ಭಾರತದಲ್ಲಿ ಫರ್ಸ್ಟ್ ಎವರ್ BMW 2 ಸೀರೀಸ್ ಗ್ರಾನ್ ಕೂಪೆ ಬಿಡುಗಡೆ!

By Suvarna NewsFirst Published Oct 23, 2020, 7:46 PM IST
Highlights
  • ಬೆಸ್ಟ್-ಇನ್-ಕ್ಲಾಸ್ ಪರ್ಫಾರ್ಮೆನ್ಸ್ ಮತ್ತು ಅಸಂಖ್ಯ ತಂತ್ರಜ್ಞಾನದ ವಿಶೇಷತೆಗಳ ಹೆಚ್ಚಳ 
  • BMW ಇಂಡಿಯಾ ಹಣಕಾಸು ಸರ್ವೀರ್ಸ್‌ನಿಂದ ಆಕರ್ಷಕ ಕೊಡುಗೆಗಳು
  • BMW 360˚ಪ್ಲಾನ್ ಮತ್ತು ಅಶ್ಯೂರ್ಡ್ ಬೈ-ಬ್ಯಾಕ್ ಮೂಲಕ ಸುಲಭ ಮಾಲೀಕತ್ವ
     

ದೆಹಲಿ(ಅ.23) BMW India ಫರ್ಸ್ಟ್ ಎವರ್ BMW 2 ಸೀರೀಸ್ ಗ್ರಾನ್ ಕೂಪೆ ದೇಶದಲ್ಲಿ ಬಿಡುಗಡೆ ಮಾಡಿದೆ. ಸ್ಥಳೀಯವಾಗಿ BMW ಗ್ರೂಪ್ ಪ್ಲಾಂಟ್ ಚೆನ್ನೈನಲ್ಲಿ ಉತ್ಪಾದನೆ ಮಾಡಲಾಗುತ್ತಿರುವ ಕಾರು ಭಾರತದ ಎಲ್ಲಾ BMW ಡೀಲರ್‌ಶಿಪ್‌ಗಳಲ್ಲಿ ಡೀಸೆಲ್ ವೇರಿಯೆಂಟ್‍ನಲ್ಲಿ ಇಂದಿನಿಂದ ಲಭ್ಯವಿದೆ. ಆದರೆ  ಪೆಟ್ರೋಲ್ ವೇರಿಯೆಂಟ್ ನಂತರ ಬಿಡುಗಡೆಯಾಗಲಿದೆ.

