ಹೊಸ ಟ್ರಾಫಿಕ್ ರೂಲ್ಸ್: ನಿಯಮ ಉಲ್ಲಂಘಿಸುವವರಿಗೆ ಸಿಗಲಿದೆ ಫ್ರಿ ಹೆಲ್ಮೆಟ್!

By Web Desk  |  First Published Sep 11, 2019, 8:12 PM IST

ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿದರೆ ದಂಡ ಕಟ್ಟಲೇ ಬೇಕು. ಇದೀಗ ಮತ್ತೆ ಇದೇ ತಪ್ಪನ್ನು ಮಾಡದಂತೆ ಪೊಲೀಸರು ಉಚಿತವಾಗಿ ಹೆಲ್ಮೆಟ್ ನೀಡುತ್ತಿದ್ದಾರೆ. ಈ ಮೂಲಕ ಜನರಲ್ಲಿ ಟ್ರಾಫಿಕ್ ನಿಯಮ ಪಾಲನೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.


ಭುಬನೇಶ್ವರ್(ಸೆ.11): ಹೊಸ ಟ್ರಾಫಿಕ್ ನಿಯಮ ಉಲ್ಲಂಘಿಸಿ ದುಬಾರಿ ದಂಡ  ಕಟ್ಟುವುದಕ್ಕಿಂತ, ನಿಯಮ ಪಾಲಿಸುವುದೇ ಉತ್ತಮ ಅನ್ನೋ ಅಭಿಪ್ರಾಯ ಸದ್ಯ ಜನರಲ್ಲಿ ಮೂಡುತ್ತಿದೆ. ನಿಯಮ ಉಲ್ಲಂಘಿಸಿದರೆ ಸಾಕು, ನಿಮಿಷದಲ್ಲೇ ಪೊಲೀಸರು ಚಲನ್ ಕೈಸೇರುತ್ತೆ. ದಂಡ  ಕಟ್ಟದೇ ಇರುವ ಹಾಗಿಲ್ಲ, ದುಬಾರಿ ದಂಡ ಕಟ್ಟಲು ದುಡ್ಡಿಲ್ಲ ಅನ್ನೋ ಪರಿಸ್ಥಿತಿ ಸವಾರರದ್ದು. ಇದೀಗ ಹೆಲ್ಮೆಟ್ ರಹಿತ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರೇ ಉಚಿತ ಹೆಲ್ಮೆಟ್ ನೀಡುತ್ತಿದ್ದಾರೆ.

ಇದನ್ನೂ ಓದಿ: ₹100 ಪಾವತಿಸಿದರೆ ಸಾಕು, ದುಬಾರಿ ದಂಡದಿಂದ ಸಿಗಲಿದೆ ಮುಕ್ತಿ!

Latest Videos

ಈ ಉಚಿತ ಹೆಲ್ಮೆಟ್ ಭಾಗ್ಯ ಒಡಿಶಾದ ಭುಬನೇಶ್ವರ್ ನಗರದಲ್ಲಿ ಮಾತ್ರ. ಹೆಲ್ಮೆಟ್ ರಹಿತ ಸವಾರನಿಗೆ ಭುಬನೇಶ್ವರ್ ಪೊಲೀಸರು ಉಚಿತವಾಗಿ ಹೆಲ್ಮೆಟ್ ನೀಡುತ್ತಿದ್ದಾರೆ. ಇದರ ಜೊತೆಗೆ 500 ರೂಪಾಯಿ ದಂಡ ಕೂಡ ಹಾಕುತ್ತಿದ್ದಾರೆ. ನಿಯಮ ಉಲ್ಲಂಘನೆಗೆ 500 ರೂಪಾಯಿ ದಂಡ. ಆದರೆ ಮತ್ತೆ ಇದೇ ತಪ್ಪು ಮಾಡದಂತೆ ಪೊಲೀಸರೇ ಉಚಿತ ಹೆಲ್ಮೆಟ್ ನೀಡಿ ಇದೀಗ ದೇಶದ ಗಮನಸೆಳೆದಿದ್ದಾರೆ.

 

Bhubaneswar: Violators fined with Rs 500 for not wearing helmets, are being given free-of-cost helmets by the police. The two-wheeler riders who are following traffic rules are being given a 'Thank You' card. pic.twitter.com/GkBhkbr5kd

— ANI (@ANI)

ಇದನ್ನೂ ಓದಿ: ಹೊಸ ಟ್ರಾಫಿಕ್ ರೂಲ್ಸ್: ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಬ್ಬರಿಗೂ ಸಿಗಲಿದೆ ಇನ್ಶೂರೆನ್ಸ್!

ಭುಬನೇಶ್ವರ್ ಟ್ರಾಫಿಕ್ ಪೊಲೀಸ್ ಕಮಿಶನ್ ಸಾಗರಿಕಾ ನಾಥ್  ಹೊಸ ಯೋಜನೆ ಜಾರಿಗೆ ತಂದಿದ್ದಾರೆ. ನಿಯಮ ಉಲ್ಲಂಘನೆಗೆ ದಂಡ ಕಟ್ಟಬೇಕು. ಇದರ ಜೊತೆಗೆ ಜಾಗೃತಿಯನ್ನೂ ಮೂಡಿಸುತ್ತಿದ್ದೇವೆ. ಮುಂದೆ ನಿಯಮ ಉಲ್ಲಂಘಿಸದಂತೆ ಹೆಲ್ಮೆಟ್ ಉಚಿತವಾಗಿ ನೀಡುತ್ತಿದ್ದೇವೆ ಎಂದು ಸಾಗರಿಕಾ ನಾಥ್ ಹೇಳಿದ್ದಾರೆ.

click me!