ಅಲ್ಟೋ to ಬ್ರಿಜಾ: ಈ ವರ್ಷ ಬಿಡುಗಡೆಯಾಲಿದೆ 12 ಮಾರುತಿ ಕಾರು!

By Web Desk  |  First Published Jan 19, 2019, 3:13 PM IST

2019ರಲ್ಲಿ ಮಾರುತಿ ಸುಜುಕಿ  ಭಾರತದ ಮಾರುಕಟ್ಟೆ ಸಂಪೂರ್ಣವಾಗಿ ಆಕ್ರಮಿಸಿಕೊಳ್ಳಲು ಮುಂದಾಗಿದೆ. ಈ ವರ್ಷ ಬರೋಬ್ಬರಿ 12 ಕಾರುಗಳನ್ನ ಬಿಡುಗಡೆ ಮಾಡಲು ಮುಂದಾಗಿದೆ. ಈ ವರ್ಷ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಸಂಸ್ಥೆಯ ಕಾರುಗಳ ವಿವರ ಇಲ್ಲಿದೆ.


ಬೆಂಗಳೂರು(ಜ.19): ಭಾರತದ ಕಾರು ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಆಕ್ರಮಿಸಿಕೊಂಡಿರುವ ಮಾರುತಿ ಸುಜುಕಿ ಈ ವರ್ಷ ಬರೋಬ್ಬರಿ 12 ಕಾರುಗಳನ್ನ ಬಿಡುಗಡೆ ಮಾಡಲಿದೆ. ಇದರಲ್ಲಿ ಒಂದು ಎಲೆಕ್ಟ್ರಿಕ್ ಕಾರು ಕೂಡ ಸೇರಿದೆ. ಮಾರುತಿ ಅಲ್ಟೋದಿಂದ ಹಿಡಿದು ವಿಟಾರ ಬ್ರಿಜಾ ವರೆಗಿನ ಫೇಸ್‌ಲಿಫ್ಟ್ ವರ್ಶನ್ ಕಾರುಗಳು ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ಶೀಘ್ರದಲ್ಲೇ ಇನೋವಾ ರೀತಿಯ ಕಡಿಮೆ ಬೆಲೆಯ ರೆನಾಲ್ಟ್ ಕಾರು ಬಿಡುಗಡೆ!

Latest Videos

undefined

ಕಾನ್ಸೆಪ್ಟ್ ಫ್ಯುಚರ್ S(Y1K)


ಕಾನ್ಸೆಪ್ಟ್ ಫ್ಯುಚರ್ S(Y1K) ಕಾರು ಸಣ್ಣ ಗಾತ್ರದ SUV ಕಾರು. ಮೈಕ್ರೋ SUV ಕಾರಿನತ್ತ ಚಿತ್ತ ಹರಿಸಿರುವ ಮಾರುತಿ ಸುಜುಕಿ ಶೀಘ್ರದಲ್ಲೇ ಈ ಕಾರು ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ. ಇನ್ನು ಈ ಕಾರಿಗೆ ಜೆನ್ ಎಂದು  ಹೆಸರಿಡಲು ಮಾರುತಿ ಮುಂದಾಗಿದೆ.

ಅಲ್ಟೋ


ಭಾರತದಲ್ಲಿ ಗರಿಷ್ಠ ಮಾರಾಟವಾದ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರೋ ಅಲ್ಟೋ ಕಾರು ಇದೀಗ ಹೊಸ ಅವತಾರದಲ್ಲಿ ಮಾರುಕಟ್ಟೆ ಲಗ್ಗೆ ಇಡಲು ಸಜ್ಜಾಗಿದೆ. ಕೆಲ ಬದಲಾವಣೆಯೊಂದಿಗೆ ಮಾರುತಿ ಅಲ್ಟೋ ಮತ್ತೆ ರಸ್ತೆಗಿಳಿಯಲಿದೆ. ಇದಕ್ಕಾಗಿ ಮಾರುತಿ ಸುಜುಕಿ ಸಿದ್ದವಾಗಿದೆ.

ಇಕೋ


ಮಾರುತಿ ಸುಜುಕಿ ಸಂಸ್ಥೆಯ ಒಮ್ಮಿ ಕಾರು 2019ರಿಂದ ನಿರ್ಮಾಣ ಸ್ಥಗಿತಗೊಳಿಸುತ್ತಿದೆ. ಹೀಗಾಗಿ ಮಾರುತಿ ಇದೀಗ ಇಕೋ ಕಾರನ್ನ ಕೆಲ ಬದಲಾವಣೆಗಳೊಂದಿಗೆ ಬಿಡುಗಡೆ ಮಾಡುತ್ತಿದೆ. ಕೇಂದ್ರ ಸರ್ಕಾರದ ನೂತನ ನಿಯಮಗಳಿಗೆ ಅನುಸಾರವಾಗಿ ಇಕೋ ಕಾರು ಬಿಡುಗಡೆಯಾಗಲಿದೆ.

ಸೆಲೆರಿಯೋ


ಮಾರುತಿ ಸುಜುಕಿಯ ಸಣ್ಣ ಕಾರು ವಿಭಾದದಲ್ಲಿ ಸೆಲೆರಿಯೋ ಜನರ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ. ಇದೀಗ ಸೆಲೆರಿಯೋ ಕಾರು ಹೆಚ್ಚುವರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ.