3 ತಿಂಗಳಲ್ಲಿ ಎಲ್ಲಾ ಕಾರು ಬುಕ್; ದಾಖಲೆ ಬರೆದ BMW x7

ಫರ್ಸ್ಟ್ ಎವರ್ BMW 2 ಸೀರೀಸ್ ಗ್ರಾನ್ ಕೂಪೆ BMW ಯಶಸ್ವಿ ಫೋರ್-ಡೋರ್ ಕೂಪೆ ಕಾನ್ಸೆಪ್ಟ್ ಅನ್ನು ಮೊಟ್ಟಮೊದಲ ಬಾರಿಗೆ ಈ ಸೆಗ್ಮೆಂಟ್‍ಗೆ ತಂದಿದೆ. ಕಾರು ವೈಯಕ್ತಿಕತೆಯ ಹೊಸ ಡೋಸ್, ಸುಂದರ ನೋಟ ಮತ್ತು ಭಾವನಾತ್ಮಕ ಸಕ್ರಿಯತೆಯಿಂದ ಪ್ರತಿನಿತ್ಯದ ಬಳಕೆಗೆ ತಂದಿದೆ. ಚಾಲನೆಯ ಉತ್ಸಾಹಿಗಳು ಶೀರ್ ಡ್ರೈವಿಂಗ್ ಪ್ಲೆಷರ್ ಹೊಸ ನಿರೂಪಣೆಯನ್ನು ಈ ಪವರ್-ಪ್ಯಾಕ್ ಮಾದರಿಯಲ್ಲಿ ಅನುಭವಿಸಲು ಸಾಧ್ಯವಾಗಲಿದೆ.  ಅತ್ಯಾಧುನಿಕ BMW ಆಗಿ ಫಸ್ರ್ಟ್-ಎವರ್ BMW 2 ಸೀರೀಸ್ ಗ್ರಾನ್ ಕೂಪೆ BMW ವಿಶ್ವಕ್ಕೆ ಮತ್ತು ಮೌಲ್ಯದ ಕಾರ್ಯಕ್ಷಮತೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಗುಣಮಟ್ಟಕ್ಕೆ ಸ್ಟೈಲಿಷ್ ಮತ್ತು ಐಷಾರಾಮದ ಪ್ರವೇಶ ಪಡೆಯಲು ಬಯಸಿದ ಉದ್ದೇಶಿತ ಗುಂಪುಗಳನ್ನು ಆಕರ್ಷಿಸಲಿದೆ. ಈ ಕಾರು ಜೀವನವನ್ನು ಪೂರ್ಣವಾಗಿ ಜೀವಿಸಲು ಬಯಸುವ ವ್ಯಕ್ತಿಗಳಿಗೆ ಅಪ್ರತಿರೋಧ್ಯ ಆಯ್ಕೆಯಾಗಿದೆ ಎಂದು BMW ಗ್ರೂಪ್ ಇಂಡಿಯಾ ಪ್ರೆಸಿಡೆಂಟ್ ವಿಕ್ರಮ್ ಪಾವಾಹ್ ಹೇಳಿದರು.

ಆಕರ್ಷಕ ಫೀಚರ್ಸ್, ಐಷಾರಾಮಿ ಸ್ಪೋರ್ಟ್ ಸೆಡಾನ್ BMW 3 ಸೀರಿಸ್ ಕಾರು ಲಾಂಚ್!..

BMW India ಫರ್ಸ್ಟ್ ಎವರ್ BMW 2 ಸೀರೀಸ್ ಗ್ರಾನ್ ಕೂಪೆ ಸೆಡಾನ್‍ನ ಅನುಕೂಲ ಮತ್ತು ಕೂಪೆಯ ಸ್ಪೋರ್ಟಿನೆಸ್ ಅನ್ನು ಪರಿಪೂರ್ಣವಾಗಿ ಸಂಯೋಜಿಸುತ್ತದೆ. ಇದರ ಸ್ಟೈಲಿಷ್ ವಿನ್ಯಾಸ ಉದ್ದವಾದ ಸಿಲ್ಹೌಟ್ ಮತ್ತು ಫ್ರೇಮ್‍ಲೆಸ್ ಡೋರ್ಸ್ ಮೂಲಕ ಪ್ರತ್ಯೇಕವಾಗಿ ನಿಲ್ಲುತ್ತದೆ. ವಿಶಾಲ ಮತ್ತು ಅತ್ಯಾಧುನಿಕ ಒಳಾಂಗಣ ಎಲ್ಲ ಬಗೆಯ ಪ್ರಯಾಣಕ್ಕೂ ಹೊಂದಿಕೊಳ್ಳುತ್ತದೆ. ಶಕ್ತಿಯುತ ಎಂಜಿನ್ ಈ ಸೆಗ್ಮೆಂಟ್‍ನ ಕಾರ್ಯಕ್ಷಮತೆ ಮತ್ತು ಆಕ್ಸಲರೇಷನ್‍ನ ಶ್ರೇಷ್ಠತೆಯನ್ನು ನೀಡುತ್ತದೆ. ಫಸ್ರ್ಟ್-ಎವರ್ BMW 2ಸೀರೀಸ್ ಗ್ರಾನ್ ಕೂಪೆ ಡೈನಮಿಕ್ ಲೈಫ್‍ಸ್ಟೈಲ್ ಹಾಗೂ ವೈಯಕ್ತಿಕ ಅಭಿರುಚಿಗೆ ಪರಿಪೂರ್ಣವಾಗಿ ಹೊಂದಿಕೊಳ್ಳುತ್ತದೆ. 

