ಅನ್‌ಲಾಕ್1 ಜೂನ್ 8 ರಿಂದ ಜಾರಿಯಾಗಲಿದೆ. ಬಹುತೇಕ ವಲಯಗಳ ಮೇಲಿನ ನಿರ್ಬಂಧ ಸಡಿಲಿಕೆ ಮಾಡಲಾಗುತ್ತಿದೆ. ಹೀಗಾಗಿ ಆಟೋಮೊಬೈಲ್ ಕ್ಷೇತ್ರ ಮಾರಾಟ ಉತ್ತೇಜಿಸಲು ಮುಂದಾಗಿದೆ. ಇದರ ಬೆನ್ನಲ್ಲೇ ಸ್ಥಗಿತಗೊಂಡಿದ್ದ ಉತ್ಪಾದನ ಕಾರ್ಯಗಳು ಚುರುಗೊಂಡಿದೆ. ಹೊಂಡಾ ಕಂಪನಿ ನೂತನ CD 110 ಡ್ರೀಮ್ BS6 ಬೈಕ ಬಿಡುಗಡೆಯಾಗಿದೆ.
ನವದೆಹಲಿ(ಜೂ.02): ಆಟೋಮೊಬೈಲ್ ಉತ್ಪಾದನ ಕಾರ್ಯಚಟುವಟಿಕೆಗೆ ಚುರುಕುಗೊಂಡಿದೆ. ಇತ್ತ ನಿಧಾನವಾಗಿ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಎಪ್ರಿಲ್, ಮೇ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಹಲವು ವಾಹನಗಳು ಜೂನ್ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೀಗ ಹೊಂಡಾ ನೂತನ CD 110 ಡ್ರೀಮ್ BS6 ಬೈಕ್ ಬಿಡುಗಡೆ ಮಾಡಿದೆ. ನೂತನ ಸ್ಕೂಟರ್ ಬೆಲೆ 62,729 ರೂಪಾಯಿ(ಎಕ್ಸ್ ಶೋ ರೂಂ)
BS6 ಹೊಂಡಾ ಶೈನ್ 125 ಸಿಸಿ ಬೈಕ್ ಲಾಂಚ್, ಬೆಲೆ 67 ಸಾವಿರ!.
D 110 ಡ್ರೀಮ್ ಬೈಕ್ ಖರೀದಿಸುವ ಗ್ರಾಹಕರಿಗೆ 6 ವರ್ಷ ವಾರೆಂಟಿ ಆಫರ್ ಕೂಡ ನೀಡಲಾಗುತ್ತಿದೆ. ಆ ಆಪರ್ ಕೆಲ ದಿನಗಳು ಮಾತ್ರ. 110 ಸಿಸಿ ಎಂಜಿನ್ ಹೊಂದಿರುವ ಈ ಬೈಕ್, ಡಿಸಿ ಹೆಡ್‌ಲ್ಯಾಂಪ್ಸ್, ಸ್ಟಾರ್ಟ್ ಬಟನ್, ಸಿಲ್ವರ್ ಅಲೋಯ್ ವೀಲ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ.
1966ರಿಂದ ಹೊಂಡಾ ಸಿಡಿ ಬೈಕ್ ಭಾರತೀಯ ಗ್ರಾಹಕರ ಮನ ಗೆದ್ದಿದೆ. ಬಳಿಕ ಹಲವು ಬಾರಿ ಬದಲಾವಣೆ, ಹೆಚ್ಚುವರಿ ಫೀಚರ್ಸ್‌ನೊಂದಿಗೆ ಸಿಡಿ 110 ಬಿಡುಗಡೆಯಾಗಿದೆ. ಇದೀಗ BS6 ಎಮಿಶನ್ ಎಂಜಿನ್, ಗರಿಷ್ಠ ಮೈಲೇಜ್‌ನೊಂದಿಗೆ ಬೈಕ್ ಬಿಡುಗಡೆಯಾಗಿದೆ. ಈ ಬೈಕನ್ನು ಭಾರತೀಯರು ಯಶಸ್ವಿಗೊಳಿಸುತ್ತಾರೆ ಅನ್ನೋ ನಂಬಿಕೆಯಿದೆ ಎಂದು ಹೊಂಡಾ ಮೋಟರ್‌ಸೈಕಲ್ ಹಾಗೂ ಸ್ಕೂಟರ್ ಲಿಮಿಟೆಡ್ ಸೇಲ್ಸ್ ಹಾಗೂ ಮಾರ್ಕೆಟಿಂಗ್ ನಿರ್ದೇಶ ಯದ್ವಿಂದರ್ ಸಿಂಗ್ ಗುಲೇರಿಯಾ ಹೇಳಿದ್ದಾರೆ.