ಬೆಂಗಳೂರಿನಲ್ಲಿ ಟಾಟಾ ಹರಿಯರ್ ಕಾರಿನ ಆನ್ ರೋಡ್ ಬೆಲೆ ಎಷ್ಟು?

By Web Desk  |  First Published Jan 26, 2019, 4:54 PM IST

ಟಾಟಾ ಹರಿಯರ್ SUV ಕಾರು  ಈಗಾಗಲೇ ಬಿಡುಗಡೆಯಾಗಿದೆ. ಡಸ್ಟರ್, ಜೀಪ್ ಕಂಪಾಸ್ ಸೇರಿದಂತೆ ಬಲಿಷ್ಠ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ನೂತನ ಟಾಟಾ ಹರಿಯರ್ ಕಾರಿನ ಆನ್‌ರೋಡ್ ಬೆಲೆ ಎಷ್ಟು? ಇಲ್ಲಿದೆ ಲಿಸ್ಟ್.
 


ಬೆಂಗಳೂರು(ಜ.26): ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿರುವ ಟಾಟಾ ಹರಿಯರ್ ಕಾರು ಭಾರಿ ಸದ್ದು ಮಾಡುತ್ತಿದೆ.  ಜೀಪ್ ಕಂಪಾಸ್, ಹ್ಯುಂಡೈ ಕ್ರೇಟಾ ಸೇರಿದಂತೆ ಹಲವು SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿದಿರುವ ಟಾಟಾ ಹರಿಯರ್ ಕಾರು ವರ್ಷದ ಅತ್ಯುತ್ತಮ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗೋದರಲ್ಲಿ ಯಾವುದೇ ಅನುಮಾನವಿಲ್ಲ.

Tap to resize

Latest Videos

undefined

ಇದನ್ನೂ ಓದಿ: ಹೊಸ ನಿಯಮ - ಕಾರಿನ ರಿಜಿಸ್ಟ್ರೇಶನ್ 10 ವರ್ಷ ಮಾತ್ರ

XE, XM, XT, ಹಾಗೂ XZ ಸೇರಿದಂತೆ ಒಟ್ಟು 4 ವೇರಿಯೆಂಟ್‌ಗಳಲ್ಲಿ Tata Harrier ಕಾರು ಲಭ್ಯವಿದೆ. ಬೆಲೆ 12.69 ಲಕ್ಷ ರೂಪಾಯಿಂದ ಆರಂಭಗೊಳ್ಳಲಿದೆ. ಟಾಪ್ ಮಾಡೆಲ್ ಬೆಲೆ 16.25 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ರಿಜಿಸ್ಟ್ರೇಶನ್, ಇನ್ಶುರೆನ್ಸ್ ಸೇರಿದಂತೆ ಇತರ ಎಲ್ಲಾ ಬೆಲೆಗಳು ಸೇರಿ ಬೆಂಗಳೂರಿನಲ್ಲಿ ಹರಿಯರ್ ಕಾರಿನ ಆನ್‌ರೋಡ್ ಬೆಲೆ 16.07 ಲಕ್ಷ ರೂಪಾಯಿಂದ ಆರಂಭಗೊಳ್ಳಲಿದೆ.

 

After Mumbai, the Harrier was all set to conquer the hearts of its fans in Delhi, Kolkata, Bengaluru, Chennai, Hyderabad, Cochin, Ahmedabad! Here are some incredible moments from the official launch of Harrier that's . pic.twitter.com/x44Xmj1X8e

— Tata Motors (@TataMotors)

 

ಇದನ್ನೂ ಓದಿ: ಮಕ್ಕಳಿಗಾಗಿ ಪುಟ್ಟ ಆಟೋ ರಿಕ್ಷಾ ನಿರ್ಮಿಸಿದ ತಂದೆ!

ಟಾಟಾ ಹರಿಯರ್ ಆನ್‌ರೋಡ್ ಬೆಲೆ

ವೇರಿಯೆಂಟ್ ಎಕ್ಸ್ ಶೋ ರೂಂ ಆನ್‌ರೋಡ್
XE 12.69  ಲಕ್ಷ ರೂ 16.07  ಲಕ್ಷ ರೂ
XM 13.75 ಲಕ್ಷ ರೂ 17.38  ಲಕ್ಷ ರೂ
XT 14.95  ಲಕ್ಷ ರೂ 18.87  ಲಕ್ಷ ರೂ
XZ 16.25  ಲಕ್ಷ ರೂ 20.52  ಲಕ್ಷ ರೂ

 

click me!