ಟೊಯೋಟಾ ಕಿರ್ಲೋಸ್ಕರ್ ಘಟಕದಲ್ಲಿ ಉತ್ಪಾದನೆ ಚುರುಕು; ಮೇ ತಿಂಗಳ ಮಾರಾಟ ವಿವರ ಪ್ರಕಟ!

By Suvarna News  |  First Published Jun 1, 2020, 9:27 PM IST

ಟೊಯೋಟಾ ಕಿರ್ಲೋಸ್ಕರ್ ಬಿಡದಿ ಘಟಕದಲ್ಲಿ ಕಾರುಗಳ ಉತ್ಪಾದನೆ ಚುರುಕುಗೊಂಡಿದೆ. ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ 2 ತಿಂಗಳಿಂದ ಹೆಚ್ಚು ಕಾಲ ಸ್ಥಗಿತಗೊಂಡಿದ್ದ ಕಿರ್ಲೋಸ್ಕರ್ ಘಟಕ, ಪುನರ್ ಆರಂಭಗೊಂಡಿದೆ. ಇಷ್ಟೇ ಅಲ್ಲ ಮೇ ತಿಂಗಳಲ್ಲಿ ಕಾರುಗಳ ಮಾರಾಟ ವಿವರ  ಪ್ರಕಟವಾಗಿದೆ.


ಬೆಂಗಳೂರು(ಜೂ.01):  ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲಿ ಟೊಯೋಟಾ ಕಿರ್ಲೋಸ್ಕರ್ ಬಿಡದಿ ಘಟಕದಲ್ಲಿ ಉತ್ಪಾದನೆ ಚುರುಕುಗೊಂಡಿದೆ. 2020 ರ ಮೇ ತಿಂಗಳಲ್ಲಿ ಕಂಪನಿಯು ಒಟ್ಟು 1639 ಕಾರುಗಳನ್ನು ಮಾರಾಟ ಮಾಡಿದೆ ಎಂದು ಟೊಯೋಟಾ ಕಿರ್ಲೋಸ್ಕರ್(TKM) ಹೇಳಿದೆ.  ಕಳೆದ ವರ್ಷ ಇದೇ ತಿಂಗಳಲ್ಲಿ ಕಂಪನಿಯು ಒಟ್ಟು 12,138 ಯುನಿಟ್‌ಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿತ್ತು, ಜೊತೆಗೆ 928 ಎಟಿಯೋಸ್ ಕಾರನ್ನು ರಫ್ತು ಮಾಡಿತ್ತು.

ಹೊಸ ರೂಪದಲ್ಲಿ ಟಯೋಟಾ ಫಾರ್ಚುನರ್ SUV ಬಿಡುಗಡೆಗೆ ರೆಡಿ!

Tap to resize

Latest Videos

ಮೇ 26 ರಿಂದ ಬಿಡದಿಯಲ್ಲಿನ ಘಟಕದಲ್ಲಿ ಉತ್ಪಾದನೆಯನ್ನು ಪುನರಾರಂಭಿಸುವುದಾಗಿ  ಟೊಯೋಟಾ ಕಿರ್ಲೋಸ್ಕರ್ ಘೋಷಿಸಿತ್ತು.  ದೇಶದಲ್ಲಿನ ಇತರ ಟೊಯೋಟಾ ಘಟಕದಲ್ಲೂ ಮೇ ತಿಂಗಳಲ್ಲಿ ಕಾರುಗಳ ಉತ್ಪಾದನೆ ಆರಂಭಿಸಿತ್ತು.   ಮೇ ತಿಂಗಳ ಮದ್ಯಕ್ಕೆ, ಸುಮಾರು 60% ಟೊಯೋಟಾ ಮಾರಾಟಗಾರರು ಕಾರ್ಯನಿರ್ವಹಿಸುತ್ತಿದ್ದರು. 

ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಕೋಟಿ ರೂ. ನೀಡಿದ ಟೊಯೋಟಾ ಕಿರ್ಲೋಸ್ಕರ್!.

