ಆಟೋ ಮಾರಟ ಕುಸಿತಕ್ಕೆ ಕಾರಣ ಬಿಚ್ಚಿಟ್ಟ ಬಜಾಜ್; ನಿಟ್ಟುಸಿರು ಬಿಟ್ಟ ಕೇಂದ್ರ!

By Web Desk  |  First Published Sep 11, 2019, 10:44 PM IST

ಭಾರತದಲ್ಲಿ ವಾಹನ ಮಾರಾಟ ಕುಸಿತಕ್ಕೆ GST ಕಾರಣ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಇತ್ತ ಕೇಂದ್ರ ಸರ್ಕಾರ ಕೂಡ ಆಟೋಮೊಬೈಲ್ ಕಂಪನಿಗಳ ಮಾತಿನ ಮೇರೆಗೆ GST ಕಡಿತದ ಕುರಿತು ಸಭೆ ಸೇರಲಿದೆ. ಆದರೆ ವಾಹನ ಮಾರಾಟ ಕುಸಿತಕ್ಕೆ GST ಬದಲು, ಕಾರಣ ಬೇರೆಯೇ ಇದೆ ಎಂದು ಬಜಾಜ್ ಹೇಳಿದೆ.  


ಮುಂಬೈ(ಸೆ.11): ಭಾರತದಲ್ಲಿ ವಾಹನ ಮಾರಾಟ ಪಾತಾಳಕ್ಕಿಳಿದು ಸರಿ ಸುಮಾರು 6 ತಿಂಗಳು ಕಳೆದಿದೆ. ದಾಖಲೆ ಪ್ರಮಾಣದಲ್ಲಿ ವಾಹನ ಮಾರಾಟದಲ್ಲಿ ಇಳಿಕೆಯಾಗಿದೆ. ಆಟೋಮೊಬೈಲ್ ಕಂಪನಿಗಳು ನಷ್ಟ ಅನುಭವಿಸುತ್ತಿದೆ. ಇದಕ್ಕೆಲ್ಲ ಕೇಂದ್ರ ಸರ್ಕಾರದ GST(ತೆರಿಗೆ) ಕಾರಣ ಎಂದು ಬಹುತೇಕ ಎಲ್ಲಾ ವಾಹನಗಳ ಕಂಪನಿಗಳು ಹೇಳುತ್ತಿವೆ. ಇಷ್ಟೇ ಅಲ್ಲ GST ಕಡಿತಗೊಳಿಸಲು ಮನವಿ ಮಾಡಿದೆ. ಆದರೆ ಭಾರತದಲ್ಲಿ ವಾಹನ ಮಾರಟ ಕುಸಿತಕ್ಕೆ ಅಸಲಿ ಕಾರಣ ಬೇರೆ ಇದೆ ಎಂದು ಬಜಾಜ್ ಮೋಟಾರ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಹೇಳಿದ್ದಾರೆ.

ಇದನ್ನೂ ಓದಿ: ವಾಹನ ಸೇಲ್‌ 2 ದಶಕಗಳಲ್ಲೇ ಅತ್ಯಂತ ಕನಿಷ್ಠ!

Tap to resize

Latest Videos

undefined

ಆಟೋಮೊಬೈಲ್ ಕಂಪನಿಗಳು ನಿಗದಿತ  ಪ್ರಮಾಣಕ್ಕಿಂತ ಹೆಚ್ಚು ವಾಹನ ಉತ್ಪಾದನೆ ಹಾಗೂ ಹೊಸ ವಾಹನಗಳನ್ನು ಉತ್ಪಾದಿಸಿ ಸಂಗ್ರಹ ಮಾಡಿಟ್ಟುಕೊಂಡಿದ್ದೇ ಭಾರತದಲ್ಲಿ ವಾಹನ ಮಾರಾಟ ಕುಸಿತಕ್ಕೆ ಕಾರಣ ಎಂದು ರಾಜೀವ್ ಬಜಾಜ್ ಹೇಳಿದ್ದಾರೆ. ಇದಕ್ಕಾಗಿ GST ಕಡಿತಗೊಳಿಸಬೇಕಾಗಿಲ್ಲ. ಇದು ಅಟೋಮೊಬೈಲ್ ಕಂಪನಿಗಳ ಅಸಮರ್ಪಕ ಪ್ಲಾನ್ ಕಾರಣ ಎಂದಿದ್ದಾರೆ.

ಇದನ್ನೂ ಓದಿ: ಕಾರು ಕಂಪನಿಗಳಿಂದ ಭರ್ಜರಿ ಆಫರ್‌: ಬೆಲೆಯಲ್ಲಿ ಭಾರೀ ಕಡಿತ!

 ಆಟೋಮೊಬೈಲ್ ಕಂಪನಿಗಳ ಮನವಿ ಮೇರೆಗೆ GST ಕೌನ್ಸಿಲ್ ಸಭೆಗೂ ಮುನ್ನವೇ ರಾಜೀವ್ ಬಜಾಜ್ ಹೇಳಿಕೆ ಭಾರತದ ವಾಹನ ಕಂಪನಿಗಳಿಗೆ ಆಘಾತ ತಂದಿದೆ. ರಾಜೀವ್ ಬಜಾಜ್ ಮಾತಿನಿಂದ ಕೇಂದ್ರ GST ಕಡಿತಕ್ಕೆ ಮುಂದಾಗುವುದೇ ಅನ್ನೋ ಅನುಮಾನವು ಕಾಡುತ್ತಿದೆ. ಆದರೆ ರಾಜೀವ್ ಬಜಾಜ್ ಮಾತಿನಿಂದ ಕೇಂದ್ರ ಸರ್ಕಾರ ನಿಟ್ಟುಸಿರುಬಿಟ್ಟಿದೆ.

click me!