ವ್ಯಾಗನ್ಆರ್


ಜನವರಿ 23 ರಂದು ನೂತನ ವ್ಯಾಗನ್‌ಆರ್ ಬಿಡುಗಡೆಯಾಗಲಿದೆ. ಹಿಂದಿಗಿಂತ ಹೆಚ್ಚು ಆಕರ್ಷಕ, ಗಾತ್ರದಲ್ಲೂ ದೊಡ್ಡದಾಗಿರೋ ವ್ಯಾಗನ್‌ಆರ್ ಕಾರು ರಸ್ತೆಗಿಳಿಯಲಿದೆ. 1.2 ಲೀಟರ್ ಎಂಜಿನ್  ಹಾಗೂ ಆಕರ್ಷಕ ವಿನ್ಯಾಸದೊಂದಿಗೆ ಕೆಲ ದಿನಗಳಲ್ಲೇ ಬಿಡುಗಡೆಯಾಗಲಿದೆ.

ವ್ಯಾಗನ್‌ಆರ್ ಎಲೆಕ್ಟ್ರಿಕ್


ಮಾರುತಿ ಸುಜುಕಿ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗಾಗಲೆ ರೋಡ್ ಟೆಸ್ಟ್ ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ಯಶಸ್ವಿಯಾಗಿರುವ ವ್ಯಾಗನ್‌ಆರ್ ಎಲೆಕ್ಟ್ರಿಕ್ ಕಾರು ಇದೇ ವರ್ಷ ಬಿಡುಗಡೆಯಾಗಲಿದೆ.

ಇಗ್ನಿಸ್


ಇಗ್ನಿಸ್ ಕಾರು ಹೆಚ್ಚುವರಿ ಫೀಚರ್ಸ್ ಹಾಗೂ ಕೆಲ ಬದಲಾವಣೆಯೊಂದಿಗೆ ರಸ್ತೆಗಿಳಿಯುತ್ತಿದೆ. ಹೆಚ್ಚು ಪವರ್‌ಫುಲ್ ಎಂಜಿನ್ ಹೊಂದಿರುವ ಇಗ್ನಿಸ್ ಈ ವರ್ಷದಲ್ಲಿ ಸಂಚಲನ ಮೂಡಿಸಲಿದೆ ಅನ್ನೋದು ಕಂಪೆನಿ ವಿಶ್ವಾಸ.

ಬಲೆನೋ


ಭಾರತದ ಅತ್ಯುತ್ತಮ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರೋ ಬಲೆನೊ ಕಾರು ಜನವರಿಗೆ 27 ರಂದು ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ. ಫೇಸ್‌ಲಿಫ್ಟ್ ವರ್ಶನ್ ಬಲೆನೋ ಕಾರು ಈ ವರ್ಷವೂ ಮಾರಾಟದಲ್ಲಿ ದಾಖಲೆ ಬರೆಯಲಿದೆ ಅನ್ನೋದು ಕಂಪೆನಿ ವಿಶ್ವಾಸ.

ವಿಟಾರ ಬ್ರಿಜಾ ಪೆಟ್ರೋಲ್


SUV ಕಾರುಗಳಲ್ಲಿ ಭಾರತೀಯರ ಮನಗೆದ್ದಿರುವ ಮಾರುತಿ ವಿಟಾರ ಬ್ರಿಜಾ ಇದೀಗ ಪೆಟ್ರೋಲ್ ವೆರಿಯೆಂಟ್ ಬಿಡುಗಡೆಯಾಗುತ್ತಿದೆ. 1.5 ಲೀಟರ್ ಪೆಟ್ರೋಲ್ ಎಂಜಿನ್ ಕಾರು ಹೆಚ್ಚುವರಿ ಫೀಚರ್ಸ್ ಹಾಗೂ ಹೆಚ್ಚು ಬಣ್ಣಗಳಲ್ಲೂ ಬಿಡುಗಡೆಯಾಗಲಿದೆ.

ಎರ್ಟಿಗಾ 1.5


ಮಾರುತಿ ಸುಜುಕಿ ಸಂಸ್ಥೆಯ ನೂತನ ಎರ್ಟಿಗಾ ಕಾರು ಈಗಾಗಲೇ ಬಿಡುಗಡೆಯಾಗಿದೆ. ಇದೀಗ 7 ಸೀಟರ್ ಎರ್ಟಿಗಾ ಕಾರು ಬಿಡುಗಡೆಯಾಗುತ್ತಿದೆ. 1.5 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್ ವೆರೆಯೆಂಟ್ ಲಭ್ಯವಿದೆ.

ಸಿಯಾಜ್ 1.5 


ಮಾರುತಿ ಸುಜುಕಿ  ಸಂಸ್ಥೆಯ ಸೆಡಾನ್ ಕಾರು ಸಿಯಾಜ್ ಈ ವರ್ಷ ಅಪ್‌ಡೇಟ್ ಆಗುತ್ತಿದೆ. 1.5 ಲೀಟರ್ ಎಂಜಿನ್‌ನೊಂದಿಗೆ ಸಿಯಾಜ್ ರಸ್ತೆಗಿಳಿಯುತ್ತಿದೆ.  ವಿನ್ಯಾಸದಲ್ಲಿ ಹೆಚ್ಚಿನ ಯಾವುದೇ ಬದಲಾವಣೆಗಳಿಲ್ಲದೆ ಬಿಡುಗಡೆಯಾಗಲಿದೆ.
 

click me!