ಇದು ಆಕರ್ಷಕ ಡಿಸೈನ್ ವೇರಿಯೆಂಟ್ಸ್-ಸ್ಪೋರ್ಟ್ ಲೈನ್ ಮತ್ತು ಒಸ್ಪೋರ್ಟ್‍ಗಳ ಮೂಲಕ ಕಾಣುತ್ತದೆ. ಸ್ಪೋರ್ಟ್ ಲೈನ್ ತನ್ನ ಸ್ಪೋರ್ಟಿ ಸ್ಟೈಲ್ ಮತ್ತು ಆತ್ಮವಿಶ್ವಾಸದಿಂದ ಹುಮ್ಮಸ್ಸನ್ನು ಸಂಭ್ರಮಿಸುತ್ತದೆ. ಒ ಸ್ಪೋರ್ಟ್ ಅನನ್ಯವಾದ `ಒ’ಡಿಸೈನ್ ಅಂಶಗಳೊಂದಿಗೆ ತನ್ನ ಗಂಡುತನದ ಗುಣವನ್ನು ನೀಡುವ ಮೂಲಕ ರೇಸಿಂಗ್ ಸ್ಫೂರ್ತಿಯನ್ನು ಹೆಚ್ಚಿಸುತ್ತದೆ. ಫಸ್ರ್ಟ್-ಎವರ್ BMW 2 ಸೀರೀಸ್ ಗ್ರಾನ್ ಕೂಪೆ ಪನೋರಮ ಗ್ಲಾಸ್ ಸನ್‍ರೂಫ್, ಪಾರ್ಕಿಂಗ್ ಅಸಿಸ್ಟ್ ವಿಥ್ ರಿವರ್ಸ್ ಅಸಿಸ್ಟ್, ಇಲ್ಯುಮಿನೇಟೆಡ್ ಇಂಟೀರಿಯರ್ ಟ್ರಿಮ್, BMW ಲೈವ್ ಕಾಕ್‍ಪಿಟ್ ಪ್ರೊಫೆಷನಲ್, ಗೆಸ್ಚರ್ ಕಂಟ್ರೋಲ್, ವೈರ್‍ಲೆಸ್ ಚಾರ್ಜಿಂಗ್ ಮತ್ತುBMW ವರ್ಚುಯಲ್ ಅಸಿಸ್ಟೆಂಟ್ ಇತ್ಯಾದಿ ವಿಶೇಷತೆಗಳನ್ನು ಒದಗಿಸುತ್ತದೆ. 

ಫಸ್ರ್ಟ್-ಎವರ್ BMW 2 ಸೀರೀಸ್ ಗ್ರಾನ್ ಕೂಪೆ ಎರಡು ಡೀಸೆಲ್ ಡಿಸೈನ್ ವೇರಿಯೆಂಟ್ಸ್‍ನಲ್ಲಿ ಲಭ್ಯವಿದ್ದು ಅವುಗಳನ್ನು ಸ್ಥಳೀಯವಾಗಿ ಉತ್ಪಾದಿಸಲಾಗುತ್ತದೆ. ಪೆಟ್ರೋಲ್ ವೇರಿಯೆಂಟ್ ಅನ್ನು ನಂತರ ಬಿಡುಗಡೆ ಮಾಡಲಾಗುತ್ತದೆ. ಈ ಕಾರು ಈ ಕೆಳಕಂಡ ಆಕರ್ಷಕ ಪ್ರಾರಂಭಿಕ ಬೆಲೆಗಳಲ್ಲಿ(ಎಕ್ಸ್-ಶೋರೂಂ) ಲಭ್ಯವಿದೆ. 

