ಶೀಘ್ರದಲ್ಲೇ ಎಪ್ರಿಲಿಯಾ 300 ಸಿಸಿ ಆಟೋಮ್ಯಾಟಿಕ್ ಸ್ಕೂಟರ್!

Published : Jan 19, 2019, 03:37 PM IST
ಶೀಘ್ರದಲ್ಲೇ ಎಪ್ರಿಲಿಯಾ 300 ಸಿಸಿ ಆಟೋಮ್ಯಾಟಿಕ್ ಸ್ಕೂಟರ್!

ಸಾರಾಂಶ

ಎಪ್ರಿಲಿಯಾ ಸ್ಕೂಟರ್ ಇದೀಗ 300 ಸಿಸಿ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ರಾಯಲ್ ಎನ್‌ಪೀಲ್ಡ್ , ಜಾವಾ ಬೈಕ್‌ನಷ್ಟು ಪವರ್‌ಫುಲ್ ಎಂಜಿನ್ ಹೊಂದಿರುವ ಈ ನೂತನ ಸ್ಕೂಟರ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.  

ಗೋವಾ(ಜ.19): ಇಟಲಿ ಮೂಲದ ಎಪ್ರಿಲಿಯಾ ಇದೀಗ ಅಟೋಮ್ಯಾಟಿಕ್ ಸ್ಕೂಟರ್ ಬಿಡುಗಡೆ ಮಾಡಲು ಮುಂದಾಗಿದೆ. ಎಪ್ರಿಲಿಯಾ 300ಸಿಸಿ ಸ್ಕೂಟರ್ ಭಾರತದ ಮಾರುಕಟ್ಟೆಗೆ ಹೊಸದು. ಎಪ್ರಿಲಿಯಾ SR max 300 ಸ್ಕೂಟರ್ ಈಗಾಗಲೇ ಗೋವಾ ಡೀಲರ್‌ ಎಕ್ಸ್ಪೋ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಅಲ್ಟೋ to ಬ್ರಿಜಾ: ಈ ವರ್ಷ ಬಿಡುಗಡೆಯಾಲಿದೆ 12 ಮಾರುತಿ ಕಾರು!

ಹೊಸ ವಿನ್ಯಾಸ ಹೆಚ್ಚು ಕಡಿಮೆ ಈ ವಿನ್ಯಾಸದಲ್ಲಿ ಭಾರತದಲ್ಲಿ ಯಾವುದೇ ಸ್ಕೂಟರ್‌ಗಳಿಲ್ಲ. 300 ಸಿಸಿ ಎಂಜಿನ್ ಹೊಂದಿರುವುದರಿಂದ ಲಾಂಗ್ ರೈಡ್‌ಗೂ ಈ ಸ್ಕೂಟರ್ ಅನೂಕೂಲಕರವಾಗಿದೆ. ಫುಲ್ ಅಟೋಮ್ಯಾಟಿಕ್ ಹೊಂದಿರುವ  ಈ ಸ್ಕೂಟರ್ ಭಾರತದಲ್ಲಿ ಹೊಸ ಸಂಚಲನ ಮೂಡಿಸಲಿದೆ ಅನ್ನೋದೇ ಕಂಪೆನಿ ವಿಶ್ವಾಸ.

ಇದನ್ನೂ ಓದಿ: ರಸ್ತೆಗಿಳಿಯುವಂತಿಲ್ಲ 2 ಸ್ಟ್ರೋಕ್ ವಾಹನ- ಯಮಹಾ RX100,ಯಜೆಡಿ ಗತಿಯೇನು?

278 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್, 22ps ಪವರ್ ಹಾಗೂ 23Nm ಟಾರ್ಕ್ ಉತ್ವಾದಿಸಲಿದೆ. ಇದು ಭಾರದದ ಮೊಟ್ಟ ಮೊದಲ ಪವರ್‌ಫುಲ್ ಸ್ಕೂಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಡ್ಯುಯೆಲ್ ಚಾನೆಲ್ ABS ಹೊಂದಿರುವ ಈ ನೂತನ ಸ್ಕೂಟರ್ ಬೆಲೆ ಬರೋಬ್ಬರಿ 2 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
 

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