೆಹಲಿ(ಮೇ.21): ಅಮೇರಿಕಾದ ಹಾರ್ಲೆ ಡೇವಿಡ್ಸನ್ ಬೈಕ್ ದುಬಾರಿ ಬೈಕ್‌ಗಳಲ್ಲೊಂದು. ಭಾರತದಲ್ಲಿ ಈ ಬೈಕ್ ಬೆಲೆ ಆರಂಭವಾಗೋದೆ ಸರಿಸುಮಾರು 6 ಲಕ್ಷ ರೂಪಾಯಿಯಿಂದ. ಇನ್ನು ಗರಿಷ್ಠ ಬೆಲೆ 50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದೀಗ ಭಾರತ ಹಾಗೂ ಏಷ್ಯಾ ಬೈಕ್ ಮಾರುಕಟ್ಟೆ ಗಮನದಲ್ಲಿರಿಸಿ ಕೈಗೆಟುಕುವ ದರದಲ್ಲಿ ಹಾರ್ಲೆ ಡೇವಿಡ್ಸನ್ ಬಿಡುಗಡೆ ಮಾಡಲು ಸಜ್ಜಾಗಿದೆ.

ಇದನ್ನೂ ಓದಿ: ಪಲ್ಸಾರ್, KTM ಪ್ರತಿಸ್ಪರ್ಧಿ-ಸುಜುಕಿ ಜಿಕ್ಸರ್ 250 SF ಬಿಡುಗಡೆ!

ಹಾರ್ಲೆ ಡೇವಿಡ್ಸನ್ ಇದೀಗ 250cc- 500cc ಬೈಕ್ ಬಿಡುಗಡೆ ಮಾಡಲು ಮುಂದಾಗಿದೆ. ಇದರ ಅಂದಾಜು ಬೆಲೆ 2.5 ಲಕ್ಷ  ರೂಪಾಯಿ. ಇಷ್ಟೇ ಅಲ್ಲ ಭಾರತದಲ್ಲೇ ಹಾರ್ಲೇ ಡೇವಿಡ್ಸನ್ ಬೈಕ್ ನಿರ್ಮಾಣವಾಗಲಿದೆ. ಇನ್ನು ಏಷ್ಯಾ ಸೇರಿದಂತೆ ಇತರ ರಾಷ್ಟ್ರಗಳಿಗೆ ಭಾರತದಿಂದಲೇ ರಫ್ತಾಗಲಿದೆ.

ಇದನ್ನೂ ಓದಿ: ಬಜಾಜ್ ಪ್ಲಾಟಿನ ಬೈಕ್ ಮೇಲೆ 2.87 ಲಕ್ಷ ಕಿ.ಮೀ ರೈಡ್-ದಾಖಲೆ ಬರೆದ ರೈತ!

2020ರಲ್ಲಿ ಹಾರ್ಲೇ ಡೇವಿಡ್ಸನ್ ನೂತನ ಬೈಕ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಸಿಂಗಲ್ ಸಿಲಿಂಡರ್ ಬೈಕ್ ಬಿಡುಗಡೆ ಮಾಡಲು ಹಾರ್ಲೇ ಮುಂದಾಗಿದೆ ಎನ್ನಲಾಗುತ್ತಿದೆ. ಆದರೆ ಸದ್ಯ ಬೈಕ್ ಕುರಿತು ಹೆಚ್ಚಿನ ವಿವರಗಳು ಬಹಿರಂಗವಾಗಿಲ್ಲ. ಮಂದಿನ ವರ್ಷದ ಆರಂಭದಲ್ಲಿ ಭಾರತದಲ್ಲಿ ಹಾರ್ಲೇ ಡೇವಿಡ್ಸನ್ ನೂತನ ಬೈಕ್‌ಗಳು ಓಟ ಆರಂಭಿಸಲಿದೆ. 

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