BMW 220d ಸ್ಪೋರ್ಟ್ ಲೈನ್ = 39,30,000 ರೂಪಾಯಿ (ಎಕ್ಸ್ ಶೋ ರೂಂ)
BMW 220d Mಸ್ಪೋರ್ಟ್  = 41,40,000 ರೂಪಾಯಿ(ಎಕ್ಸ್ ಶೋ ರೂಂ)


BMW 2 ಸೀರೀಸ್ ಗ್ರಾನ್ ಕೂಪೆ ನಾಲ್ಕು ಉತ್ಸಾಹಕರ ಬಣ್ಣಗಳು-ಆಲ್ಪೈನ್ ವೈಟ್(ನಾನ್-ಮೆಟಾಲಿಕ್) ಮತ್ತು ಈ ಕೆಳಕಂಡ ಮೆಟಾಲಿಕ್ ಪೇಂಟ್‍ವಕ್ರ್ಸ್- ಬ್ಲಾಕ್ ಸಫೈರ್, ಮೆಲ್ಬೋರ್ನ್ ರೆಡ್ ಮತ್ತು ಸ್ಟಾರ್ಮ್ ಬೇಗಳಲ್ಲಿ ಲಭ್ಯ. ಒ ಸ್ಪೋರ್ಟ್‍ಲೈನ್ ವಿಶೇಷವಾಗಿ ಸೀಸೈಡ್ ಬ್ಲೂ ಬಣ್ಣದಲ್ಲಿ ಕೂಡ ಲಭ್ಯ. ಅಪ್‍ಹೋಲ್ಸ್‍ಟ್ರಿ ಸಂಯೋಜನೆಯಲ್ಲಿ ಸೆನ್ಸಾಟೆಕ್ ಆಯಿಸ್ಟರ್ | ಬ್ಲಾಕ್ ಮತ್ತು ಸೆನ್ಸಾಟೆಕ್ ಬ್ಲಾಕ್ | ಬ್ಲಾಕ್ ಒಳಗೊಂಡಿವೆ. 

ಸರ್ವೀಸ್ ಇನ್‍ಕ್ಲೂಸಿವ್ ಮತ್ತು ಸರ್ವೀಸ್ ಇನ್‍ಕ್ಲೂಸಿವ್ ಪ್ಲಸ್ ಮಾಲೀಕತ್ವದ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಗ್ರಾಹಕರು ಅವಧಿ ಮತ್ತು ಮೈಲೇಜ್ ಆಧರಿಸಿ ವೈವಿಧ್ಯಮಯ ಸರ್ವೀಸ್ ಪ್ಲಾನ್‍ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ಯಾಕೇಜಸ್‍ನಲ್ಲಿ ಕಂಡೀಷನ್ ಬೇಸ್ಡ್ ಸರ್ವೀಸ್ (CBS) ಮತ್ತು ನಿರ್ವಹಣೆ ಕೆಲಸ ಒಳಗೊಂಡಿದ್ದು ಅದರಲ್ಲಿ 3 ವರ್ಷ / 40,000 ಕಿಲೋಮೀಟರ್ ನಿಂದ 10 ವರ್ಷ / 2,00,000 ಕಿಲೋಮೀಟರ್ ಪ್ಲಾನ್‍ಗಳು ಇರುತ್ತವೆ. ಹೆಚ್ಚುವರಿಯಾಗಿ ಈ ಪ್ಯಾಕೇಜಸ್ ಅನ್ನು ವ್ಯತ್ಯಾಸದ ಮೊತ್ತವನ್ನು ಮಾತ್ರ ಪಾವತಿಸಿ ಚಾಲ್ತಿಯ ಅವಧಿಯಲ್ಲಿ ವಿಸ್ತರಿಸಬಹುದು. ಪೆಟ್ರೋಲ್ ಕಾರುಗಳ ನಿಯಮಿತ ಸರ್ವೀಸ್ ವೆಚ್ಚ ಪ್ರತಿ ಕಿ.ಮೀ.ಗೆ  1 ರೂಪಾಯಿಗಿಂತ ಕಡಿಮೆ. ಇನ್ನು ಡೀಸೆಲ್ ಕಾರುಗಳಿಗೆ ಪ್ರತಿ ಕಿ.ಮೀ.ಗೆ  1.5 ರೂಪಾಯಿಂದ ರಿಂದ ಪ್ರಾರಂಭವಾಗುತ್ತದೆ. ರಿಪೇರ್ ಇನ್‍ಕ್ಲೂಸಿವ್ ವಾರೆಂಟಿ ಅನುಕೂಲಗಳನ್ನು ಸ್ಟಾಂಡರ್ಡ್ ಎರಡು-ವರ್ಷ ವಾರೆಂಟಿ ಅವಧಿ ವಿಸ್ತರಿಸಿದ ನಂತರ ಕಾರ್ಯ ನಿರ್ವಹಣೆಯ ಮೂರನೇ ವರ್ಷದಿಂದ ಆರನೇ ವರ್ಷದವರೆಗೆ ವಿಸ್ತರಿಸುತ್ತದೆ. 