ಮಾಸಿಕ ಮಾರಾಟದ ಬಗ್ಗೆ ಪ್ರತಿಕ್ರಿಯಿಸಿದ ಟಿಕೆಎಂ ಮಾರಾಟ ಮತ್ತು ಸೇವೆಯ ಹಿರಿಯ ಉಪಾಧ್ಯಕ್ಷ ಶ್ರೀ ನವೀನ್ ಸೋನಿ, “ನಾವು ಸರ್ಕಾರಕ್ಕೆ ಕೃತಜ್ಞರಾಗಿರುತ್ತೇವೆ. ಹಾಗೆಯೇ ನಮ್ಮ ಪೂರೈಕೆದಾರ ಮತ್ತು ವ್ಯಾಪಾರಿ ಪಾಲುದಾರರಿಗೆ ಕಳೆದ ತಿಂಗಳು ಉತ್ಪಾದನೆಯನ್ನು ಪುನರಾರಂಭಿಸಲು ನಮಗೆ ಅನುವು ಮಾಡಿಕೊಟ್ಟಿದೆ. ದೇಶದ ವಿವಿಧ ಭಾಗಗಳಲ್ಲಿನ ಡೀಲರ್ ವ್ಯವಹಾರ ಪರಿಸ್ಥಿತಿಗಳ ಬಗ್ಗೆ ನಾವು ಜಾಗೃತರಾಗಿದ್ದೇವೆ ಮತ್ತು ಡೀಲರ್ ಅಗತ್ಯತೆಗಳ ಪ್ರಕಾರ  ಉತ್ಪಾದನೆಗೆ ಆದ್ಯತೆ ನೀಡುತ್ತಿದ್ದೇವೆ.  ಬೇಡಿಕೆ ಕಡಿಮೆ ಇರುವುದರಿಂದ,  ಪರಿಸ್ಥಿತಿಗೆ ತಕ್ಕಂತೆ ಪೂರೈಕೆ ಮಾಡಲಿದ್ದೇವೆ.  ಡಿಜಿಟಲ್ ಪ್ಲ್ಯಾಟ್‌ಫಾರ್ಮ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಗ್ರಾಹಕರ ಆದೇಶಗಳು ಮತ್ತು ವಿಚಾರಣೆಗಳಲ್ಲಿ ಗಮನಾರ್ಹ ಏರಿಕೆ ಕಂಡಿದ್ದೇವೆ ಎಂದರು. 

ಕೊರೋನಾ ಹೋರಾಟಕ್ಕೆ ಮತ್ತಷ್ಟು ನೆರವು; ಆರೋಗ್ಯ ಇಲಾಖೆ ಜೊತೆ ಕೈಜೋಡಿಸಿದ ಟೊಯೋಟಾ ಕಿರ್ಲೋಸ್ಕರ್!.

ನಮ್ಮನ್ನು ಮತ್ತು ನಮ್ಮ ಉತ್ಪನ್ನಗಳನ್ನ ಮೇಲೆ ವಿಶ್ವಾಸವಿರಿಸಿರುವ ಮತ್ತು ನಮ್ಮೊಂದಿಗೆ ತಾಳ್ಮೆಯಿಂದಿರುವ ನಮ್ಮ ಗ್ರಾಹಕರಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ನಾವು ಈಗ ದೇಶಾದ್ಯಂತ 300 ಕ್ಕೂ ಹೆಚ್ಚು ಟೊಯೋಟಾ ಮಳಿಗೆಗಳಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸಿದ್ದೇವೆ, 220 ಮಳಿಗೆಗಳಲ್ಲಿ ಮಾರಾಟ ಕಾರ್ಯಾಚರಣೆಗಳು ಮತ್ತು 230 ಕ್ಕೂ ಹೆಚ್ಚು ಮಳಿಗೆಗಳಲ್ಲಿ ಸೇವಾ ಕಾರ್ಯಾಚರಣೆಗಳು ನಡೆಯುತ್ತಿವೆ. ಮಾರಾಟ ಮತ್ತು ಸೇವಾ ದೃಷ್ಟಿಕೋನದಿಂದ, ವ್ಯವಹಾರವು ಹೆಚ್ಚುತ್ತಿದೆ ಮತ್ತು ತೆರೆದ ಮಳಿಗೆಗಳಿಂದ ನಾವು ನಮ್ಮ ಸಾಮಾನ್ಯ ಸಾಮರ್ಥ್ಯದ 50% ಅನ್ನು ಮೀರುತ್ತಿದ್ದೇವೆ  ಎಂದು ನವೀನ್ ಸೋನಿ ಹೇಳಿದರು. 

click me!