ಡಚ್ ಮೂಲದ PAL-V ಕಂಪೆನಿ ಇದೀಗ ಭಾರತದಲ್ಲಿ ಹಾರುವ ಕಾರನ್ನ ಬಿಡುಗಡೆ ಮಾಡಲು ಮುಂದಾಗಿದೆ. ನೂತನ ಹಾರುವ ಕಾರಿನ ವಿಶೇಷತೆ ಏನು? ಇದರ ಬೆಲೆ ಎಷ್ಟು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಹಮ್ಮದಾಬಾದ್(ಜ.19): ನಗರೀಕರಣ, ವಾಹನ ದಟ್ಟಣೆ, ಟ್ರಾಫಿಕ್ ಸಮಸ್ಯೆಗಳಿಂದ ಪ್ರಯಾಣ ದುಸ್ಥರವಾಗಿದೆ. ಹೀಗಾಗಿ ಭವಿಷ್ಯದಲ್ಲಿ ಹಾರುವ ಕಾರು ಇದಕ್ಕೆಲ್ಲಾ ಪರಿಹಾರ ಅನ್ನೋ ಮಾತು ಹಲವು ವರ್ಷಗಳಿಂದ ಕೇಳಿಬರುತ್ತಿತ್ತು. ಇದೀಗ ಈ ಕಾಲ ಸನಿಹವಾಗುತ್ತಿದೆ. ಶೀಘ್ರದಲ್ಲೇ ಭಾರತಕ್ಕೆ ಹಾರುವ ಕಾರುಗಳು ಲಗ್ಗೆ ಇಡುತ್ತಿದೆ.
undefined
ಇದನ್ನೂ ಓದಿ: ಕೈ ಶಾಸಕನಿಂದ ಸಿದ್ದರಾಮಯ್ಯಗೆ ಕೋಟಿ ಮೌಲ್ಯದ ಕಾರು ಗಿಫ್ಟ್!
ಗುಜರಾತ್‌ನಲ್ಲಿ ಆಯೋಜಿಸಿರುವ ವೈಬ್ರೆಂಟ್ ಗುಜರಾತ್ ಎಕ್ಸ್ಪೋದಲ್ಲಿ ಫ್ಲೇಯಿಂಗ್ ಕಾರು(ಹಾರುವ ಕಾರು) ಪರಿಚಯಿಸಲಾಗಿದೆ. ಡಚ್ ಮೂಲದ PAL-V ಕಂಪೆನಿ ಇದೇ ಮೊದಲ ಬಾರಿಗೆ ಕಮರ್ಷಿಯಲ್ ಹಾರುವ ಕಾರನ್ನ ತಯಾರಿಸಿದೆ. ಇದೀಗ ಗುಜರಾತ್ ವೈಬ್ರೆಂಟ್ ಕಾರ್ಯಕ್ರಮದಲ್ಲಿ ಈ ಕಾರು ಇದೀಗ ಎಲ್ಲರ ಗಮನಸೆಳೆದಿದೆ.
ಇದನ್ನೂ ಓದಿ: ಶೀಘ್ರದಲ್ಲೇ ಎಪ್ರಿಲಿಯಾ 300 ಸಿಸಿ ಆಟೋಮ್ಯಾಟಿಕ್ ಸ್ಕೂಟರ್!
ಜೀರೋ ಟೈಪ್ ಏರ್‌ಕ್ರಾಫ್ಟ್ ಎಂಜಿನ್ ಹೊಂದಿರುವ ಈ ಹಾರುವ ಕಾರು 3 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. PAL-V ಲಿಬರ್ಟ್ ಹಾರುವ ಕಾರಿನ ಬೆಲೆ 4.18 ಕೋಟಿ ರೂಪಾಯಿ, ಪಯೋನಿಯರ್ ಎಡಿಶನ್ ಬೆಲೆ 3.78 ಕೋಟಿ ಹಾಗೂ ಲಿಬರ್ಟಿ ಸ್ಪೋರ್ಟ್ ಮಾಡೆಲ್ ಬೆಲೆ 2.52 ಕೋಟಿ ರೂಪಾಯಿ. 2021ಕ್ಕೆ ಈ ಹಾರುವ ಕಾರು ಎಂಟ್ರಿ ಕೊಡಲಿದೆ.