BMW India ಫರ್ಸ್ಟ್ ಎವರ್ BMW 2 ಸೀರೀಸ್ ಗ್ರಾನ್ ಕೂಪೆ ತನ್ನ ಉದ್ದದ ಸ್ಟೇಬಲ್‍ಮೇಟ್ಸ್‍ಗೆ ಸೊಬಗಿನ ಸೌಂದರ್ಯವನ್ನು ಮಿತಿಯಿರದೆ ವರ್ಗಾಯಿಸುತ್ತದೆ. ಎಕ್ಸ್‍ಟೀರಿಯರ್ ಆಧುನಿಕ ಮತ್ತು ಅಥ್ಲೆಟಿಕ್ ಡಿಸೈನ್ ಅನ್ನು ನಿಖರ ಗೆರೆಗಳೊಂದಿಗೆ ಮತ್ತು ಕೆತ್ತಲಾದ ಮೇಲ್ಮೈಗಳೊಂದಿಗೆ ಬೆಳಕು ಮತ್ತು ನೆರಳಿನ ಅದ್ಭುತ ಅನ್ಯೋನ್ಯತೆ ಸೃಷ್ಟಿಸುತ್ತದೆ. ಅದರ ಪ್ರತ್ಯೇಕವಾಗಿ ನಿಲ್ಲುವ ಗುಣವೆಂದರೆ ಅದರ ವಿಸ್ತರಿಸಿದ ಸಿಲ್ಹೌಟ್, ನಾಲ್ಕು ಫ್ರೇಮ್‍ಲೆಸ್ ಡೋರ್ಸ್ ಮತ್ತು ಪ್ರಮುಖವಾದ ಶೌಲ್ಡರ್ ಅ-ಪಿಲ್ಲರ್‍ನೊಂದಿಗೆ ಸೈಡ್ ಟೇಪರ್ ಇದು ಸ್ಪೋರ್ಟಿ, ಕೆಳಗಿನ ಮತ್ತು ವಿಸ್ತಾರವಾದ ನಿಲುವನ್ನು ನೀಡುತ್ತದೆ. ಕೊಂಚ ಕೋನದ ಪೂರ್ಣ- ಐಇಆ ಹೆಡ್‍ಲೈಟ್ಸ್ ಪ್ರಮುಖ ಫೋರ್-ಐಯ್ಡ್ ಫೇಸ್ ರೂಪಿಸುತ್ತದೆ ಮತ್ತು BMW ಕಿಡ್ನಿ ಗ್ರಿಲ್‍ಗೆ ಗಮನ ಸೆಳೆಯುತ್ತದೆ ಇದರಿಂದ ಕ್ಲಾಸಿಕ್ ಐಕಾನ್‍ಗಳಿಗೆ ಹೊಸ ವ್ಯಾಖ್ಯಾನ ನೀಡುತ್ತದೆ. ಪೂರ್ಣ - ಐಇಆ ಟೈಲ್-ಲೈಟ್ಸ್ ಹಿಂಬದಿಯ ಕೊನೆಯ ಮಧ್ಯಭಾಗದವರೆಗೆ ವಿಸ್ತರಿಸುತ್ತದೆ ಮತ್ತು ಅಚ್ಚುಮೆಚ್ಚಿನ BMW ‘ಐ’ ಆಕಾರಕ್ಕೆ ಸಂಪೂರ್ಣ ಹೊಸತನ ನೀಡುತ್ತದೆ ಅದಕ್ಕೆ ಸಿಂಗಲ್ ಸ್ಲಿಮ್ ಎಲಿಮೆಂಟ್ 
ಮತ್ತು ಬದಿಯಲ್ಲಿನ ವಿಶಿಷ್ಟ ಸ್ವೀಪ್ ಕಾರಣವಾಗಿದೆ. 

