ಲಾಕ್‌ಡೌನ್ ಕಾರಣ ಬೈಕ್ ಕದ್ದು ಮನೆಗೆ ತೆರಳಿದ; 2 ವಾರಗಳ ಬಳಿಕ ಕೊರಿಯರ್ ಮಾಡಿದ!

By Suvarna NewsFirst Published Jun 2, 2020, 5:54 PM IST
Highlights

ಲಾಕ್‌ಡೌನ್ ವೇಳೆ ರಸ್ತೆಗಳಿದ ಹಲವು ವಾಹನಗಳನ್ನು ಪೊಲೀಸರು ಸೀಝ್ ಮಾಡಿದ್ದರು. ಹಲವರಿಗೆ ದುಬಾರಿ ದಂಡ ವಿಧಿಸಿದ್ದರು. ಆದರೆ ಇಲ್ಲೊಬ್ಬ ಲಾಕ್‌ಡೌನ್ ಸಮಯದಲ್ಲಿ ಬೈಕ್ ಕದ್ದು ಮನೆಗೆ ತೆರಳಿ ಬಳಿಕ 2 ವಾರಗಳ ಬಳಿಕ ಕೊರಿಯರ್ ಮಾಡಿದ ಘಟನೆ ನಡೆದಿದೆ.
 

ತಮಿಳುನಾಡು(ಜೂ.02): ಲಾಕ್‌ಡೌನ್ ವೇಳೆ ಹಲವು ಸ್ವಾರಸ್ಯಕರ ಘಟನೆಗಳು, ಅಷ್ಟೇ ಭೀಕರತೆ ಘಟನೆಗಳು ನಡೆದಿದೆ. ಡ್ರೋನ್ ಮೂಲಕ ಪಾನ್ ತರಿಸಿ ದಂಡ ಹಾಕಿಸಿಕೊಂಡ ಘಟನೆ ಸೇರಿದಂತೆ ಹಲವು ಘಟನೆಗಳು ನಡೆದಿದೆ. ಇದೀಗ ಇದೇ ಲಾಕ್‌ಡೌನ್ ವೇಳೆ ಊರಿಗೆ ತೆರಳಲು ಯಾವುದೇ ಸಾರಿಗೆ ವ್ಯವಸ್ಛೆ ಇಲ್ಲದ ಕಾರಣ ಹೀರೋ ಸ್ಪ್ಲೆಂಡರ್ ಬೈಕ್ ಕದ್ದು ಮನೆಗೆ ತೆರಳಿದ ಘಟನೆ ನಡೆದಿದೆ. 2 ವಾರಗಳ ಬಳಿಕ ಕೊರಿಯರ್ ಮೂಲಕ ಬೈಕ್ ಮಾಲೀಕನ ಕೈ ಸೇರಿದ್ದೇ ಈ ಘಟನೆಯ ಸ್ವಾರಸ್ಯ.

ಬೆಂಗಳೂರು-ಹಾಸನ ಹೈವೇಯಲ್ಲಿ 100 ಬೈಕ್ ಸವಾರರ ಲಾಂಗ್ ರೈಡ್; ದಂಡ ಹಾಕಿದ ಪೊಲೀಸ್!..

ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಸುರೇಶ್ ಎಂಬಾತ ತನ್ನ ವರ್ಕಶಾಪ್ ಪಕ್ಕದಲ್ಲಿ ಹೀರೆೋ ಸ್ಪ್ಲೆಂಡರ್ ಬೈಕ್ ನಿಲ್ಲಿಸಿದ್ದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ನೋಡಿದಾಗ ಬೈಕ್ ಪಾರ್ಕ್ ಮಾಡಿದಲ್ಲಿ ಇರಲಿಲ್ಲ. ತಕ್ಷಣವೇ ಸುರೇಶ್ ಹುಡುಕಾಟ ಆರಂಭಿಸಿದ್ದಾರೆ. ಆದರೆ ಬೈಕ್ ಎಲ್ಲೂ ಇಲ್ಲ. ಹತ್ತಿರದ ಸೂಲೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. 

ಎಲ್ಲಾ ಪೊಲೀಸರು ಕೊರೋನಾ ವೈರಸ್ ಕರ್ತವ್ಯದಲ್ಲಿದ್ದಾರೆ. ಹೀಗಾಗಿ ಬೈಕ್ ಕಳ್ಳತನ ಪ್ರಕರಣದ ತನಿಖೆ ಈಗ ಸಾಧ್ಯವಿಲ್ಲ. ಲಾಕ್‌ಡೌನ್ ಬಳಿಕವಷ್ಟೇ ತನಿಖೆ ನಡೆಸಲು ಸಾಧ್ಯ ಎಂದು ಪೊಲೀಸರು ಹೇಳಿದ್ದಾರೆ. ಕೊರೋನಾ ವೈರಸ್, ಲಾಕ್‌ಡೌನ್ ಕಾರಣ ಮೊದಲೇ ಸಂಕಷ್ಟದಲ್ಲಿದ್ದ ಸುರೇಶ್‌ಗೆ ದಿಕ್ಕು ತೋಚದಾಗಿದೆ. ಬಳಿಕ ತಾನೇ ತನಿಖೆ ನಡೆಸಲು ಮುಂದಾಗಿದ್ದಾರೆ. ಹತ್ತಿರದ ಸಿಸಿಟಿವಿ ಪರಿಶೀಲನೆಗೆ ಮಂದಾಗಿದ್ದಾರೆ.