ಸ್ಪೋರ್ಟಿ ನೋಟದ ಹೊರತಾಗಿಯೂ ಇಂಟೀರಿಯರ್ ಕ್ಯಾಬಿನ್ ವೈಶಾಲ್ಯತೆ ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಡ್ರೈವರ್-ಫೋಕಸ್ಡ್ ಕಾಕ್‍ಪಿಟ್ ವಿಶಿಷ್ಟ ವಸ್ತುಗಳೊಂದಿಗೆ ಇದೆ. ಹೊಸದಾಗಿ ವಿನ್ಯಾಸಗೊಳಿಸಲಾದ ಸ್ಪೋರ್ಟ್ ಸೀಟ್ಸ್ ಎಲೆಕ್ಟ್ರಿಕಲ್ ಮೆಮೊರಿ ಫಂಕ್ಷನ್‍ನೊಂದಿಗೆ ಮಹತ್ತರವಾದ ದೂರ ಪ್ರದೇಶದ ಸೌಖ್ಯ ನೀಡುತ್ತದೆ. ಸೊಬಗಿನ ಕೂಪೆ ಮಾದರಿ ಉದಾರ ಕ್ಯಾಬಿನ್ ಸ್ಥಳದೊಂದಿಗೆ ಹಿಂಬದಿಯ ಪ್ರಯಾಣಿಕರಿಗೆ ಸುಲಭ ಪ್ರವೇಶದೊಂದಿಗೆ ಸ್ವಾಗತಿಸುತ್ತದೆ ಮತ್ತು ವಿಶಾಲ ಕಾಲುಚಾಚಲು ಅವಕಾಶವಿದೆ. ವೈಶಾಲ್ಯತೆಯ ಭಾವನೆಗೆ ಸ್ಟಾಂಡರ್ಡ್ ದೊಡ್ಡ ಪನೋರಮ ಗ್ಲಾಸ್ ರೂಫ್ ನೆರವಾಗುತ್ತದೆ. ದೊಡ್ಡ 430 ಲೀಟರ್ಸ್ ಲಗೇಜ್ ಕಂಪಾರ್ಟ್‍ಮೆಂಟ್ ಅನ್ನು 40/20/40 ಸ್ಪ್ಲಿಟ್ ರಿಯರ್ ಸೀಟ್ ಬ್ಯಾಕ್‍ರೆಸ್ಟ್ ಮೂಲಕ ಮಡಚಿ ವಿಸ್ತರಿಸಬಹುದು. ರಿಯರ್ ಸೀಟ್ ಅನ್ನು ಹೆಚ್ಚು ಸ್ಥಳ ಸೃಷ್ಟಿಸಲು ಮಡಚಬಹುದು. ಇಲ್ಯುಮಿನೇಟೆಡ್ ಟ್ರಿಮ್, ಈ ಸೆಗ್ಮೆಂಟ್‍ನಲ್ಲಿ ಪ್ರಥಮ, ಹಗಲಿನಲ್ಲಿ ಸಾಮಾನ್ಯ ಬೆಳಕನ್ನು ಉಳಿಸಿಕೊಳ್ಳುತ್ತದೆ ಕತ್ತಲಿನಲ್ಲಿ ಅಲಂಕಾರಿಕ ದೀಪಗಳ ಅಂಶಗಳು ಸ್ಥಳವನ್ನು ರೂಪಿಸುವ ಪರಿಣಾಮ ನೀಡುತ್ತವೆ. ಆಂಬಿಯೆಂಟ್ ಲೈಟಿಂಗ್ ಆರು ಡಿಮ್ಮಬಲ್ ಡಿಸೈನ್‍ಗಳೊಂದಿಗೆ ಪ್ರತಿ ಮನಸ್ಥಿತಿಗೂ ವಾತಾವರಣ ಸೃಷ್ಟಿಸುತ್ತದೆ. 

ಕಾರು ಫ್ರಂಟ್-ವ್ಹೀಲ್-ಡ್ರೈವ್ ಆರ್ಕಿಟೆಕ್ಚರ್ ಹೊಂದಿದ್ದು ಅದರಲ್ಲಿ ಎಂಜಿನ್ ಅಡ್ಡಲಾಗಿರಿಸಲಾಗುತ್ತದೆ, ಇದರಿಂದ ಡ್ರೈವಿಂಗ್ ಡೈನಮಿಕ್ಸ್‍ಗೆ ರಾಜಿಯಾಗದೆ ಸ್ಥಳ ಉಳಿಸುತ್ತದೆ. ಅಂಡರ್‍ಸ್ಟೀರಿಂಗ್ ಕಡಿಮೆ ಮಾಡಲು, ಂಖಃ ಟೆಕ್ನಾಲಜಿ (ಆಕ್ಚುಯೇಟರ್ ಕಂಟಿಗ್ಯುಯಸ್ ವ್ಹೀಲ್ ಸ್ಲಿಪ್ ಲಿಮಿಟೇಷನ್ ಸಿಸ್ಟಂ),  (ಡ್ರೈವಿಂಗ್ ಸ್ಟೆಬಿಲಿಟಿ ಕಂಟ್ರೋಲ್) ಸಂಯೋಜನೆಯೊಂದಿಗೆ ಕೆಲಸ ಮಾಡುತ್ತದೆ. BMW ಪರ್ಫಾರ್ಮೆನ್ಸ್ ಕಂಟ್ರೋಲ್ ಸಿಸ್ಟಂ ಕಾರಿನ ಸ್ಥಿರತೆಯನ್ನು ಚಕ್ರಗಳ ಉದ್ದೇಶಿತ ಬ್ರೇಕಿಂಗ್ ಮೂಲಕ ಹೆಚ್ಚಿಸುತ್ತದೆ. 

ಈ ವಿಭಾಗದಲ್ಲಿ ಅತ್ಯಂತ ಶಕ್ತಿಯುತ ಎಂಜಿನ್ ಶ್ರೇಷ್ಠ ಕಾರ್ಯಕ್ಷಮತೆ ಮತ್ತು ಆಕ್ಸಲರೇಷನ್ ನೀಡುತ್ತದೆ. BMW ಟ್ವಿನ್ ಪವರ್ ಟರ್ಬೊ ಡೀಸೆಲ್ ಎಂಜಿನ್ ಗರಿಷ್ಠ ಶಕ್ತಿಯನ್ನು ಅಸಾಧಾರಣ ದಕ್ಷತೆಯೊಂದಿಗೆ ಬೆಸೆಯುತ್ತದೆ ಮತ್ತು ತಕ್ಷಣದ ಪ್ರತಿಕ್ರಿಯೆಯನ್ನು ಕಡಿಮೆ ಎಂಜಿನ್ ಸ್ಪೀಡ್‍ಗಳಲ್ಲೂ ನೀಡುತ್ತದೆ. BMW 220ಜ ರ ಟು-ಲೀಟರ್ ಫೋರ್-ಸಿಲಿಂಡರ್ ಡೀಸೆಲ್ ಎಂಜಿನ್ 190 hP  ಔಟ್‍ಪುಟ್ ಉತ್ಪಾದಿಸುತ್ತದೆ ಮತ್ತು ಗರಿಷ್ಠ ಟಾರ್ಕ್1,750 – 2,500ನಲ್ಲಿ  400NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 

click me!