ಗೆಳೆಯನಿಗೆ ಡ್ರೋನ್‌ ಮೂಲಕ ಬಂತು ಪಾನ್ ಬೀಡಾ, ಯುವಕನ ಐಡಿಯಾಗೆ ಪೊಲೀಸರಿಂದ ಭರ್ಜರಿ ಗಿಫ್ಟ್

ಸಿಸಿಟಿವಿಯಲ್ಲಿ ವ್ಯಕ್ತಿ ತನ್ನ ಬೈಕ್ ಕಳ್ಳತನ ಮಾಡಿ ತೆರಳುವುತ್ತಿರುವುದು ಬೆಳಕಿಗೆ ಬಂದಿದೆ. ಸಿಟಿಟಿವಿ ದೃಶ್ಯ ಆಧರಿಸಿ ಆತನ ಫೋಟೋ ತೆಗೆದು ಹಲವರಲ್ಲಿ ಮಾಹಿತಿ ಕೇಳಿದ್ದಾನೆ. ಬಳಿಕ ತನ್ನ ಬೈಕ್ ಕದ್ದ  ವ್ಯಕ್ತಿ ಕೊಯಂಬತ್ತೂರಿನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಎಂದು ಗೊತ್ತಾಗಿದೆ. ಬೇಕರಿಗೆ ತೆರಳಿ ಪ್ರಶಾಂತ್ ಕುರಿತು ವಿಚಾರಿಸಿದ್ದಾನೆ. ಆತನ ಊರು ಸರಿಸುಮಾರು 300 ಕಿ.ಮೀ ದೂರದಲ್ಲಿದೆ ಎಂದು ತಿಳಿದಿದೆ.

ಆತನ ಗ್ರಾಮಕ್ಕೆ ತೆರಳಿ ಬೈಕ್ ವಶಪಡಿಸಿಕೊಳ್ಳಲು ಸುರೇಶ್ ಮುಂದಾಗಿದ್ದಾನೆ. ಇತ್ತ ಲಾಕ್‌ಡೌನ್ ಕಾರಣ ಸುರಕ್ಷಿತವಾಗಿ ಮನೆ ಸೇರಲು ಈತ ಬೈಕ್ ಕದ್ದು ಪರಾರಿಯಾಗಿದ್ದಾನೆ. ಮನೆಗೆ ತೆರಳಿದ ಬಳಿಕ, ಕದ್ದಾಗಿದೆ, ಇನ್ನೇನು ಮಾಡುವುದು, ತನ್ನಲ್ಲೇ ಇರಲಿ ಎಂದು ನಿರ್ಧರಿಸಿದ್ದಾರೆ. ಆದರೆ ಕೆಲ ದಿನಗಳ ಬಳಿಕ ಬೈಕ್ ಮಾಲೀಕ ದೂರು ನೀಡಿದ್ದು ಮಾತ್ರವಲ್ಲ, ತನ್ನ ಕುರಿತು ಬೇಕರಿಯಲ್ಲಿ ವಿಚಾರಿಸಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಬೈಕ್‌‌ನಲ್ಲಿದ್ದ ರಿಜಿಸ್ಟ್ರೇಶನ್ ಕಾರ್ಡ್‌ ವಿಳಾಸಕ್ಕೆ ಕೊರಿಯರ್ ಮಾಡಿದ್ದಾನೆ.

ಪ್ರಶಾಂತ್ ಗ್ರಾಮಕ್ಕೆ ತೆರಳಿ ಬೈಕ್ ಪಡೆಯಲು ಮುಂದಾದ ಸುರೇಶ್ ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಕೊರಿಯರ್‌ನಿಂ ಫೋನ್ ಕರೆ ಬಂದಿದೆ. ನಿಮಗೆ ಬೈಕ್ ಕೊರಿಯರ್ ಬಂದಿದೆ. ನಿಮ್ಮ ವಿಳಾಸದ ಹೇಳಿ ಎಂದಿದ್ದಾರೆ. ಕೆಲ ಹೊತ್ತಲ್ಲೇ ಕೊರಿಯರ್ ಮೂಲಕ ಬೈಕ್ ಮಾಲೀಕನ ಕೈಸೇರಿದೆ. ಬೈಕ್ ಸಿಕ್ಕಿದೆ. ಹೀಗಾಗಿ ಕೇಸ್ ಮುಂದುವರಿಸುವುದಿಲ್ಲ ಎಂದು ಸುರೇಶ್ ಹೇಳಿದ್ದಾರೆ.

click me!